ಶ್ರೀಶೈಲಂ ಕಾಲುವೆ ಸುರಂಗ ಕುಸಿತಕ್ಕೆ ಕಾರಣವೇನು? ಸಂಪರ್ಕಕ್ಕೆ ಸಿಗದ 14 ಕಿ.ಮೀ ಒಳಗಿರೋ 8 ಕಾರ್ಮಿಕರು

Published : Feb 23, 2025, 08:50 AM ISTUpdated : Feb 23, 2025, 08:56 AM IST
ಶ್ರೀಶೈಲಂ ಕಾಲುವೆ ಸುರಂಗ ಕುಸಿತಕ್ಕೆ ಕಾರಣವೇನು? ಸಂಪರ್ಕಕ್ಕೆ ಸಿಗದ 14 ಕಿ.ಮೀ ಒಳಗಿರೋ 8 ಕಾರ್ಮಿಕರು

ಸಾರಾಂಶ

Srisailam tunnel collapse: ತೆಲಂಗಾಣದ ಶ್ರೀಶೈಲಂ ಕಾಲುವೆ ಸುರಂಗ ಕುಸಿದು 8 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಉತ್ತರಾಖಂಡ ಮಾದರಿಯ ರಕ್ಷಣೆಗೆ ಸರ್ಕಾರ ಮುಂದಾಗಿದೆ.

ಹೈದರಾಬಾದ್: ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ) ನಿರ್ಮಾಣ ಹಂತದ ಸುರಂಗದ ಮೇಲ್ಭಾಗ ಕುಸಿದಿದ್ದು, ಕನಿಷ್ಠ 8 ಕೆಲಸಗಾರರು ಸಿಲುಕಿದ್ದಾರೆ. ಈ ಘಟನೆ 2 ವರ್ಷ ಹಿಂದೆ ಸಂಭವಿಸಿದ ಉತ್ತರಾಖಂಡ ಸುರಂಗ ಕುಸಿತದ ಘಟನೆಯನ್ನೇ ನೆನಪಿಸಿದೆ.14 ಕಿ.ಮೀ.ನಷ್ಟು ಸುರಂಗದ ಒಳಗೆ ಕಾರ್ಮಿಕರು ಸಿಲುಕಿದ್ದಾರೆ. ಅವರ ರಕ್ಷಣೆಗೆ ಉತ್ತರಾಖಂಡದಲ್ಲಿ ಶ್ರಮ ಪಟ್ಟಿದ್ದ ಸುರಂಗ ತಜ್ಞರು, ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ಗೆ ಮೊರೆ ಹೋಗಲಾಗಿದೆ. ಶೀಘ್ರ ಅವರು ಆಗಮಿಸಿ ರಕ್ಷಣಾ ಕಾರ್ಯ ಶುರು ಮಾಡಲಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಆಂಧ್ರ ನೀರಾವರಿ ಸಚಿವ ಉತ್ತಮಕುಮಾರ್‌ ರೆಡ್ಡಿ ಹೇಳಿದ್ದಾರೆ. 

ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರ ಸಿಎಂ ರೇವಂತ ರೆಡ್ಡಿ ಅವರ ಜತೆ ಫೋನ್‌ನಲ್ಲಿ ಮಾತನಾಡಿ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಇಬ್ಬರು ಎಂಜಿನಿಯರ್‌ಗಳು, ಇಬ್ಬರು ಮಶಿನ್ ಆಪರೇಟರುಗಳು ಹಾಗೂ 4 ಕಾರ್ಮಿಕರು ಸಿಲುಕಿಕೊಂಡವರು.

ಆಗಿದ್ದೇನು?:
ಕಾರ್ಮಿಕರು ಕೆಲಸದ ನಿಮಿತ್ತ 14 ಕಿ.ಮೀ.ನಷ್ಟು ಒಳಗೆ ಹೋದಾಗ ಸುರಂಗದ ಮೇಲ್ಭಾಗ ಕುಸಿದು ಅವಘಡ ಸಂಭವಿಸಿದೆ. 200 ಮೀ. ಉದ್ದಕ್ಕೂ ಕೆಸರು ತುಂಬಿಕೊಂಡಿದೆ. ಈ ವೇಳೆ ದೊಡ್ಡ ಸದ್ದು ಕೂಡ ಕೇಳಿದೆ ಎನ್ನಲಾಗಿದ್ದು, ಇದು ಭೂಗರ್ಭದಲ್ಲಿ ಆದ ವ್ಯತ್ಯಾಸ ಎನ್ನಲಾಗಿದೆ. 

ಈ ಕುರಿತು ಮಾಹಿತಿ ನೀಡಿದ ಸಚಿವ ಉತ್ತಮಕುಮಾರ್‌ ರೆಡ್ಡಿ ಹಾಗೂ ಜಿಲ್ಲಾಧಿಕಾರಿ ಬಿ. ಸಂತೋಷ್ ‘ಸುರಂಗದ ಒಳಗೆ ಸಿಲುಕಿರುವವರೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ಏರ್ ಚೇಂಬರ್ ಮತ್ತು ಕನ್ವೇಯರ್ ಬೆಲ್ಟ್ ಎರಡೂ ಕುಸಿದಿವೆ. 14 ಕಿ.ಮೀ.ನಷ್ಟು ಒಳಗೆ ಸಿಲುಕಿರುವುದು ಸವಾಲು. ಆಂತರಿಕ ಸಂವಹನ ಕಾರ್ಯವಿಧಾನವೂ ವಿಫಲವಾಗಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತಪ್ಪಿನಿಂದ ಪಾಠ ಕಲಿತ ಸರ್ಕಾರ, ಸಿಲ್‌ಕ್ಯಾರಾ ಬಳಿ ನೆಲಸಮ ಮಾಡಿದ್ದ ಮಂದಿರ ನಿರ್ಮಾಣಕ್ಕೆ ತೀರ್ಮಾನ!

ನೆರವಿಗೆ ಸರ್ಕಾರ:
ಮುಖ್ಯಮಂತ್ರಿ ಎಂ. ರೇವಂತ ರೆಡ್ಡಿ ಅವರು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಅವರ ನಿರ್ದೇಶನದಂತೆ ರಾಜ್ಯ ನೀರಾವರಿ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ, ನೀರಾವರಿ ಸಲಹೆಗಾರ ಆದಿತ್ಯನಾಥ್ ದಾಸ್ ಮತ್ತು ಇತರ ಅಧಿಕಾರಿಗಳು ವಿಶೇಷ ಹೆಲಿಕಾಪ್ಟರ್‌ನಲ್ಲಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.  ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಕೇಂದ್ರ ಕಲ್ಲಿದ್ದಲು ಸಚಿವ ಜಿ. ಕಿಶನ್ ರೆಡ್ಡಿ, ಒಳಗೆ ಸಿಲುಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವಂತೆ ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ 17 ದಿನ ಸಿಲುಕಿದ್ದ 41 ಜನ:
ಉತ್ತರಾಖಂಡದ ಉತ್ತರಕಾಶಿ ಬಳಿ 2023ರ ನ.12ರಂದು ಸುರಂಗ ಕುಸಿದು 41 ಕಾರ್ಮಿಕರು ಸಿಲುಕಿದ್ದರು. 17 ದಿನಗಳ ಹರಸಾಹಸದ ನಂತರ ಅವರನ್ನು ನ.28ರಂದು ರಕ್ಷಿಸಲಾಗಿತ್ತು.

ಇದನ್ನೂ ಓದಿ: ದೇವರಿಗೆ ಧನ್ಯವಾದ ಹೇಳಬೇಕು ಎಂದ ಆಸೀಸ್ ತಜ್ಞ: ಸಿಲ್‌ಕ್ಯಾರ ಸುರಂಗ ಭೂಕುಸಿತ ಸಿನಿಮಾ ಮಾಡಲು ಕ್ಯು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..