MSP ಕಾನೂನು: ರೈತರು ಮತ್ತು ಸರ್ಕಾರದ ನಡುವೆ ಸಭೆ ಸಕಾರಾತ್ಮಕ

Published : Feb 23, 2025, 08:13 AM ISTUpdated : Feb 23, 2025, 08:43 AM IST
MSP ಕಾನೂನು: ರೈತರು ಮತ್ತು ಸರ್ಕಾರದ ನಡುವೆ ಸಭೆ ಸಕಾರಾತ್ಮಕ

ಸಾರಾಂಶ

ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸುವ ಬೇಡಿಕೆಯೊಂದಿಗೆ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಸರ್ಕಾರದ 2ನೇ ಸುತ್ತಿನ ಸಂಧಾನ ಸಭೆ ಸಕಾರಾತ್ಮಕವಾಗಿ ಮುಗಿದಿದೆ. ಮುಂದಿನ ಸಭೆ ಮಾರ್ಚ್ 19 ರಂದು ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ರೂಪಿಸಬೇಕು ಎಂಬುದು ಸೇರಿ ಹಲವು ಬೇಡಿಕೆಯೊಂದಿಗೆ 1 ವರ್ಷದಿಂದ ಹರ್ಯಾಣ, ಪಂಜಾಬ್‌ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಜತೆಗಿನ 2ನೇ ಸುತ್ತಿನ ಸಂಧಾನ ಸಭೆ ಶನಿವಾರ ಸಕಾರಾತ್ಮಕವಾಗಿ ಮುಗಿದಿದೆ. ಮುಂದಿನ ಸಭೆ ಮಾ.19ಕ್ಕೆ ನಿಗದಿ ಆಗಿದೆ.

ಸಭೆಯಲ್ಲಿ ಕೇಂದ್ರದ ಪ್ರತಿನಿಧಿಗಳಾಗಿ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್‌ ಹಾಗೂ ಪಡಿತರ ಸಚಿವ ಪ್ರಹ್ಲಾದ ಜೋಶಿ ಪಾಲ್ಗೊಂಡಿದ್ದರು.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಚೌಹಾಣ್‌, ‘ಚರ್ಚೆ ಚೆನ್ನಾಗಿತ್ತು. ರೈತರ ಕಲ್ಯಾಣದ ಬಗ್ಗೆ ಮೋದಿ ಸರ್ಕಾರದ ಆದ್ಯತೆಗಳನ್ನು ನಾವು ವಿವರಿಸಿದ್ದೇವೆ. ಈ ಬಗ್ಗೆ ರೈತ ನಾಯಕರ ಪ್ರತಿಕ್ರಿಯೆ ಕೇಳಿದ್ದೇವೆ. ಚರ್ಚೆ ಮುಂದುವರಿಯುತ್ತದೆ. ಮುಂದಿನ ಸಭೆ ಮಾ.19 ರಂದು ಚಂಡೀಗಢದಲ್ಲಿ ನಡೆಯಲಿದೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..