ದೇಶದ ಅಭಿವೃದ್ಧಿಗೆ ದ.ಭಾರತ ರಾಜ್ಯಗಳ ಕೊಡುಗೆ ಹೆಚ್ಚು; ಜಿಡಿಪಿಯಲ್ಲಿ ಶೇ.30, ತಲಾ ಆದಾಯದಲ್ಲೂ ಮುಂದು!

By Kannadaprabha NewsFirst Published Sep 19, 2024, 7:58 AM IST
Highlights

ದೇಶದ ಅಭಿವೃದ್ಧಿಗೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಮಹತ್ವದ ಕೊಡುಗೆ ನೀಡುತ್ತಿರುವ ಅಂಶವನ್ನು ಸ್ವತಃ ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿ ತನ್ನ ವರದಿಯೊಂದಲ್ಲಿ ಎತ್ತಿ ಹೇಳಿದೆ

ನವದೆಹಲಿ (ಸೆ.19): ಜನಸಂಖ್ಯಾ ನಿಯಂತ್ರಣ ಸೇರಿದಂತೆ ವಿವಿಧ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ದೂರುಗಳ ಬೆನ್ನಲ್ಲೇ, ದೇಶದ ಅಭಿವೃದ್ಧಿಗೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಮಹತ್ವದ ಕೊಡುಗೆ ನೀಡುತ್ತಿರುವ ಅಂಶವನ್ನು ಸ್ವತಃ ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿ ತನ್ನ ವರದಿಯೊಂದಲ್ಲಿ ಎತ್ತಿ ಹೇಳಿದೆ.

ಇಡೀ ದೇಶದ ಒಟ್ಟು ಸಮಗ್ರ ಉತ್ಪನ್ನ (ಜಿಡಿಪಿ)ದಲ್ಲಿ ದಕ್ಷಿಣದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳು ಪಾಲು ಶೇ.30ರಷ್ಟಿದೆ ಎಂದು ಆರ್ಥಿಕ ಸಲಹಾ ಮಂಡಳಿ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಸಲ್ಲಿಸಿದ ವರದಿ ಹೇಳಿದೆ. ಜೊತೆಗೆ ತಲಾದಾಯದಲ್ಲೂ ದೇಶದ ಇತರೆ ಭಾಗಗಳನ್ನು ದಕ್ಷಿಣ ವಲಯ ಮೀರಿಸಿದೆ ಎಂದು ವರದಿ ಹೇಳಿದೆ.

Latest Videos

'ಒಂದು ದೇಶ ಒಂದು ಚುನಾವಣೆ' ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವಕ್ಕೆ ಮಾರಕ: ಮಲ್ಲಿಕಾರ್ಜುನ ಖರ್ಗೆ

ಜಿಡಿಪಿ ಕೊಡುಗೆ ಮತ್ತು ತಲಾದಾಯದಲ್ಲಿ ದಕ್ಷಿಣದ ರಾಜ್ಯಗಳಿಗಿಂತ ಇತರೆ ರಾಜ್ಯಗಳು ಅದರಲ್ಲೂ ಈಶಾನ್ಯದ ರಾಜ್ಯಗಳು ಬಹಳ ಹಿಂದುಳಿದಿದೆ. ವಿಶೇಷವಾಗಿ 1960-61ರ ಅವಧಿಯಲ್ಲಿ ಜಿಡಿಪಿಯ ಶೇ.10.5% ಕೊಡುಗೆ ನೀಡುತ್ತಿದ್ದ ಪಶ್ಚಿಮ ಬಂಗಾಳದ ಪಾಲು ಇದೀಗ ಶೇ.5.6ಕ್ಕೆ ಕುಸಿದಿದೆ. ರಾಷ್ಟ್ರೀಯ ಸರಾಸರಿಯ ಶೇ.127.5% ರಷ್ಟಿದ್ದ ಪಶ್ಚಿಮ ಬಂಗಾಳದ ತಲಾ ಆದಾಯ ಶೇ.83.7%ಕ್ಕೆ ಕುಸಿದಿದೆ. ಐತಿಹಾಸಿಕ ಲಾಭ ಮತ್ತು ವ್ಯೂಹಾತ್ಮಕವಾಗಿ ಆಯಕಟ್ಟಿನ ಜಾಗದಲ್ಲಿರುವ ಹೊರತಾಗಿಯೂ ಬಂಗಾಳ ಕಳಪೆ ಸಾಧನೆ ಮಾಡುತ್ತಿದೆ. ಇದಕ್ಕೆ ಕಾರಣವಾದ ನೀತಿಗಳು ಮತ್ತು ಅಂಶಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ವರದಿ ಹೇಳಿದೆ.

ಜಿಡಿಪಿಗೆ ಮಹಾರಾಷ್ಟ್ರದ ಕೊಡುಗೆ ಶೇ.15ರಿಂದ ಶೇ.13.3ಕ್ಕೆ ಕುಸಿದಿದ್ದರೂ, ಅದು ಅತಿ ಹೆಚ್ಚು ಕೊಡುಗೆ ಕೊಡುವ ರಾಜ್ಯ ಎಂಬ ಪಟ್ಟವನ್ನು ಕಾಯ್ದಿರಿಸಿಕೊಂಡಿದೆ. ಉತ್ತರ ರಾಜ್ಯಗಳ ಪೈಕಿ ದೆಹಲಿ ಅತಿ ಹೆಚ್ಚು ತಲಾದಾಯ ಗಳಿಸಿದ್ದು, ಹರ್ಯಾಣ ಕೂಡ ಉತ್ತಮ ಪ್ರದರ್ಶನ ತೋರಿದೆ. 2000 ಬಳಿಕ ಪಂಜಾಬ್‌ನ ತಲಾ ಆದಾಯ ಕುಸಿಯುತ್ತಿದ್ದು, ಹರ್ಯಾಣ ಆರ್ಥಿಕವಾಗಿ ಮುಂದುವರೆದಿದೆ.

ಜಿಡಿಪಿ ಲೆಕ್ಕಾಚಾರದಲ್ಲಿ ಬಡ ರಾಜ್ಯಗಳೆಂದು ಗುರುತಿಸಿಕೊಂಡಿರುವ ಉತ್ತರ ಪ್ರದೇಶ 1960-61ರಲ್ಲಿ ಹೊಂದಿದ್ದ ಶೇ.14ರ ಪಾಲಿನಿಂದ ಇದೀಗ ಶೇ.9.5ಕ್ಕೆ ಕುಸಿದಿದೆ. ಇನ್ನೊಂದೆಡೆ ಬಿಹಾರ (ಶೇ.4.3%)ದ ಕೊಡುಗೆಯೂ ಕಡಿಮೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ತಲಾದಾಯಾ ರಾಷ್ಟ್ರೀಯ ಸರಾಸರಿಯ ಶೇ.250.8ರಷ್ಟಿದ್ದು, ಇದು ದೇಶದ ಸರಾಸರಿಗಿಂತ 2.5 ಪಟ್ಟು ಅಧಿಕ. ಈಶಾನ್ಯ ರಾಜ್ಯವಾದ ಬಿಹಾರ ಅಭಿವೃದ್ಧಿಯಲ್ಲಿ ಎಲ್ಲಾ ರಾಜ್ಯಗಳಿಗಿಂತ ಹಿಂದಿದ್ದು, ಇದೇ ಸ್ಥಾನದಲ್ಲಿ ಸ್ಥಿರವಾಗಿದೆ. ಇದಕ್ಕೆ ವಿರುದ್ಧವಾಗಿ ಒಡಿಶಾ ಉತ್ತಮ ಸುಧಾರಣೆ ಕಂಡಿದೆ ಎಂದು ವರದಿ ಹೇಳಿದೆ.

ಮೋದಿ ಜೊತೆ ಗಣೇಶ ಪೂಜೆ ಮಾಡೋಕೆ ಸಮಯ ಇದೆ, ಉಮರ್‌ ಖಾಲಿದ್ ವಿಚಾರಣೆ ಮಾಡೋಕೆ ಆಗಲ್ವಾ? ಸಿಜೆಐಗೆ ಸ್ವರಾ ಭಾಸ್ಕರ್‌ ಆವಾಜ್‌!

 ಕರ್ನಾಟಕದಕೊಡುಗೆ 8.2%

ನವದೆಹಲಿ: 1990ರ ದಶಕದಲ್ಲಿ ದೇಶದಲ್ಲಿ ಜಾರಿಗೊಳಿಸಲಾದ ಬೃಹತ್ ಪ್ರಮಾಣದ ಉದಾರೀಕರಣದ ನೀತಿಯ ಬಳಿಕ ದಕ್ಷಿಣದಲ್ಲಿ ಕರ್ನಾಟಕ ಹೊಸ ಶಕ್ತಿಕೇಂದ್ರವಾಗಿ ಉದಯಿಸಿತು. 1960-61ರಲ್ಲಿ ದೇಶದ ಜಿಡಿಪಿಗೆ ಕರ್ನಾಟಕ ಕೊಡುಗೆ ಶೇ.5.4ರಷ್ಟಿತ್ತು. 2000-01ರಲ್ಲಿ ಅದು ಶೇ.6.2ಕ್ಕೆ ಏರಿತು. 2023-24ರಲ್ಲಿ ಈ ಪ್ರಮಾಣ ಶೇ.8.2ಕ್ಕೆ ಏರಿದೆ. ಅದೇ ರೀತಿ ತಲಾದಾಯದಲ್ಲೂ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಮೊದಲ ಎರಡು ಸ್ಥಾನಗಳಲ್ಲಿ ಕ್ರಮವಾಗಿ ದೆಹಲಿ ಮತ್ತು ತೆಲಂಗಾಣ ರಾಜ್ಯಗಳಿವೆ ಎಂದು ವರದಿ ಹೇಳಿದೆ.

click me!