ಹಬ್ಬದ ಪ್ರಯುಕ್ತ ಬೆಂಗಳೂರು ಸಂಪರ್ಕಿಸುವ ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ!

By Chethan Kumar  |  First Published Sep 30, 2024, 5:06 PM IST

 ಹಬ್ಬದ ವೇಳೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಇದೀಗ ಬೆಂಗಳೂರಿನಿಂದ ಹೊರಡುವ ಹಾಗೂ ಸಂಪರ್ಕಿಸುವ ಕೆಲ ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ ಮಾಡಲಾಗುತ್ತಿದೆ. 


ಬೆಂಗಳೂರು(ಸೆ.30) ಸಾಲು ಸಾಲು ಹಬ್ಬಗಳಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಇದೀಗ ರೈಲ್ವೇ ಇಲಾಕೆ ಹೆಚ್ಚುವರಿ ರೈಲುಗಳ ಜೊತೆ ಇರುವ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಜೋಡಣೆ ಮಾಡಲಾಗುತ್ತಿದೆ.  ಈ ಪೈಕಿ ಬೆಂಗಳೂರು ಸಂಪರ್ಕಿಸುವ ರೈಲುಗಳಿಗೆ ಇದೀಗ ಹೆಚ್ಚುವರಿ ಬೋಗಿಗಳ ಜೋಡಣೆ ಮಾಡಲಾಗುತ್ತಿದೆ.  ಈ ಮೂಲಕ ಸಂಚಾರ ದಟ್ಟಣೆ ಕಡಿಮೆ ಮಾಡಲು ಭಾರತೀಯ ರೈಲ್ವೇ ಮುಂದಾಗಿದೆ. ಸದ್ಯ ತಾತ್ಕಾಲಿಕ ಬೋಗಿಗಳನ್ನು ಪೂರ್ವ ಕರಾವಳಿ ರೈಲ್ವೇ ಇಲಾಖೆ ಜೋಡಿಸುತ್ತಿದೆ.

ಈ ಕುರಿತು ಹುಬ್ಬಳ್ಳಿಯ ನೈರುತ್ಯ ರೈಲ್ವೆ  ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆ ಹೊರಡಿಸಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬೋಗಿಗಳ ಅಳವಡಿಸಲಾಗುತ್ತಿದೆ ಎಂದಿದ್ದಾರೆ. 

Tap to resize

Latest Videos

ದಕ್ಷಿಣ ರೈಲ್ವೆಯಿಂದ ದೀಪಾವಳಿಗೆ 34 ಸ್ಪೆಷಲ್ ಟ್ರೈನ್, ಜನಜಂಗುಳಿ ಇಲ್ಲ! ಇಂದೇ ಟಿಕೆಟ್ ಬುಕ್ ಮಾಡಿ

ಅಕ್ಟೋಬರ್ 2 ರಿಂದ ಭುವನೇಶ್ವರ ಬೆಂಗಳೂರು ರೈಲು(ಬೆಂಗಳೂರು ಪ್ರಶಾಂತಿ ಡೈಲಿ ಎಕ್ಸ್‌ಪ್ರೆಸ್ ರೈಲು, ಸಂಖ್ಯೆ  18463)  ಒಂದು ಸ್ವೀಪರ್ ಕ್ಲಾಸ್ ಬೋಗಿಯನ್ನು ಹೆಚ್ಚುವರಿಯಾಗಿ ಜೋಡಿಸಲಾಗುತ್ತಿದೆ. 

ಅಕ್ಟೋಬರ್ 3ರಂದು ಭುವನೇಶ್ವರದಿಂದ ಹೊರಡುವ ಕೆಎಸ್ಆರ್-ಬೆಂಗಳೂರು ಹಾಗೂ ಭುವನೇಶ್ವರ ಪ್ರಶಾಂತಿ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಸ್ವೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ. 
 
ಅಕ್ಟೋಬರ್ 6 ರಿಂದ 17 ರವರೆಗೆ ಭುವನೇಶ್ವರದಿಂದ ಹೊರಡುವ ರೈಲು ಸಂಖ್ಯೆ 12845 ಭುವನೇಶ್ವರ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸಾಮಾನ್ಯ ಸೆಕೆಂಡ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.

ಅಕ್ಟೋಬರ್ 7 ರಿಂದ 18 ರವರೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12846 ಎಸ್ಎಂವಿಟಿ ಬೆಂಗಳೂರು-ಭುವನೇಶ್ವರ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಜೋಡಿಸಲಾಗುತ್ತಿದೆ.

ಇದೇ ವೇಳೆ ರಾಮಗಿರಿ, ಬೀರೂರು ಮತ್ತು ಆಲೂರು ನಿಲ್ದಾಣ: ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆಗೆ ಸೂಚಿಸಲಾಗಿದೆ. ರೈಲು ಸಂಖ್ಯೆ 17325/17326 ಬೆಳಗಾವಿ-ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ 17391/17392 ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್  ರೈಲುಗಳಿಗೆ ರಾಮಗಿರಿ ನಿಲ್ದಾಣದಲ್ಲಿ ಇರುವ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಅಕ್ಟೋಬರ್ 1 ರಿಂದ ಡಿಸೆಂಬರ್ 31, 2024 ರವರೆಗೆ ಮೂರು ತಿಂಗಳ ಕಾಲ ಮುಂದುವರಿಸಲಾಗುತ್ತಿದೆ ಎಂದು ಡಾ. ಮಂಜುನಾಥ ಕನಮಡಿ ಹೇಳಿದ್ದಾರೆ. 

ದೀಪಾವಳಿ ಸೇರಿ ಸಾಲು ಸಾಲು ಹಬ್ಬಕ್ಕೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಭಾರತೀಯ ರೈಲ್ವೇ!

ರೈಲು ಸಂಖ್ಯೆ 16587/16588 ಯಶವಂತಪುರ-ಬಿಕಾನೇರ್-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲುಗಳಿಗೆ ಬೀರೂರು ನಿಲ್ದಾಣದಲ್ಲಿ ಇರುವ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ಅಕ್ಟೋಬರ್ 1 ರಿಂದ ಡಿಸೆಂಬರ್ 31, 2024 ರವರೆಗೆ ಮೂರು ತಿಂಗಳು ಮುಂದುವರಿಸಲಾಗುತ್ತಿದೆ.

ರೈಲು ಸಂಖ್ಯೆ 16515/16516 ಯಶವಂತಪುರ-ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್, ರೈಲು ಸಂಖ್ಯೆ 16575/16576 ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಗೋಮಟೇಶ್ವರ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ 16539/16540 ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲುಗಳಿಗೆ  ಆಲೂರು ನಿಲ್ದಾಣದಲ್ಲಿದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ನವೆಂಬರ್ 30 ರವರೆಗೆ ಮುಂದುವರಿಸಲಾಗಿದೆ.
 

click me!