
ಇಂದೋರ್(ಜು.26) ಭಾರತದಲ್ಲಿ ನಶಿಸಿ ಹೋಗಿದ್ದ ಚೀತಾ ಸಂತತಿಯನ್ನು ಪುನರ್ ಸ್ಥಾಪಿಸುವ ಮೂಲಕ ಪರಿಸರ ಸಮತೋಲನ ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷಿ ಯೋಜನೆ ಇದೀಗ ಸಫಲಗೊಂಡಿದೆ. ಸೌತ್ ಆಫ್ರಿಕಾದಿಂದ ಭಾರತದ ಕುನೋ ರಾಷ್ಟ್ರೀಯ ಅರಣ್ಯಕ್ಕೆ ತಂದಿರುವ ಚೀತಾಗಳು ಇದೀಗ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದೆ. ಆಫ್ರಿಕಾದಿಂದ ತಂದ ಗಾಮಿನಿ ಚೀತಾ ಕೆಲ ತಿಂಗಳ ಹಿಂದೆ ಮರಿಗಳಿಗೆ ಜನ್ಮ ನೀಡಿತ್ತು. ಇದೀಗ ಮರಿಗಳ ಜೊತೆ ಆಟವಾಡುತ್ತಿರುವ ಹೃದಯಸ್ವರ್ಶಿ ವಿಡಿಯೋ ವೈರಲ್ ಆಗಿದೆ.
ಕುನೋ ರಾಷ್ಟ್ರೀಯ ಅರಣ್ಯ ಸೇರಿದಂತೆ ಹಲೆವೆಡೆ ಉತ್ತಮ ಮಳೆಯಾಗುತ್ತಿದೆ. ತುಂತುರ ಮಳೆಯ ಸಂದರ್ಭದಲ್ಲಿ ತಾಯಿ ಚಿರತೆ ಹಾಗೂ ಐದು ಮರಿಗಳ ಜೊತೆ ಮಳೆಯಲ್ಲಿ ಆಟವಾಡಿದೆ. ಐದು ಮರಿಗಳು ತಮ್ಮ ತಮ್ಮ ನಡುವೆ ಆಟವಾಡುತ್ತಿರುವ ಸುಂದರ ದೃಶ್ಯ ಇದೀಗ ಪ್ರಾಣಿ ಪ್ರಿಯರ ಮನಗೆದ್ದಿದೆ. ಈ ಕುರಿತು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ವಿಡಿಯೋ ಹಂಚಿಕೊಂಡಿದ್ದಾರೆ.
ಗುಡ್ ನ್ಯೂಸ್, ಕುನೋ ಅರಣ್ಯದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾ ಚೀತಾ ಗಾಮಿನಿ!
ಸೌತ್ ಆಫ್ರಿಕಾದಿಂದ ತಂದ ಈ ಗಾಮಿನಿ ಚಿರತೆ ಮಾರ್ಚ್ 10 ರಂದು ಮರಿಗಳಿಗೆ ಜನ್ಮ ನೀಡಿತ್ತು. ಈ ವೇಳೆ ಭೂಪೇಂದ್ರ ಯಾದವ್ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದರು. ಗಾಮಿನಿಯ 5 ಮರಿಗಳ ಜನನದೊಂದಿಗೆ ಭಾರತದಲ್ಲಿ ಹುಟ್ಟಿದ ಸೌತ್ ಆಫ್ರಿಕಾ ಮೂಲದ ಚೀತಾ ಮರಿಗಳ ಸಂತತಿ 13ಕ್ಕೆ ಏರಿಕೆಯಾಗಿದೆ.
ಜನವರಿಯಲ್ಲಿ ನಮಿಬಿಯಾ ಚೀತಾ ಜ್ವಾಲಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಇದಕ್ಕೂ ಮುನ್ನ ಆಫ್ರಿಕಾದಿಂದ ತಂದ ಚೀತಾಗಳು ಮರರಿಗಳಿಗೆ ಜನ್ಮ ನೀಡಿತ್ತು. ಆದರೆ ಭಾರತದ ವಾತಾವರಣಕ್ಕೆ ಹೊಂದಿಕೊಳ್ಳದ ಕಾರಣ ಈ ಮರಿಗಳು ಮೃತಪಟ್ಟಿತ್ತು. ಈ ವೇಳೆ ಕೇಂದ್ರ ಸರ್ಕಾರ ಭಾರಿ ಟೀಕೆಗೆ ಗುರಿಯಾಗಿತ್ತು.
2022ರಲ್ಲಿ ಕೇಂದ್ರ ಸರ್ಕಾರ ಚೀತಾ ಯೋಜನೆ ಅನುಷ್ಠಾನಕ್ಕೆ ತಂದಿತ್ತು. ನಮೀಬಿಯಾದಿಂದ ಮೊದಲ ಹಂತದಲ್ಲಿ 8 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಅರಣ್ಯದಲ್ಲ್ಲಿ ಈ ಚಿರತೆಗಳನ್ನು ಬಿಡಲಾಗಿದೆ. ಇದಾದ ಬಳಿಕ 2023ರಲ್ಲಿ ಮತ್ತೆ 12 ಚೀತಾಗಳನ್ನು ತಂದು ಕುನೋ ಅರಣ್ಯಕ್ಕೆ ಬಿಡಲಾಗಿತ್ತು. 2023ರ ಮಾರ್ಚ್ ವೇಳೆಗೆ ನಮೀಬಿಯಾದಿಂದ ತಂದ 7 ಚಿರತೆ ಹಾಗೂ ಭಾರತಕ್ಕೆ ಬಂದ ಬಳಿಕ ಮರಿ ಹಾಕಿದ 3 ಮರಿಗಳು ಮೃತಪಟ್ಟಿತ್ತು.
ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ ಆಶಾ ಚೀತಾ!
ಭಾರತದಲ್ಲಿ ಚೀತಾಗಳ ಸಂತತಿ ಅತ್ಯಂತ ಹೆಚ್ಚಿತ್ತು. ಹೆಚ್ಚಿನ ಕಾಡು ಪ್ರದೇಶ ಹೊಂದಿದ್ದ ಭಾರತದಲ್ಲಿ ಚೀತಾ ಸೇರಿದಂತೆ ಹಲವು ವಿಶೇಷ ಪ್ರಭೇದದ ಪ್ರಾಣಿಗಳಿತ್ತು. ಆದರೆ ಸತತವಾಗಿ ಚೀತಾ ಸೇರಿದಂತೆ ಇತರ ಪ್ರಾಣಿಗಳನ್ನು ಬೇಟೆಯಾಡಿದ ಕಾರಣ 1952ರಲ್ಲಿ ಭಾರತದಲ್ಲಿ ಚೀತಾ ಸಂತತಿ ನಶಿಸಿಸಲಾಗಿದೆ ಎಂದು ಘೋಷಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ