
Sonu Nigam concert: ಖ್ಯಾತ ಗಾಯಕ ಸೋನು ನಿಗಮ್ ತಮ್ಮ ಸಂಗೀತ ಕಾರ್ಯಕ್ರಮಗಳಿಂದಲೇ ದೇಶಾದ್ಯಂತ ಮನೆಮಾತಾಗಿದ್ದಾರೆ. ಇತ್ತೀಚೆಗೆ ಸಂಗೀತ ಕಾರ್ಯಕ್ರಮದ ವೇಳೆ ವೇದಿಕೆಯಲ್ಲೇ ಕುಸಿದುಬಿದ್ದು ಆಸ್ಪತ್ರೆಗೆ ದಾಖಲಾಗಿ ಸುದ್ದಿಯಲ್ಲಿದ್ದರು. ಮೊನ್ನೆ ಭಾನುವಾರ ದೆಹಲಿ ವಿವಿಯಲ್ಲಿ ದೆಹಲಿ ತಂತ್ರಜ್ಞಾನ ವಿಶ್ವವಿದ್ಯಾಲಯದ ಎಂಜಿಫೆಸ್ಟ್‌ನ ಸಂಗೀತ ಕಾರ್ಯಕ್ರಮದ ವೇಳೆ ಸೋನು ನಿಗಮ್ ಮೇಲೆ ಉದ್ರಿಕ್ತ ಜನರು ಕಲ್ಲು ಬಾಟಲಿಗಳನ್ನು ಎಸೆದ ಘಟನೆ ನಡೆದಿದೆ.
'ನಾನು ಇಲ್ಲಿಗೆ ಹಾಡಲು ಬಂದಿದ್ದೇನೆ ಶಾಂತವಾಗಿರಿ'
ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಜನಸಮೂಹದಲ್ಲಿ ಒಂದು ಉದ್ರಿಕ್ತ ಗುಂಪು ವೇದಿಕೆಯತ್ತ ಬಾಟಲಿ, ಕಲ್ಲುಗಳನ್ನು ಎಸೆದಿದೆ. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದ ಸೋನು ನಿಗಮ್ ತಮ್ಮ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಿದರು, 'ನಾನು ಇಲ್ಲಿಗೆ ಹಾಡಲು ಬಂದಿದ್ದೇನೆ, ಶಾಂತವಾಗಿರಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಒಂದು ಹಾಡಿಗೆ 3 ಕೋಟಿ ರೂಪಾಯಿ..ಅತಿ ಹೆಚ್ಚು ಸಂಭಾವನೆ ಪಡೆಯುವ 5 ಗಾಯಕರು!
ಈ ಘಟನೆ ನಾಚಿಕೆಗೇಡಿನ ಸಂಗತಿ:
ಪ್ರಸಿದ್ಧ ಗಾಯಕ ಕಾರ್ಯಕ್ರಮದ ಹಲವಾರು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಆದರೆ ಆ ಘಟನೆಯ ಬಗ್ಗೆ ಏನನ್ನೂ ಉಲ್ಲೇಖಿಸಲಿಲ್ಲ. ವರದಿಯ ಪ್ರಕಾರ, ಪ್ರೇಕ್ಷಕರನ್ನು ನಿಯಂತ್ರಣಕ್ಕೆ ತಂದ ನಂತರ ಅವರು ಕಾರ್ಯಕ್ರಮವನ್ನು ಮುಂದುವರೆಸಿದರು.
ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕೆಲವು ವಿದ್ಯಾರ್ಥಿಗಳು ನಂತರ ಈ ಘಟನೆಯೊಂದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಕೆಲವು ಅಶಿಸ್ತಿನ ವಿದ್ಯಾರ್ಥಿಗಳ ಕಾರಣದಿಂದಾಗಿ ಇಂಥ ಪ್ರಸಿದ್ಧ ಗಾಯಕನ ಮೇಲೆ ಕಲ್ಲು ಬಾಟಲಿ ಎಸೆಯುವಂತಾಯ್ತು. ಸ್ವಲ್ಪ ವಿರಾಮ ತೆಗೆದುಕೊಂಡು ಪ್ರೇಕ್ಷಕರನ್ನು ಸಮಾಧಾನ ಪಡಿಸಿ ಕಾರ್ಯಕ್ರಮ ಮುಂದುವರಿಸಿದರು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ