ಹರ್ಯಾಣದಲ್ಲಿ ಫಲ ಕೊಟ್ಟ ಸೋನಿಯಾ ತಂತ್ರ

By Shrilakshmi Shri  |  First Published Oct 25, 2019, 10:12 AM IST

ಹರ್ಯಾಣದಲ್ಲಿ ಫಲಕೊಟ್ಟ ಸೋನಿಯಾ ತಂತ್ರ | ಹೂಡಾಗೆ ಹೆಚ್ಚಿನ ಸ್ಥಾನಮಾನ ನೀಡಿದ್ದಕ್ಕೆ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ | ಲೋಕ ಚುನಾವಣೆ ಬಳಿಕ ಸೋನಿಯಾ ಬಳಿ ಘರ್ಜಿಸಿದ್ದ ಹೂಡಾ


ಚಂಡೀಗಢ (ಅ. 25): ಸೋನಿಯಾ ಗಾಂಧಿ ಅವರ ತಂತ್ರದಿಂದಾಗಿ ಹರಾರ‍ಯಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 30 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಬಿಜೆಪಿಯನ್ನು 40 ಸ್ಥಾನಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಕಾಂಗ್ರೆಸ್‌ ಬಿಜೆಪಿಯ ಚುನಾವಣಾ ಪೂರ್ವದ ‘75 ಮಿಷನ್‌’ ಅನ್ನು ವಿಫಲಗೊಳಿಸಿದೆ.

ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ 2019ರ ಲೋಕಸಭಾ ಚುನಾವಣೆ ಎದುರಿಸಿದ್ದ ಕಾಂಗ್ರೆಸ್‌ ಹರ್ಯಾಣದಲ್ಲಿ ಭಾರೀ ಕಳಪೆ ಸಾಧನೆ ತೋರಿತ್ತು. ಈ ಸಂದರ್ಭದಲ್ಲಿ ರಾಹುಲ್‌ ಅಶೋಕ್‌ ತನ್ವರ್‌ ಅವರನ್ನು ಹರಾರ‍ಯಣ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾಗಿದ್ದರು.

Tap to resize

Latest Videos

ಎಲ್ಲಾ ಮುಗಿಯಿತು ಎನ್ನುವಾಗಲೇ ಮತ್ತೆ ಪುಟಿದೆದ್ದ ಶರದ್ ಪವಾರ್!

ಈ ಬಗ್ಗೆ ಆಕ್ರೋಶಗೊಂಡಿದ್ದ ಹರಾರ‍ಯಣದ ಮಾಜಿ ಮುಖ್ಯಮಂತ್ರಿ ಭೂಪೇಂದರ್‌ ಹೂಡಾ ಅವರು, ತಾವು ಕಾಂಗ್ರೆಸ್‌ನಲ್ಲೇ ಉಳಿಯಬೇಕೇ ಅಥವಾ ಪಕ್ಷದಿಂದ ಹೊರ ನಡೆಯಬೇಕೇ ಎಂಬುದನ್ನು ಮತದಾರರೇ ನಿರ್ಧರಿಸಲಿದ್ದಾರೆ ಎಂದು ಕಾಂಗ್ರೆಸ್‌ ಮತ್ತು ಸೋನಿಯಾ ಗಾಂಧಿ ಅವರ ಬಳಿಯೇ ಘರ್ಜಿಸಿದ್ದರು.

ರಾಜ್ಯದ ಮೇಲಿನ ಹೂಡಾ ಹಿಡಿತ ಮತ್ತು ಅವರ ಸಾಮರ್ಥ್ಯವನ್ನು ತಿಳಿದಿದ್ದ ಸೋನಿಯಾ, ಹೂಡಾ ಅವರನ್ನು ಹರಾರ‍ಯಣ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದರು. ಏತನ್ಮಧ್ಯೆ, ತಾವು ಸಾಮಾನ್ಯ ಕಾರ್ಯಕರ್ತನಂತೆ ಕಾರ್ಯ ನಿರ್ವಹಿಸುವುದಾಗಿ ಹೇಳಿ ಹರಾರ‍ಯಣ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನಕ್ಕೆ ತನ್ವರ್‌ ರಾಜೀನಾಮೆ ಸಲ್ಲಿಸಿದರು. ಈ ಸ್ಥಾನಕ್ಕೆ ದಲಿತ ನಾಯಕಿಯಾದ ಕುಮಾರಿ ಶೆಲ್ಜಾ ಅವರನ್ನು ನೇಮಿಸಲಾಯಿತು.

ಮಹಾರಾಷ್ಟ್ರ ಫಲಿತಾಂಶ: ದೇಶಕ್ಕೆ ನರೇಂದ್ರ ಮಹಾರಾಷ್ಟ್ರಕ್ಕೆ ದೇವೇಂದ್ರ!

ಒಂದೆಡೆ ಹರ್ಯಾಣ ಕಾಂಗ್ರೆಸ್‌ ನಾಯಕರಿಗೆ ಕೇಂದ್ರ ನಾಯಕರು ಬಲ ತುಂಬುತ್ತಾ ಹೋದರು. ಮತ್ತೊಂದೆಡೆ ಕಾಂಗ್ರೆಸ್‌ನ ಒಳ ಬೇಗುದಿಯಿಂದ ತಮಗೆ ಹೆಚ್ಚು ಲಾಭವಾಗಲಿದೆ ಎಂಬ ಆತ್ಮವಿಶ್ವಾಸದಲ್ಲಿ ಬಿಜೆಪಿ ನಾಯಕರು ಮುಳುಗಿದರು. ಅಲ್ಲದೆ, ಹೂಡಾ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ನಾಯಕರು ವಿಫಲರಾದರು. ಇದರಿಂದಾಗಿ ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುವ ಸ್ಥಿತಿ ಬಂದೊಂದಗಿದೆ.

click me!