'ಶಾಲಾ ಪಠ್ಯಕ್ಕೆ ಸೋನಿಯಾ ಸಾಧನೆ ಸೇರಿಸಿ' ಸಿಎಂಗೆ ಒತ್ತಾಯ

By Suvarna NewsFirst Published Dec 10, 2020, 5:53 PM IST
Highlights

ಶಾಲಾ ಪಠ್ಯದಲ್ಲಿ ಸೋನಿಯಾ ಗಾಂಧಿ ಅವರ ಸಾಧನೆ ಸೇರಿಸಿ/ ತೆಲಂಗಾಣ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡರ ಒತ್ತಾಯ/ ತೆಲಂಗಾಣ ರಾಜ್ಯ ನಿರ್ಮಾಣಕ್ಕೆ ಸೋನಿಯಾ ಕೊಡುಗೆ ಅಪಾರ/ ಧನ್ಯವಾದ ಸಲ್ಲಿಸುವ ಕೆಲಸ ಮಾಡಿ

ಹೈದರಾಬಾದ್ (ಡಿ.  10) ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೀವನವನ್ನು ಸೇರಿಸಬೇಕು ಎಂದು ತೆಲಂಗಾಣದ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಗೆ ಒತ್ತಾಯ ಮಾಡಿದ್ದಾರೆ.

ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿ, ಸೋನಿಯಾ ಗಾಂಧಿಯವರ ಜೀವನವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಲಾಗಿದೆ ಎಂದು ತೆಲಂಗಾಣ ಕಾಂಗ್ರೆಸ್ ವಕ್ತಾರ ಡಾ. ಶ್ರವಣ್ ದಾಸೋಜು ತಿಳಿಸಿದ್ದಾರೆ.  ಸೋನಿಯಾ ಗಾಂಧಿ 74 ನೇ ಜನ್ಮದಿನದ ಸಂದರ್ಭದಲ್ಲಿ ಇಂಥದ್ದೊಂದು ಒತ್ತಾಯ ಮಾಡಲಾಗಿದೆ.

ಕಾಂಗ್ರೆಸ್ ಬಂಡಾಯ ಶಮನಕ್ಕೆ ಸೋನಿಯಾ ಮಾಡಿದ ಮಾಸ್ಟರ್ ಪ್ಲಾನ್

ಸೋನಿಯಾ ಗಾಂಧಿ ಅವರು ಇಲ್ಲವೆಂದಿದ್ದರೆ ತೆಲಂಗಾಣ ರಾಜ್ಯವೇ ರಚನೆ ಆಗುತ್ತಿರಲಿಲ್ಲ ಎಂದು ರಾವ್ ಅವರು ರಾಜ್ಯ ವಿಧಾನಸಭೆಯಲ್ಲಿ ಹೇಳಿದ್ದರು.  ಹಾಗಾಗಿ ತೆಲಂಗಾಣ ನಿರ್ಮಾಣದ ಹಿಂದೆ ಇರುವ ಸೋನಿಯಾ ಶ್ರಮವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಸೋನಿಯಾ ಅವರ ಈ ಮಹತ್ ಕಾರ್ಯಕ್ಕೆ  ಕೆಸಿಆರ್ ಸರ್ಕಾರ ಪ್ರತಿಯಾಗಿ ಏನನ್ನು ನೀಡಿಲ್ಲ. ಸೋನಿಯಾ ಅವರಿಗೆ ನೆನಪಿನಲ್ಲಿ ಉಳಿಯಬುದಾದ ಗಿಫ್ಟ್ ಒಂದನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮುಖಂಡರು ಹೇಳಿದ್ದಾರೆ.

ತೆಲಂಗಾಣದ ಹತ್ತನೇ ತರಗತಿ ಪಠ್ಯದಲ್ಲಿ ತೆಲಂಗಾಣ ರಾಜ್ಯ ನಿರ್ಮಣದದ ಬಗ್ಗೆ ಅಧ್ಯಾಯವೊಂದಿದ್ದು ಅದರಲ್ಲಿ ರಾವ್ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ಇದೆ. ಕಾಂಗ್ರೆಸ್ ಅಥವಾ  ಸೋನಿಯಾ ಅವರ ಉಲ್ಲೇಖ ಇಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ.

click me!