47 ವರ್ಷ ನಂತರ ಇಂದು ಎಐಸಿಸಿ ಕಚೇರಿ ಬದಲು
ಕಾಂಗ್ರೆಸ್ ಪಕ್ಷವು ತನ್ನ ಕಚೇರಿಯನ್ನು ಅಕ್ಬರ್ ರಸ್ತೆಯಿಂದ ಕೋಟ್ಲಾ ರಸ್ತೆಯಲ್ಲಿರುವ ಇಂದಿರಾ ಭವನಕ್ಕೆ ಬದಲಾಯಿಸುತ್ತಿದೆ. ಈ ನೂತನ ಕಟ್ಟಡವು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಪಕ್ಷದ ಹೊಸ ಆಕಾಂಕ್ಷೆಗಳನ್ನು ಈಡೇರಿಸುವ ನಿರೀಕ್ಷೆಯಿದೆ. ಉದ್ಘಾಟನಾ ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ನವದೆಹಲಿ: ದೇಶದ ಅತ್ಯಂತ ಹಳೆಯ ಪಕ್ಷಗಳ ಪೈಕಿ ಒಂದಾದ ಕಾಂಗ್ರೆಸ್, ಬುಧವಾರ ನೂತನ ಕಟ್ಟಡಕ್ಕೆ ತನ್ನ ಕಚೇರಿಯನ್ನು ಬದಲಿಸುತ್ತಿದೆ. ಕಳೆದ 5 ದಶಕಗಳಿಂದ ಅಕ್ಬರ್ ರೋಡ್‌ನಲ್ಲಿದ್ದ ಪಕ್ಷದ ಹಳೆಯ ಕಚೇರಿ ತೊರೆದು ಕೋಟ್ಲಾ ರಸ್ತೆಯಲ್ಲಿನ ನೂತನ ಕಟ್ಟಡಕ್ಕೆ ತೆರಳುತ್ತಿದೆ.
ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರಿಂದ ಶಂಕುಸ್ಥಾಪನೆ ನೆರವೇರಿಸಲ್ಪಟ್ಟಿದ್ದ ಕಟ್ಟಡ ಇದೀಗ ಉದ್ಘಾಟನೆಗೆ ಸಜ್ಜಾಗಿದ್ದು ಅದಕ್ಕೆ ಇಂದಿರಾ ಭವನ ಎಂದು ಹೆಸರಿಸಲಾಗಿದೆ. 2 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ 6 ಅಂತಸ್ತಿನ ಕಟ್ಟಡವನ್ನು ಪಕ್ಷದ ಹೊಸ ಅಪೇಕ್ಷೆ ಆಕಾಂಕ್ಷೆಗಳನ್ನು ಈಡೇರಿಸುವ ರೀತಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ನಿರ್ಮಿಸಲಾಗಿದೆ.
ಬುಧವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ, ರಾಹುಲ್ ಸೇರಿದಂತೆ 400ಕ್ಕೂ ಹೆಚ್ಚು ಗಣ್ಯರ ಉಪಸ್ಥಿತಿಯಲ್ಲಿ ಕಟ್ಟಡದ ಉದ್ಘಾಟನೆ ನಡೆಯಲಿದೆ. ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಹಲವು ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ಇದನ್ನೂ ಓದಿ: ವರಿಷ್ಠರ ಎಚ್ಚರಿಕೆ ಬಳಿಕವೂ ಸಿಎಂ ಬದಲು ಹೇಳಿಕೆ: ಸುರ್ಜೇವಾಲಾ ಎಚ್ಚರಿಕೆಗೂ ಇಲ್ಲ ಕಿಮ್ಮತ್ತು!
ಅಕ್ಬರ್ ರೋಡ್ ಬಂಗಲೆ ಇತಿಹಾಸ
ಬರೋಬ್ಬರಿ 7 ಕಾಂಗ್ರೆಸ್ ಅಧ್ಯಕ್ಷರನ್ನು ಕಂಡಿರುವ ಅಕ್ಬರ್ ರೋಡ್‌ನಲ್ಲಿರುವ, 47 ವರ್ಷಗಳಿಂದ ಪಕ್ಷದ ಮುಖ್ಯ ಕಚೇರಿಯಾಗಿದ್ದ ಕಟ್ಟಡಕ್ಕೆ ದೊಡ್ಡ ಇತಿಹಾಸವಿದೆ. ಸರ್ ಎಡ್ವಿನ್ ಲ್ಯುಟಿಯೆನ್ಸ್ 1911ರಿಂದ 1925ರ ಅವಧಿಯಲ್ಲಿ ಕಟ್ಟಿಸಿದ ಈ ಕಟ್ಟಡವು ಬ್ರಿಟಿಷ್ ವಸಾಹತುಶಾಹಿ ವಾಸ್ತುಶಿಲ್ಪ ಹಾಗೂ ಆಧುನಿಕ ಶೈಲಿಯ ಮಿಶ್ರಣವಾಗಿದೆ.
ಸ್ವಾತಂತ್ರ್ಯಕ್ಕೂ ಮೊದಲು, ಜವಾಹರಲಾಲ್ ನೆಹರು ಅವರ ಅಲಹಾಬಾದ್‌ನ ಆನಂದ ಭವನ ನಿವಾಸವೇ ಪಕ್ಷದ ಪ್ರಧಾನ ಕಚೇರಿಯಾಗಿತ್ತು. 1969ರ ನವೆಂಬರ್‌ನಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾದಾಗ ಇಂದಿರಾ ಗಾಂಧಿಯವರ ಗುಂಪು ಎಂ.ವಿ. ಕೃಷ್ಣಪ್ಪ ಎಂಬುವವರ ನಿವಾಸವನ್ನು ತನ್ನ ಕಚೇರಿಯಾಗಿಸಿಕೊಂಡಿತ್ತು. ಬಳಿಕ 1978ರಲ್ಲಿ ಅದನ್ನು 24 ಅಕ್ಬರ್ ರೋಡ್‌ಗೆ ಸ್ಥಳಾಂತರಿಸಲಾಯಿತು. ಅಂದಿನಿಂದ ಇಂದಿನವರೆಗೆ ಅದೇ ಕಾಂಗ್ರೆಸ್‌ನ ಪ್ರಧಾನ ಕಚೇರಿಯಾಗಿತ್ತು.
ಇದನ್ನೂ ಓದಿ: ಕ್ಯಾತೆ ತೆಗೆದಿದ್ದ ಬಾಂಗ್ಲಾದೇಶಕ್ಕೆ ಮುಟ್ಟಿ ನೋಡಿಕೊಳ್ಳುವಂಥ ಶಾಕ್ ಕೊಟ್ಟ ಭಾರತ
Congress flag taken off from Old HQs ‘24 Akbar Road’ for one last time
— Ankit Mayank (@mr_mayank) January 14, 2025
Tomorrow it will be unfurled at the new HQs ‘Indira Bhavan’ 🇮🇳
Uncountable memories & tons of stories & an unforgettable history — One last Goodbye ‘24 Akbar Road’ 🫡❤️ pic.twitter.com/sJe6nGIgMm
BIG BREAKING
— Ravinder Kapur. (@RavinderKapur2) January 14, 2025
Tomorrow the new headquarters of the Congress Party will be inaugurated.
9A Kotla Marg, this will be the new address of the Congress Headquarters.
The new building will be named Indira Bhawan after the former PM Indira Gandhi.pic.twitter.com/2RTQiLRln2