ಮಗನಿಗೆ ಸೀಬೆ ಹಣ್ಣು ಹಿಡಿದು ಹಾಸ್ಟೆಲ್‌ಗೆ ತೆರಳಿದ ತಾಯಿಗೆ ಆಘಾತ, ಕಣ್ಣೆದುರೇ ಕಂಡ ದುರಂತ

Published : Jan 25, 2025, 01:08 PM IST
ಮಗನಿಗೆ ಸೀಬೆ ಹಣ್ಣು ಹಿಡಿದು ಹಾಸ್ಟೆಲ್‌ಗೆ ತೆರಳಿದ ತಾಯಿಗೆ ಆಘಾತ, ಕಣ್ಣೆದುರೇ ಕಂಡ ದುರಂತ

ಸಾರಾಂಶ

ಪರೀಕ್ಷೆಗೂ ಮೊದಲು ಮಗನ ಭೇಟಿಯಾಗಿ ಮಗನಿಗೆ ಧೈರ್ಯ ತುಂಬಲು ತಾಯಿ ಹಾಸ್ಟೆಲ್‌ಗೆ ತೆರಳಿದ್ದಾಳೆ. ಹೋಗುವಾಗ ಮಗನ ನೆಚ್ಚಿನ ಸೀಬೆ ಹಣ್ಣು ಒಯ್ದಿದ್ದಾಳೆ. ಆದರೆ ಹಾಸ್ಟೆಲ್ ತಲುಪಿದ ತಾಯಿ ಆಘಾತಗೊಂಡಿದ್ದಾಳೆ. ಕಣ್ಣೆದುರೆ ಕಂಡ ಮಗನ ದುರಂತದಿಂದ 3 ಗಂಟೆ ಪ್ರಜ್ಞೆ ತಪ್ಪಿದ್ದಾಳೆ.

ಕೋಟಾ(ಜ.25) ಪರೀಕ್ಷೆ ತಯಾರಿ ನಡೆಸುತ್ತಿದ್ದ ಮಗನ ಜೊತೆ ಫೋನ್ ಮೂಲಕ ಮಾತನಾಡಿದ ತಾಯಿಗೆ ಸಮಾಧಾನವಾಗಿಲ್ಲ. ಪ್ರಮುಖ ಪರೀಕ್ಷೆ, ಹೀಗಾಗಿ ಮಗನ ಭೇಟಿಯಾಗಿ  ಧೈರ್ಯ ತುಂಬುವ ಅಗತ್ಯವಿದೆ ಎಂದು ತಾಯಿ ಪುತ್ರನ ಹಾಸ್ಟೆಲ್‌ಗೆ ತೆರಳಿದ್ದಾಳೆ. ಬಸ್ ಹಿಡಿದು ಹೊರಟ ತಾಯಿ ಮಗನ ಹಾಸ್ಟೆಲ್ ತಲುಪಿದ್ದಾಳೆ. ಆದರೆ ಮಗನ ಹಾಸ್ಟೆಲ್ ಬಳಿ ಕೋಣೆ ಬಳಿ ಬಂದ ತಾಯಿಗೆ ಆಘಾತವಾಗಿದೆ. ಕಾರಣ ಕೆಲ ಹೊತ್ತಿನ ಮುಂಚೆ ಮಗ ಬದುಕು ಅಂತ್ಯಗೊಳಿಸಿದ್ದ. ಮನೆಯಲ್ಲಿ ಬೆಳೆದಿದ್ದ, ಮಗನ ನೆಚ್ಚಿನ ಸೀಬೆ ಹಣ್ಣು ಹಿಡಿದು ಹಾಸ್ಟೆಲ್‌ಗೆ ಆಗಮಿಸಿದ ತಾಯಿ  ಮಗನ ದುರಂತ ಕಣ್ಣೆದರೇ ನೋಡಿ ಆಘಾತವಾಗಿದೆ. ಕುಸಿದು ಬಿದ್ದ ತಾಯಿ 3 ಗಂಟೆ ಪ್ರಜ್ಞೆ ಇಲ್ಲದೆ ಆಸ್ಪತ್ರೆ ದಾಖಲಾದ ಘಟನೆ ಕೋಟಾದಲ್ಲಿ ನಡೆದಿದೆ. ಕ

ಕೋಟಾದಲ್ಲಿ ವಿದ್ಯಾರ್ಥಿಗಳ ದುರಂತ ಸರಣಿ ಮುಂದುವರಿದಿದೆ. ಒಬ್ಬರ ಹಿಂದೊಬ್ಬರು ದುರಂತ ಅಂತ್ಯ ಕಾಣುತ್ತಿದ್ದಾರೆ. ಕಳೆದೊಂದು ವರ್ಷದಿಂದ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಈ ಸಾಲಿಗೆ ಗೌವ್ಹಾಟಿಯ 17 ವರ್ಷದ ವಿದ್ಯಾರ್ಥಿ ಸೇರಿಕೊಂಡಿದ್ದಾನೆ. ಗೌವ್ಹಾಟಿಯಲ್ಲಿ ನೆಲೆಸಿರುವ ವಿದ್ಯಾರ್ಥಿಯ ಪೋಷಕರು ಮಗನ ಉತ್ತಮ ವಿದ್ಯಾಭ್ಯಾಸಕ್ಕೆ ಶ್ರಮಪಟ್ಟು ದುಡಿಯುತ್ತಿದ್ದಾರೆ. ಆದರೆ ಇರೋ ಒಬ್ಬನೇ ಮಗ ಇದೀಗ ಕೋಟಾ ಹಾಸ್ಟೆಲ್‌ನಲ್ಲೇ ಕೊನೆಯಾಗಿದ್ದಾನೆ.

ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ: ಮನೆ ಬಿಟ್ಟು ಹೋದ ಬಿಕಾಂ ವಿದ್ಯಾರ್ಥಿ ಮೋಹಿತ್!

ಜೆಇಇ ಪ್ರಮುಖ ಪರೀಕ್ಷೆಗೆ ವಿದ್ಯಾರ್ಥಿ ತಯಾರಿ ಮಾಡಿಕೊಳ್ಳುತ್ತಿದ್ದ. ಗೌವ್ಹಾಟಿಯಲ್ಲಿ ನೆಲೆಸಿರುವ ತಾಯಿ ಫೋನ್ ಮೂಲಕ ಮಗನ ಜೊತೆ ಮಾತನಾಡಿದ್ದಾರೆ. ಆದರೆ ಈ ಮಾತುಗಳು ತಾಯಿಗೆ ಯಾಕೋ ಸಮಾಧಾನ ತಂದಿಲ್ಲ. ಆತನ ಮಾತುಗಳಲ್ಲಿ ಧೈರ್ಯ, ಆತ್ಮವಿಶ್ವಾಸದ ಕೊರತೆ ಕಾಡುತ್ತಿತ್ತು. ಪರೀಕ್ಷೆಗೆ ಮೊದಲು ಈ ರೀತಿ ಧೈರ್ಯ ಹಾಗೂ ಆತ್ಮವಿಶ್ವಾಸದ ಕೊರತೆ ಇದ್ದರೆ, ಪರೀಕ್ಷೆ ಹೇಗೆ ಬರೆಯಲು ಸಾಧ್ಯ ಎಂದುಕೊಂಡ ತಾಯಿ ಮಗನ ಭೇಟಿಯಾಗಲು ಕೋಟಾದ ಹಾಸ್ಟೆಲ್‌ಗೆ ತೆರಳಲು ನಿರ್ಧರಿಸಿದ್ದಾರೆ.

ಎಂಜಿನೀಯರ್ ಎಂಟ್ರಾನ್ಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಆ ಅಸ್ಸಾಂ ವಿದ್ಯಾರ್ಥಿ ಕಳೆದ 2 ವರ್ಷದಿಂದ ಕೋಟಾ ಹಾಸ್ಟೆಲ್‌ನಲ್ಲಿದ್ದ. ಇತ್ತ ವಿದ್ಯಾರ್ಥಿಯ ತಾಯಿ ಬಸ್ ಹಿಡಿದು ನೇರವಾಗಿ ಕೋಟಾಗೆ ತೆರಳಿದ್ದಾರೆ. ಹೀಗೆ ತೆರಳುವಾಗ ಮನೆಯಲ್ಲಿ ಬೆಳೆದ ಮಗನ ನೆಚ್ಚಿನ ಸೀಬೆ ಹಣ್ಣನ್ನು ಒಯ್ದಿದ್ದಾಳೆ. ಸೀಬೆ ಹಣ್ಣು ಮಗನ ಇಷ್ಟದ ತಿಂಡಿಗಳನ್ನು ತೆಗೆದುಕೊಂಡು ತಾಯಿ ಬಸ್ ಮೂಲಕ ಕೋಟಾ ತಲುಪಿದ್ದಾಳೆ.

ಕೋಟಾ ಆಸ್ಪತ್ರೆಗೆ ಆಟೋದಲ್ಲಿ ಬಂದಿಳಿದ ತಾಯಿ ಎಲ್ಲವೂ ಸರಿಯಿಲ್ಲ ಎಂದು ಅನಿಸಿದೆ. ಕಾರಣ ತಾಯಿ ಹಾಸ್ಟೆಲ್ ಬಳಿ ತೆರಳುತ್ತಿದ್ದಂತೆ ಪೊಲೀಸರು, ಹಾಸ್ಟೆಲ್ ಸಿಬ್ಬಂದಿಗಳು ಕಾಣಿಸಿಕೊಂಡಿದ್ದಾರೆ. ನೇರವಾಗಿ ಮಗನ ಹಾಸ್ಟೆಲ್ ಬ್ಲಾಕ್ ಬಳಿ ಬಂದಿದ್ದಾರೆ. ಈ ವೇಳೆ ಕೋಣೆಯ ಬಳಿ ಬರುತ್ತಿದ್ದಂತೆ ಪೊಲೀಸರು, ಒಂದಷ್ಟು ಸಿಬ್ಬಂಧಿಗಳು ವಿದ್ಯಾರ್ಥಿಗಳು ಸೇರಿದ್ದಾರೆ. ತಾಯಿಗೆ ಆತಂಕ ಹೆಚ್ಚಾಗತೊಡಗಿದೆ. ಹತ್ತಿರ ಬಂದು ನೋಡಿದರೆ ತನ್ನದೇ ಮಗ ದುರಂತ ಅಂತ್ಯ ಕಂಡಿದ್ದ. ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿ ಈ ಆಘಾತ ತಾಳಲಾರದೆ ಪ್ರಜ್ಞೆ ತಪ್ಪಿ ಕುಸಿದು ಬಿದಿದ್ದಾರೆ. ಪೊಲೀಸರು ಹಾಗೂ ಸಿಬ್ಬಂದಿಗಳು ತಾಯಿಯನ್ನು ಪಕ್ಕದ ಕೋಣೆಯಲ್ಲಿ ಮಲಗಿಸಿ ವೈದ್ಯರಿಗೆ ಸೂಚಿಸಿದ್ದಾರೆ.

3 ಗಂಟೆ ಪ್ರಜ್ಞೆ ಇಲ್ಲದೆ ಮಲಗಿದ ತಾಯಿ ಬಳಿಕ ಚೇತರಿಸಿಕೊಂಡು ಎದ್ದಿದ್ದಾರೆ. ಆದರೆ ಮಗನಿಲ್ಲದ ನೋವು ತಾಳಲಾರದೆ ಕೂಗಿಕೊಂಡಿದ್ದಾರೆ. ದೆಹಲಿಯಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡುವಂತೆ ತಾಯಿ ಪೊಲೀಸರಿಗೆ ಸೂಚಿಸಿದ್ದಾರೆ. ಮಗನಿಗಾಗಿ ತಂದ ತಿಂಡಿ, ಸೀಬೆ ಹಣ್ಣು ನೋಡಿ ಮತ್ತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕೋಟಾದಲ್ಲಿ ವಿದ್ಯಾರ್ಥಿಗಳ ದುರಂತ ಅಂತ್ಯಕ್ಕೆ ಕೊನೆ ಇಲ್ಲದಾಗಿದೆ. ಈ ಘಟನೆಗೂ 2 ಗಂಟೆ ಮೊದಲು 24 ವರ್ಷದ ವೈದ್ಯೆ ವಿದ್ಯಾರ್ಥಿನಿ ದುರಂತ ಅಂತ್ಯ ಕಂಡಿದ್ದಳು.

ಮಕ್ಕಳು ಶಾಲೆಗೆ ಹೋಗಲು ನಿರಾಕರಿಸುತ್ತಾರಾ? ಹೀಗೆ ಮಾಡಿದರೆ ಪ್ರತಿ ದಿನ ಹಾಜರ್
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ