ಭಾರತದ ನಿಗೂಡ ವ್ಯಾಧಿಗೆ 17 ಸಾವು, 230 ಮಂದಿ ಕ್ವಾರಂಟೈನ್; ವೈದ್ಯರ ರಜೆ ರದ್ದುಗೊಳಿಸಿದ ಜೆಕೆ

Published : Jan 25, 2025, 11:18 AM ISTUpdated : Jan 25, 2025, 11:23 AM IST
ಭಾರತದ ನಿಗೂಡ ವ್ಯಾಧಿಗೆ 17 ಸಾವು,  230 ಮಂದಿ ಕ್ವಾರಂಟೈನ್; ವೈದ್ಯರ ರಜೆ ರದ್ದುಗೊಳಿಸಿದ ಜೆಕೆ

ಸಾರಾಂಶ

ಭಾರತದಲ್ಲಿ ನಿಗೂಢ ವ್ಯಾಧಿ ಕಾಣಿಸಿಕೊಂಡಿದೆ. ಇದರಿಂದ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಬರೋಬ್ಬರಿ 230 ಮಂದಿಯನ್ನು ಕ್ವಾಂರಟೈನ್ ಮಾಡಲಾಗಿದೆ.  ಇದೀಗ ಸರ್ಕಾರ ವೈದ್ಯರ ರಜೆ ರದ್ದುಗೊಳಿಸಿದೆ.

ಶ್ರೀನಗರ(ಜ.25) ನಿಗೂಢ ಆರೋಗ್ಯ ಸಮಸ್ಯೆ ಇದೀಗ ಭಾರತವನ್ನು ಕಾಡುತ್ತಿದೆ. ಜಮ್ಮು ಮತ್ತು ಕಾಶ್ಮೀರದ ರಜೌರಿಯ ಹಳ್ಳಿಯಲ್ಲಿ ಈ ನಿಗೂಢ ವ್ಯಾಧಿ ಕಾಣಿಸಿಕೊಂಡಿದೆ. ಈ ಸಮಸ್ಯೆಯಿಂದ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. 230 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಆತಂಕ ಮಾತ್ರ ನಿಂತಿಲ್ಲ. ಈ ಸಮಸ್ಯೆಗೆ ವಿಷಾಹಾರ, ಬ್ಯಾಕ್ಟೀರಿಯಾ, ವೈರಸ್ ಕಾರಣವಲ್ಲ ಅನ್ನೋದು ಲ್ಯಾಬ್‌ನಿಂದ ಬಹಿರಂಗವಾಗಿದೆ. ಟಾಕ್ಸಿನ್ ಕಾರಣವಾಗಿಬರಬುಹುದು ಅನ್ನೋ ಅನುಮಾನಗಳು ವ್ಯಕ್ತವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಣಿಸಿಕೊಂಡಿರುವ ಈ ಸಮಸ್ಯೆಯಿಂದ ಇದೀಗ ಕಣಿವೆ ರಾಜ್ಯದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ವೈದ್ಯರ ರಜೆಯನ್ನು ರದ್ದುಗೊಳಿಸಲಾಗಿದೆ.

ಬಾಧಲ್ ಗ್ರಾಮದಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಮೂರು ಕುಟುಂಬದ ಬಹುತೇಕರು ಈ ನಿಗೂಢ ವ್ಯಾಧಿಗೆ ಬಲಿಯಾಗಿದ್ದಾರೆ. ಹೀಗಾಗಿ ವೈದ್ಯರು, ನರ್ಸ್, ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳ ರಜೆ ರದ್ದು ಮಾಡಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ. ಕಳೆದ ಒಂದುವರೆ ತಿಂಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಇದು ಜನರಲ್ಲಿ ಆತಂಕ ಹೆಚ್ಚಿಸಿದೆ. ಟಾಕ್ಸಿಕಾಲಜಿ ಲ್ಯಾಬರೋಟರಿ ಈ  ಕುರಿತು ವರದಿ ನೀಡಿದೆ. ಯಾವುದೇ ಇನ್‌ಫೆಕ್ಷನ್ ಆಗಿಲ್ಲ ಎಂದಿದೆ. ವೈರಸ್ ಹಾಗೂ ಇತರ ಬ್ಯಾಕ್ಟೀರಿಯಾ ಸಮಸ್ಯೆಗಳು ಸಾವಿಗೆ ಕಾರಣವಾಗಿಲ್ಲ, ಟಾಕ್ಸಿಕ್ ಕಾರಣವಾಗಿರುವ ಸಾಧ್ಯತೆಯನ್ನು ಲ್ಯಾಬ್ ವರದಿ ಹೇಳುತ್ತಿದೆ. ಆರೋಗ್ಯ ಸಮಸ್ಯೆ ಗಂಭೀರವಾಗುತ್ತಿದ್ದಂತೆ ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಈ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. 

ಜಮ್ಮು ಕಾಶ್ಮೀರದಲ್ಲಿ ನಿಗೂಢ ಕಾಯಿಲೆಗೆ ಮತ್ತೆರಡು ಬಲಿ, ಸಾವಿನ ಸಂಖ್ಯೆ 14ಕ್ಕೆ ಏರಿಕೆ!

ಸಮಸ್ಯೆ ಗಂಭೀರವಾಗುತ್ತದ್ದಂತೆ ಬಾಧಲ್ ಗ್ರಾಮದಲ್ಲಿ 230 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇತ್ತ ಹೆಚ್ಚುವರಿಯಾಗಿ ವೈದ್ಯಕೀಯ ಸಿಬ್ಬಂಧಿಗಳನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ. ರಜೌರಿ ಮೆಡಿಕಲ್ ಕಾಲೇಜು ವೈದ್ಯರು ಸಿಬ್ಬಂಧಿಗಳ ರಜೆ ರದ್ದುಗೊಳಿಸಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ರಜೌರಿ ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಲಾಗಿದೆ. ಮತ್ತಷ್ಟು ಗ್ರಾಮಸ್ಥರ ತಪಾಸಣೆ ನಡೆಸಲಾಗುತ್ತಿದೆ.

ಟಾಕ್ಸಿನ್ ಕುರಿತು ತನಿಖೆ ನಡೆಯುತ್ತಿದೆ. ಇದೇ ವೇಳೆ ಬೇರೆ ಆಯಾಮಗಳಿಂದಲೂ ತನಿಖೆ ನಡೆಯಲಿದೆ. ಶೀಘ್ರದಲ್ಲೇ ಕಾರಣ ಪತ್ತೆಯಾಗಲಿದೆ. ಸದ್ಯ ಗ್ರಾಮಸ್ಥರನ್ನು ಈ ಅಪಾಯದಿಂದ ಪಾರುಮಾಡಬೇಕಿದೆ ಎಂದು ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ. ಆರಂಭದಲ್ಲಿ ವಿಷಪ್ರಾಶನವಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಹೆಚ್ಚಿನವರಲ್ಲಿ ಇದೇ ರೀತಿ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಕಾರಣ ಪತ್ತೆಗೆ ತನಿಖೆ ನಡೆಸುತ್ತಿದೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!