ಮುಂಬೈನಲ್ಲಿ ರೆಸಿಡೆನ್ಸಿ ಸೊಸೈಟಿಯೊಂದರ ಇಡೀ ಸಿಬ್ಬಂದಿ ಕಾಣೆಯಾದ ಬೀದಿ ನಾಯಿಯನ್ನು ಆರತಿ ಮತ್ತು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಿದ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಿಗಳು ಮನುಷ್ಯನ ಉತ್ತಮ ಸ್ನೇಹಿತರು ಎಂಬುದಕ್ಕೆ ಹಲವು ಸಾಕ್ಷಿಗಳು ನಮ್ಮೆದುರಿಗಿವೆ. ಸಾಕುನಾಯಿಗಳನ್ನು ಜನ ತುಂಬಾ ಪ್ರೀತಿಸುತ್ತಾರೆ. ಆದರೆ ಇಲ್ಲೊಂದು ಕಡೆ ಬೀದಿ ನಾಯಿಗೂ ಸಾಕುನಾಯಿಯಂತೆ ಅದೇ ಮಾನ ಸಮ್ಮಾನಗಳು ದೊರೆತಿವೆ.
ಕೆಲ ದಿನಗಳ ಹಿಂದೆ ಮುಂಬೈನ (Mumbai) ಪ್ರಭಾದೇವಿ (Prabhadevi) ರೆಸಿಡೆನ್ಸಿ ಸೊಸೈಟಿಯಿಂದ ಬೀದಿ ನಾಯಿ ವಿಸ್ಕಿ (Whiskey) ನಾಪತ್ತೆಯಾಗಿತ್ತು. ಈ ವಿಸ್ಕಿ ರೆಸಿಡೆನ್ಸಿ ಪ್ರದೇಶದ ಹಲವರ ಅಚ್ಚುಮೆಚ್ಚಿನ ಪ್ರಾಣಿಯಾಗಿದ್ದರಿಂದ ಇದರ ನಾಪತ್ತೆ ನಿವಾಸಿಗಳಲ್ಲಿ ಬೇಸರ ತರಿಸಿತ್ತು. ಹೀಗಾಗಿ ಇಲ್ಲಿನ ನಿವಾಸಿಗಳು ಈ ವಿಸ್ಕಿಯನ್ನು ಹುಡುಕಲು ಹೊರಟಿದ್ದು, ಒಂದು ವಾರದ ಸುದೀರ್ಘ ಹುಡುಕಾಟದ ನಂತರ, ಕೆಲವು ನಿವಾಸಿಗಳಿಗೆ ವಿಲ್ಸನ್ ಕಾಲೇಜು ಬಳಿಯ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ವಿಸ್ಕಿ ಅಲೆದಾಡುತ್ತಿದ್ದಿದ್ದು ಕಂಡಿದೆ. ಅಲ್ಲಿಂದ ವಿಸ್ಕಿಯನ್ನು ನಿವಾಸಿಗಳು ಮರಳಿ ಕರೆತಂದಿದ್ದು, ಅದಕ್ಕೆ ತಟ್ಟೆಯಲ್ಲಿ ಆರತಿ ಎತ್ತಿ ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದ್ದಾರೆ.
ಈ ಬೀದಿನಾಯಿ ಹೆಸರಿನಲ್ಲಿ ಒಂದು ಇನ್ಸ್ಟಾಗ್ರಾಮ್ ಖಾತೆಯೂ ಇದೆ. ಸ್ಟೀಟ್ ಡಾಗ್ಸ್ ಆಫ್ ಬಾಂಬೆ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಬೀದಿ ನಾಯಿಯ ಮೇಲಿನ ಇಲ್ಲಿನ ಜನರ ಪ್ರೀತಿಗೆ ನೆಟ್ಟಿಗರು ಸಂತೋಷಗೊಂಡಿದ್ದು, ವಿಸ್ಕಿಗೆ ಹೃದಯದ ಇಮೋಜಿಗಳ ಕಾಮೆಂಟ್ ಮಾಡಿದ್ದಾರೆ.
ಈ ನಾಯಿಮರಿಗೂ ಬೇಕು ಶವರ್‌ಬಾತ್... ಸಿಂಕ್‌ನಲ್ಲಿ ಸ್ನಾನ ಮಾಡುವ ಶ್ವಾನ
ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತರು, ತಮ್ಮ ಮಾಲೀಕನೊಂದಿಗೆ ಭಾವಾನಾತ್ಮಕವಾದ ನಂಟು ಹೊಂದಿರುವ ಶ್ವಾನಗಳು ಮನುಷ್ಯ ಹೋದಲೆಲ್ಲಾ ಜೊತೆಯಾಗಿ ಬಂದು ಕಷ್ಟ ಸುಖದಲ್ಲಿ ಜೊತೆ ಇರುತ್ತವೆ. ಆದರೆ ದೃಷ್ಠಿಹೀನ ಶ್ವಾನಗಳಿಗೆ ಹೀಗೆ ಹಿಂಬಾಲಿಸಲು ಸಾಧ್ಯವಿಲ್ಲ. ಇದನ್ನರಿತ ಶ್ವಾನದ ಮಾಲೀಕನೋರ್ವ ಹೊಸ ಐಡಿಯಾ ಮಾಡಿದ್ದು, ಆ ಐಡಿಯಾ ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.
ಅಮ್ಮನ ಸಾವಿನ ನಂತರ ವೃದ್ಧ ಅಪ್ಪನಿಗೆ ನಾಯಿ ಗಿಫ್ಟ್ ನೀಡಿದ ಮಕ್ಕಳು... ಒಂಟಿ ಬದುಕಿಗೆ ಜಂಟಿಯಾದ ಶ್ವಾನ
ಈತ ಸಣ್ಣ ಮಕ್ಕಳ ಶೂಗಳಲ್ಲಿ ಇರುವಂತಹ ಪೀ ಪೀ ಸೌಂಡ್ ಬರುವಂತಹ ಪೀಪೀಗಳನ್ನು ತನ್ನ ಚಪ್ಪಲಿ ಹಾಗೂ ಕೆಲವು ಆಟಿಕೆಗಳಿಗೆ ಅಳವಡಿಸಿದ್ದಾನೆ. ಈ ಸದ್ದನ್ನು ಕೇಳುವ ಶ್ವಾನ ಈತನನ್ನೇ ಹಿಂಬಾಲಿಸುತ್ತದೆ. ದೈಹಿಕವಾಗಿ ಅಸಮರ್ಥತೆ ಹೊಂದಿರುವ ಸಾಕು ಬೆಕ್ಕುಗಳು ಅಥವಾ ನಾಯಿಗಳನ್ನು ದತ್ತು ತೆಗೆದುಕೊಳ್ಳುವ ಜನರು ಖಂಡಿತವಾಗಿಯೂ ಬಂಗಾರದ ಹೃದಯವನ್ನು ಹೊಂದಿರುತ್ತಾರೆ. ನಟ ಮತ್ತು ವಕೀಲನಾಗಿರುವ ರಾಕಿ ಕನಕ (Rocky Kanaka) ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ತಮ್ಮ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದು ಅವರು ದೃಷ್ಟಿಹೀನ ನಾಯಿಗಳ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದಾರೆ ಎಂಬುದನ್ನು ತೋರಿಸುತ್ತದೆ.
ಇದರಲ್ಲಿ ಅವರು ಬೂಟ್‌ನ ಅಡಿಭಾಗದಲ್ಲಿ ತೂತು ಮಾಡಿ ಅದರಲ್ಲಿ ಈ ಸದ್ದು ಮಾಡುವ ಪೀಪೀಗಳನ್ನು ಅಳವಡಿಸುತ್ತಾರೆ. ಇದನ್ನು ಮಾಡಲು ಅವರು ಚಾಕುವನ್ನು ಬಳಸುತ್ತಾರೆ. ಈ ವಿಡಿಯೋವನ್ನು ರೆಕಾರ್ಡ್ ಮಡುವ ವ್ಯಕ್ತಿ ಆತನಿಗೆ ನೀನು ಏನು ಮಾಡುತ್ತಿಯಾ ಎಂದು ಕೇಳುತ್ತಾನೆ. ಆದರೆ ಆತ ನಗುತ್ತಾ ಬೂಟಿನ ಅಡಿಭಾಗವನ್ನು ಕತ್ತರಿಸುವುದನ್ನು ಮುಂದುವರಿಸುತ್ತಾನೆ. ನಂತರ ಪೀ ಪೀ ಸದ್ದು ಮಾಡುವ ಪೀಪೀಯನ್ನು ಶೂನ ಅಡಿಭಾಗದಲ್ಲಿ ಇಟ್ಟು ಅದನ್ನು ಭದ್ರಪಡಿಸುತ್ತಾನೆ.