
ಬೆಂಗಳೂರು (ಏ.22): ಪಹಲ್ಗಾಮ್‌ನಲ್ಲಿ ಪ್ರವಾಸಿಗರ ರಕ್ತದೋಕುಳಿ ಹರಿದಿದೆ. ಕ್ಷಣದಿಂದ ಕ್ಷಣಕ್ಕೆ ಬರುತ್ತಿರುವ ಮಾಹಿತಿಗಳು ಪೈಶಾಚಿಕ ಕೃತ್ಯದ ಮಾಹಿತಿಗಳನ್ನು ನೀಡಿದೆ. ಇದು ರಾಕ್ಷಸೀಯ ಕೃತ್ಯ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಅದರೆ, ಇಂಥದ್ದೊಂದು ಮಾರಣಹೋಮವನ್ನು ಭಾರತ ಸರ್ಕಾರ ಹೇಗೆ ನಿಭಾಯಿಸಲಿದೆ ಅನ್ನೋದೇ ದೇಶದ ಜನರ ಮುಂದಿರುವ ಪ್ರಶ್ನೆಯಾಗಿದೆ.
ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪಹಲ್ಗಾಮ್ ರಕ್ತದೋಕುಳಿಗೆ ಕಂಬಿನಿ ಮಿಡಿಯಲಾಗಿದೆ. ಪಹಲ್ಗಾಮ್‌ನ ಬೈಸರಣ್ ಬಳಿ ನೆರೆದಿದ್ದ ಪ್ರವಾಸಿಗರನ್ನು ಗುರಿಯಾಗಿ 5-6 ಉಗ್ರರು ದಾಳಿ ಮಾಡಿದ್ದು, ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿಲ್ಲ. ಬದಲಾಗಿ ಪ್ರವಾಸಿಗನ ಹೆಸರು ಹಾಗೂ ಧರ್ಮವನ್ನು ಕೇಳಿ ಆತನ ಮೇಲೆ ಗುಂಡು ಹಾರಿಸಿದ್ದರೆ. ಆತ ಹಿಂದು ಹೌದೋ ಅಲ್ಲವೋ ಅನ್ನೋದನ್ನ ಖಚಿತಪಡಿಸಿಕೊಳ್ಳಲು ಅವರ ಪ್ಯಾಂಟ್‌ಗಳನ್ನು ಎಳೆದು ಚೆಕ್ ಮಾಡಲಾಗಿದೆ. ಆ ನಂತರವೇ ಆತ ಹಿಂದು ಎಂದು ತಿಳಿದ ಬಳಿಕವೇ ಗುಂಡು ಹಾರಿಸಲಾಗಿದೆ. ಟಿಆರ್‌ಎಫ್ ಸಂಘಟನೆಯ ಉಗ್ರರು ಈ ಪಾಪಕೃತ್ಯದ ಹೊಣೆ ಹೊತ್ತುಕೊಂಡಿದೆ.
2019ರ ಫೆಬ್ರವರಿಯಲ್ಲಿ 40 ಜನ ಸಿಆರ್‌ಪಿಎಫ್ ಯೋಧರನ್ನು ನಡುರಸ್ತೆಯಲ್ಲಿ ಆತ್ಮಾಹುತಿ ದಾಳಿ ಮಾಡಿ ಕೊಲ್ಲಲಾಗಿತ್ತು. ಅದರ ನಂತರ ನಡೆದಿರುವ ಅತಿದೊಡ್ಡ ಟೆರರಿಸ್ಟ್ ದಾಳಿ ಇದಾಗಿದ್ದು, 'ಈಗ ಸಾವು ಕೂಡ ಧರ್ಮವನ್ನೇ ನೋಡಿದೆ' ಎಂದು ಅಮಿತ್ ಸೋನಿ ಎನ್ನುವವರು ಟ್ವೀಟ್ ಮಾಡಿದ್ದಾರೆ.
'ಹಿಂದಿ, ಕನ್ನಡ, ತಮಿಳು, ಮರಾಠಿ.. ಇತರ ರಾಜ್ಯದ ಭಾಷೆಗಳು..ನಿಮ್ಮ ಯುದ್ಧ ಜಾತಿ, ಭಾಷೆ ಹಾಗೂ ರಾಜ್ಯಕ್ಕಾಗಿ ಆಗಿದೆ. ಆದರೆ, ಅವರು ಮಾತ್ರ ನಿನ್ನ ಧರ್ಮವನ್ನು ಕೇಳಿ ಕೊಲ್ಲುತ್ತಿದ್ದಾರೆ' ಅನ್ನೋ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.
'ಅವರು ಆತನ ಧರ್ಮವನ್ನು ಕೇಳಿದರು. ಆತನ ಪ್ಯಾಂಟ್ ಎಳೆದು ಚೆಕ್ ಮಾಡಿದರು. ಆತ ಹಿಂದು ಅನ್ನೋದನ್ನ ಖಚಿತಪಡಿಸಿಕೊಂಡರು.ಆ ಬಳಿಕ ಗುಂಡಿಟ್ಟರು. ಇದೆಲ್ಲಾ ಆದರೂ ಟೆರರಿಸಂಗೆ ಧರ್ಮ ಅನ್ನೋದಿಲ್ಲ' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
'ಅವರು ಇವನ ಐಡಿ ಕಾರ್ಡ್ ನೋಡಿದರು. ಆತನ ಪ್ಯಾಂಟ್‌ಅನ್ನು ಎಳೆದರು.ಆತ ಹಿಂದೂ ಅನ್ನೋದನ್ನ ಖಚಿತಪಡಿಸಿಕೊಂಡರು. ಬಳಿಕ ಪಾಯಿಂಟ್ ಬ್ಲ್ಯಾಂಕ್ ರೇಂಜ್‌ಅಲ್ಲಿ ಗುಂಡಿಟ್ಟರು. ಈಗಲೂ ಕೂಡ ಅವರು ಭಯೋತ್ಪಾದನೆಗೆ ಧರ್ಮವಿಲ್ಲ ಅನ್ನುತ್ತಾರೆ' ಎಂದು ಬೇಸರ ವ್ಯಕ್ತಪಡಿಸಿ ಪೋಸ್ಟರ್ ಹಂಚಿದ್ದಾರೆ.
ದಾಲ್ ಲೇಕ್‌ನಲ್ಲಿ ಪತ್ನಿ ಪಲ್ಲವಿ ಜೊತೆ ದೋಣಿ ವಿಹಾರ ಮಾಡಿದ್ದ ಮಂಜುನಾಥ್ ಕೊನೇ ವಿಡಿಯೋ ವೈರಲ್!
'ಗುಂಡಿಟ್ಟವರು ಇವನ ರಾಜ್ಯ ಕೇಳಲಿಲ್ಲ. ಆತ ಭಾಷೆ ಯಾವುದು ಅನ್ನೋದನ್ನ ಕೇಳಲಿಲ್ಲ. ಆತನ ಜಾತಿ ಯಾವುದು ಎಂದೂ ಕೇಳಲಿಲ್ಲ. ಅವರು ಕೇಳಿದ್ದು ಒಂದೇ 'ಧರ್ಮ ಯಾವುದು' ಎಂದು ಪೋಸ್ಟರ್ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್‌ನಲ್ಲಿ 25 ಪ್ರವಾಸಿಗರ ನರಮೇಧ, ದಾಳಿಯ ಹೊಣೆ ಹೊತ್ತುಕೊಂಡ The Resistance Front
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ