ಸರಸರನೇ ಬಂದು ಚಪ್ಪಲಿ ಕದ್ದೊಯ್ದ ಹಾವು

By Mahmad Rafik  |  First Published Aug 13, 2024, 3:13 PM IST

ಮಹಿಳೆ ಎಸೆದ ಚಪ್ಪಲಿಯನ್ನು ಹಾವು ಬಾಯಲ್ಲಿ ಕಚ್ಚಿಕೊಂಡು ಹೋಗಿದೆ. ಮಹಿಳೆ ನನ್ನ ಚಪ್ಪಲಿ ಎಂದು ಕೂಗಿಕೊಂಡಿದ್ದಾರೆ.


ಪಟನಾ: ಜನವಸತಿ ಪ್ರದೇಶದಲ್ಲಿ ಹಾವು ಕಾಣಿಸಿಕೊಂಡರೆ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ದೊಡ್ಡ ಗಾತ್ರದ ಹಾವುಗಳ ರಕ್ಷಣೆಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲಿಯೂ ಮಾನ್ಸೂನ ಬಳಿಕ ಹೆಚ್ಚಾಗಿ ಹಾವುಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಇದೀಗ ಸರಸರನೇ ಬಂದ ಹಾವು, ಅಲ್ಲಿ ಎಸೆದ ಚಪ್ಪಲಿಯನ್ನು ಬಾಯಲ್ಲಿ ಕಚ್ಚಿ ಎತ್ಕೊಂಡು ಹೋಗಿದೆ. ಹಾವು ಚಪ್ಪಲಿಯನ್ನು ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ. 

ಮನೆಯ ಬಳಿ ಹಾವು ಬರೋದನ್ನು ತಡೆಯಲು ಮಹಿಳೆ ದೂರದಿಂದ ನಿಂತು ಚಪ್ಪಲಿ ಎಸೆಯುತ್ತಾರೆ. ಆದ್ರೆ ಕಿಲಾಡಿ ಹಾವು ಮಹಿಳೆ ಎಸೆದ ಚಪ್ಪಲಿಯನ್ನು ಬಾಯಲ್ಲಿ ಹಿಡಿದುಕೊಂಡು ಸರಸರನೇ ಅಂತ ಹೋಗಿದೆ. ಕಾಮಗಾರಿ ಹಂತದ ಕಟ್ಟಡದೊಳಗೆ ಹಾವು ಚಪ್ಪಲಿ ಸಮೇತ ಹೋಗುತ್ತದೆ. ವಿಡಿಯೋದಲ್ಲಿ ಮಹಿಳೆ, ಅಯ್ಯೋ ಹಾವು ಚಪ್ಪಲಿ ತೆಗೆದುಕೊಂಡು ಹೋಯ್ತು ಅಂತ ಹೇಳುವುದು ವಿಡಿಯೋದಲ್ಲಿ ಕೇಳಿಸಬಹುದು. 

Tap to resize

Latest Videos

ಮಹಿಳೆ ಮಾತನಾಡುವ ಶೈಲಿ ಗಮನಿಸಿದ್ರೆ ಇದು ಭೋಜಪುರಿ ಭಾಷೆ ಅಂತ ಗೊತ್ತಾಗುತ್ತದೆ. ಈ ಘಟನೆ ಬಿಹಾರ ಭಾಗದಲ್ಲಿದ್ದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಆದ್ರೆ ಯಾವ ಊರಿನಲ್ಲಿ ಈ ರೀತಿಯಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಹಾವು ಅಷ್ಟು ದೂರ ಹೋದ್ರೂ ಚಪ್ಪಲಿ ಮಾತ್ರ ಕೆಳಗೆ ಬಿದ್ದಿಲ್ಲ. ವಿಡಿಯೋ ನೋಡಿದ ನೆಟ್ಟಿಗರು ಬಿಗಿಯಾದ ಹಿಡಿತ ಅಂದರೆ ಇದೇ ಇರಬೇಕು ಎಂದು ಹೇಳುತ್ತಿದ್ದಾರೆ.

1 ಹಾವು 3 ಮುಂಗುಸಿಗಳ ಉಗ್ರ ಹೋರಾಟಕ್ಕೆ ವೇದಿಕೆಯಾದ ಏರ್‌ಪೋರ್ಟ್ ರನ್‌ವೇ: ವೀಡಿಯೋ ವೈರಲ್

चप्पल चोर साँप 🤣 pic.twitter.com/41VezsdAda

— Dinesh Kumar (@DineshKumarLive)
click me!