ಹೆಲ್ಮೆಟ್ ಧರಿಸುವಾಗ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಹೆಲ್ಮೆಟ್ ಒಳಗೆ ವಿಷಕಾರಿ ಹಾವಿನ ಮರಿಗಳಿರುವ ಸಾಧ್ಯತೆ ಇರುತ್ತದೆ. ಈಗ ಒಂದು ವಿಡಿಯೋ ವೈರಲ್ ಆಗಿದ್ದು, ಜನರನ್ನು ಎಚ್ಚರಿಸಿದೆ.
ಸೋಶಿಯಲ್ ಮೀಡಿಯಾ (Social media)ದಲ್ಲಿ ವೈರಲ್ ಆದ ವಿಡಿಯೋ ಒಂದು ಜನರನ್ನು ಅಚ್ಚರಿಗೊಳಿಸುವ ಜೊತೆಗೆ ಎಚ್ಚರಿಸಿದೆ. ಯಾವುದೇ ವ್ಯಕ್ತಿ ಹೆಲ್ಮೆಟ್ (helmet) ಧರಿಸುವ ಮುನ್ನ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಹೆಲ್ಮೆಟ್ ನಲ್ಲಿ ಮರಿ ಹಾವುಗಳಿರುವ ಸಾಧ್ಯತೆ ಇದ್ದು, ಇದು ನಿಮ್ಮ ಜೀವಕ್ಕೆ ಕುತ್ತು ತರಬಹುದು. ಸಾಮಾಜಿಕ ಜಾಲತಾಣದಲ್ಲಿ ಹಾವಿನ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದೆ. ಕನ್ನಡದಲ್ಲಿ ವೈಸ್ ಇದ್ದು, ಹೆಲ್ಮೆಟ್ ಒಳಗಿದ್ದ ಹಾವು ಕಚ್ಚಿ ವ್ಯಕ್ತಿ ಸಾವು ಎಂದು ಶೀರ್ಷಿಕೆ ಹಾಕಲಾಗಿದೆ. ದಕ್ಷಿಣ ಭಾರತದಲ್ಲಿ ನಡೆದ ಘಟನೆ ಇದು ಎಂದು MANOJ SHARMA LUCKNOW UP ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
ಈ ವಿಡಿಯೋದಲ್ಲಿ ಬೈಕ್ (bike) ಮೇಲೆ ಬಿದ್ದಿರುವ ವ್ಯಕ್ತಿಯೊಬ್ಬನನ್ನು ನೋಡ್ಬಹುದು. ಅದನ್ನು ನೋಡಿ ಓಡಿ ಬರುವ ಜನರು ಆತನನ್ನು ಆಂಬುಲೆನ್ಸ್ ಗೆ ಹಾಕ್ತಿದ್ದಾರೆ. ಇತ್ತ ಹೆಲ್ಮೆಟ್ ಒಳಗೆ ಹಾವಿನ ಮರಿ ಇದ್ದು, ಹೆಲ್ಮೆಟನ್ನು ಕೋಲಿನಿಂದ ಅಲ್ಲಾಡಿಸಿದಾಗ ಅದು ಹೊರಗೆ ಬರೋದನ್ನು ನೀವು ಕಾಣಬಹುದು. ನಾಗರ ಹಾವಿನ ಮರಿ ಈ ವ್ಯಕ್ತಿಗೆ ಕಚ್ಚಿದೆ ಎನ್ನಲಾಗ್ತಿದೆ. ಮನೆಯಿಂದ ಹೊರಗೆ ಬಂದ ವ್ಯಕ್ತಿ ಹೆಲ್ಮೆಟ್ ಧರಿಸಿ ಸ್ಕೂಟಿ ಹತ್ತಿದ್ದಾನೆ. ಹೆಲ್ಮೆಟ್ ಒಳಗಿದ್ದ ಹಾವಿನ ಮರಿ ಈತನಿಗೆ ಕಚ್ಚಿದೆ. ಆತ ಅಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ. ಆದ್ರೆ ಎಲ್ಲಿ, ಯಾವ ವ್ಯಕ್ತಿಗೆ ಈ ಹಾವು ಕಚ್ಚಿದೆ ಎನ್ನುವ ಬಗ್ಗೆ ವಿಡಿಯೋದಲ್ಲಿ ಸ್ಪಷ್ಟ ಮಾಹಿತಿ ಇಲ್ಲ.
undefined
ಮೊಬೈಲ್ ಏರ್ ಪ್ಲೇನ್ ಮೋಡ್ ಆನ್ ಆಗಿಲ್ಲ ಅಂದ್ರೆ ವಿಮಾನ ಕ್ರ್ಯಾಶ್ ಆಗುತ್ತಾ?
ಈ ವಿಡಿಯೋ 2023ರ ಕೇರಳದಲ್ಲಿ ನಡೆದ ಘಟನೆಯನ್ನು ನೆನಪಿಸುತ್ತದೆ. ಸೋಜನ್ ಎಂಬ ವ್ಯಕ್ತಿ ಕೆಲಸ ಮುಗಿಸಿ ಮನೆಗೆ ಬರುವ ಸಮಯದಲ್ಲಿ ಹೆಲ್ಮೆಟ್ ಧರಿಸಲು ಮುಂದಾಗಿದ್ದರು. ಆದ್ರೆ ಹೆಲ್ಮೆಟ್ ಒಳಗೆ ವಿಚಿತ್ರ ಚಲನೆಯೊಂದನ್ನು ಗಮನಿಸಿದ್ದರು. ಹಾಗಾಗಿ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಲಿಜೊ ಎಂಬ ಸ್ವಯಂಸೇವಕರು ಹೆಲ್ಮೆಟ್ ಪರಿಶೀಲಿಸಿದ್ದರು. ಅದ್ರಲ್ಲಿ ಎರಡು ತಿಂಗಳ ನಾಗರಹಾವಿರುವುದು ಪತ್ತೆಯಾಗಿತ್ತು. ಇದು ತುಂಬಾ ವಿಷಕಾರಿಯಾಗಿದ್ದು, ಒಂದ್ವೇಳೆ ಸೋಜನ್, ಅದನ್ನು ಗಮನಿಸದೆ ಹೆಲ್ಮೆಟ್ ಹಾಕಿದ್ದರೆ ಅವರ ಪ್ರಾಣ ಹೋಗುವ ಸಾಧ್ಯತೆ ಇದ್ದು.
ಮಂಗಳಮುಖಿಯ ಮದ್ವೆಯಾಗಲು ಮುಂದಾದ ಏಕೈಕ ಪುತ್ರ: ನೊಂದು ಸಾವಿಗೆ ಶರಣಾದ ಪೋಷಕರು
ಈಗ ದಕ್ಷಿಣ ಭಾರತದ್ದು ಎಂದು ವೈರಲ್ ಆಗಿರುವ ವಿಡಿಯೋ ನಿಜವಾದ ವಿಡಿಯೋ ಅಲ್ಲ ಎಂಬ ಅನುಮಾನವನ್ನು ಬಳಕೆದಾರರು ವ್ಯಕ್ತಪಡಿಸಿದ್ದಾರೆ. ಸ್ಕೂಟಿಯಲ್ಲಿ ಇದ್ದ ವ್ಯಕ್ತಿ ಹಾಗೂ ಹೆಲ್ಮೆಟ್ ಎರಡೂ ಬೇರೆ ವಿಡಿಯೋ ಎನ್ನಲಾಗ್ತಿದೆ. ಹಾಗೆಯೇ ಹಾವು ಕಚ್ಚಿದ ತಕ್ಷಣ ಈತ ಸಾವನ್ನಪ್ಪಿದ್ದಾನೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಹಾವು ಕಚ್ಚಿದ ತಕ್ಷಣ ಮನುಷ್ಯ ಸಾಯೋದಿಲ್ಲ. ಸುಮಾರು 8 ಗಂಟೆಗಳ ಕಾಲ ಆತ ಬದುಕಿರುವ ಸಾಧ್ಯತೆ ಇರುತ್ತದೆ. ಅದೆನೇ ಇರಲಿ ಈ ವಿಡಿಯೋ ಜನರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ. ಹಾವಿನ ಮರಿಗಳು ಹೆಲ್ಮೆಟ್, ಬೂಟ್ ಒಳಗೆ ಬೆಚ್ಚಗಿರಲು ಇಷ್ಟಪಡುತ್ತವೆ. ಪ್ರತಿ ಬಾರಿ ಹೆಲ್ಮೆಟ್ ಅಥವಾ ಬೂಟ್ ಧರಿಸುವ ಮುನ್ನ ಪರಿಶೀಲಿಸುವುದು ಮುಖ್ಯ. ಮಳೆಗಾಲದಲ್ಲಿ ಹಾವಿನ ಕಾಟ ಹೆಚ್ಚು. ಅವು ಮನೆಯೊಳಗೆ ಬರುತ್ತವೆ. ಸ್ಕೂಟಿ ಡಿಕ್ಕಿಯಲ್ಲಿ ಹಾವು ಪತ್ತೆಯಾದ ಘಟನೆಗಳಿವೆ. ಹಾಗೆಯೇ ಶೂಗಳಲ್ಲಿ ಹಾವಿನ ಮರಿ, ಚೇಳಿನ ಮರಿ ಇದ್ದ ಘಟನೆ ಈ ಹಿಂದೆ ಬೆಳಕಿಗೆ ಬಂದಿದೆ. ಭಾರತದಲ್ಲಿ ವಿಷಕಾರಿ ಹಾವಿನ ಸಂಖ್ಯೆ ಹೆಚ್ಚಿದೆ. ನಾಗರಹಾವು ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದು.
यह दक्षिण भारत का वीडियो है एक कोबरा का बच्चा हेलमेट में छुपा हुआ था और व्यक्ति के सर में काट लिया !!
जब भी आप हेलमेट पहने तो एक बार हेलमेट को ठोक कर झाड़ कर ही पहने !! pic.twitter.com/8PnRKdMXjo