ಡಿಎಂಕೆ ಕೆಳಗಿಳಿಸುವರೆಗೂ ಚಪ್ಪಲಿ ತೊಡಲ್ಲ, ಪ್ರಾಯಶ್ಚಿತ್ತವಾಗಿ 48 ದಿನ ಉಪವಾಸ: ಅಣ್ಣಾಮಲೈ ಶಪಥ

By Kannadaprabha News  |  First Published Dec 27, 2024, 7:29 AM IST

ಡಿಎಂಕೆ ಆಡಳಿತದಲ್ಲಿ ತಮಿಳುನಾಡಿನಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿರುವ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ‘ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ತನಕ ಚಪ್ಪಲಿಯನ್ನು ಧರಿಸುವುದಿಲ್ಲ.
 


ಚೆನ್ನೈ (ಡಿ.27): ಡಿಎಂಕೆ ಆಡಳಿತದಲ್ಲಿ ತಮಿಳುನಾಡಿನಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿರುವ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ‘ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ತನಕ ಚಪ್ಪಲಿಯನ್ನು ಧರಿಸುವುದಿಲ್ಲ. ಜೊತೆಗೆ ಡಿಎಂಕೆಯ ದುಷ್ಕೃತ್ಯಗಳಿಗೆ ಪ್ರಾಯಶ್ಚಿತವಾಗಿ 48 ದಿನ ಉಪವಾಸ, 6 ಸಲ ಚಾಟಿ ಬೀಸಿಕೊಳ್ಳುತ್ತೇನೆ’ ಎಂದು ಘೋಷಿಸಿದ್ದಾರೆ.

ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಖಂಡಿಸಿ ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲಿ ಡಿಎಂಕೆ ಸರ್ಕಾರವನ್ನು ಉರುಳಿಸುವವರೆಗೂ ನಾನು ಚಪ್ಪಲಿ ಧರಿಸುವುದಿಲ್ಲ’ ಎಂದು ಶಪಥ ಮಾಡಿ ತಾವು ಧರಿಸಿದ್ದ ಚಪ್ಪಲಿಯನ್ನು ಸ್ಥಳದಲ್ಲೇ ತೆಗೆದು ಹಾಕಿದರು. ಜೊತೆಗೆ, ‘ಡಿಎಂಕೆ ಸರ್ಕಾರ ಉರುಳುವವರೆಗೂ ನಾನು ಬರಿಗಾಲಿನಲ್ಲಿ ನಡೆಯುತ್ತೇನೆ. ನಾನು ಚಪ್ಪಲಿ ಧರಿಸುವುದಿಲ್ಲ’ ಇದನ್ನೆಲ್ಲ ಗಮನಿಸಿ ಎಂದು ಜನರಲ್ಲಿ ವಿನಂತಿಸುತ್ತೇನೆ. 

Tap to resize

Latest Videos

undefined

ಆಧುನಿಕ ಭಾರತದ ಶಿಲ್ಪಿ ಮನಮೋಹನ್‌ ಸಿಂಗ್‌ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದಿದ್ದರು!

ನಾವು ಚುನಾವಣೆಯಲ್ಲಿ ಗೆಲ್ಲಲು ಹಣ ನೀಡುವುದಿಲ್ಲ. ಹಣ ಹಂಚದೆ ಚುನಾವಣೆ ಎದುರಿಸುತ್ತೇವೆ’ ಎಂದರು. ಅಲ್ಲದೇ ಎಲ್ಲ ದುಷ್ಟರನ್ನು ಹೊಡೆದುರುಳಿಸಲು ಶುಕ್ರವಾರ ಕೊಯಮತ್ತೂರಿನ ತಮ್ಮ ನಿವಾಸದ ಹೊರಗೆ ಆರು ಸಲ ಚಾಟಿ ಬೀಸಿಕೊಳ್ಳುತ್ತೇನೆ ಎಂದರು. ಜೊತೆಗೆ ರಾಜ್ಯದ ಎಲ್ಲ ಆರು ಮುರುಗನ್ (ಷಣ್ಮುಖ) ಕ್ಷೇತ್ರಗಳಿಗೆ ಹೋಗಲು 48 ದಿನಗಳ ಉಪವಾಸ ಮಾಡುವುದಾಗಿ ಅಣ್ಣಾಮಲೈ ಈ ವೇಳೆ ಹೇಳಿದರು.

ಮಹಾ ಕುಂಭ ಮೇಳದ ಮೇಲೆ ದಾಳಿ: ಮುಂದಿನ ತಿಂಗಳು ಉತ್ತರ ಪ್ರದೇಶದಲ್ಲಿ ನಡೆಯಲಿರುವ ಪವಿತ್ರ ಮಹಾ ಕುಂಭಮೇಳದ ಮೇಲೆ ದಾಳಿ ನಡೆಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್ ಪನ್ನು ವಿಡಿಯೋ ಮೂಲಕ ಬೆದರಿಕೆಯೊಡ್ಡಿದ್ದಾನೆ. ಫಿಲಿಬೀತ್‌ನಲ್ಲಿ ಮೂವರು ಖಲಿಸ್ತಾನಿ ಜಿಂದಾಬಾದ್‌ ಫೋರ್ಸ್‌ನ ಉಗ್ರರನ್ನು ಉತ್ತರ ಪ್ರದೇಶ ಮತ್ತು ಪಂಜಾಬ್ ಪೊಲೀಸರು ಎನ್‌ಕೌಂಟರ್‌ ನಡೆಸಿದ ಬೆನ್ನಲ್ಲೇ ಪನ್ನು ಈ ಬೆದರಿಕೆ ಹಾಕಿದ್ದಾನೆ. ಕುಂಭಮೇಳದ ಪ್ರಮುಖ ದಿನಗಳಾದ ಜ.14 (ಮಕರ ಸಂಕ್ರಾಂತಿ), ಜ.29 (ಮೌನಿ ಅಮಾವಾಸ್ಯೆ), ಫೆ.2 (ಬಸಂತ್‌ ಪಂಚಮಿ) ರಂದು ನಡೆಯಲಿರುವ ಆಚರಣೆಗೆ ಅಡ್ಡಿಪಡಿಸುವುದಾಗಿ ಒನ್ನು ಹೇಳಿದ್ದಾನೆ.

ಕೇಂದ್ರ ಸರ್ಕಾರ ವಿರುದ್ಧ ಗಾಂಧಿ ಮಾರ್ಗದ ಕಾಂಗ್ರೆಸ್‌ ‘ನವ ಸತ್ಯಾಗ್ರಹ’ ಜನಾಂದೋಲನ

ಇನ್ನೂ ಪನ್ನೂನ್ ಬೆದರಿಕೆ ಬಗ್ಗೆ ಅಖಿಲ ಭಾರತೀಯ ಅಖಾಡ ಪರಿಷತ್‌ನ ಮಹಂತ್‌ ರವೀಂದ್ರ ಪುರಿ ಪ್ರತಿಕ್ರಿಯಿಸಿ, ‘ಪನ್ನೂನ್ ಎಂಬ ವ್ಯಕ್ತಿ ಮಹಾ ಕುಂಭಮೇಳಕ್ಕೆ ಪ್ರವೇಶಿಸಲು ಪ್ರಯತ್ನಿಸಿದರೆ ಅವನನ್ನು ಹೊಡೆದು ಓಡಿಸಲಾಗುವುದು. ಅಂತಹ ನೂರಾರು ಹುಚ್ಚರನ್ನು ನೋಡಿದ್ದೇವೆ. ಆದ್ದರಿಂದ ನಾವು ಅಂತಹ ಭ್ರಮೆಯ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದಿದ್ದಾರೆ.

click me!