ಸ್ಕೂಟರ್‌ ಓಡಿಸುವಾಗ ತಣ್ಣಗೆ ಏನೂ ತಾಕಿದ ಅನುಭವ, ಹಾವು ಕಂಡು ಹೌಹಾರಿದ ಯುವಕ!

Published : Apr 09, 2025, 12:58 PM ISTUpdated : Apr 09, 2025, 01:13 PM IST
ಸ್ಕೂಟರ್‌ ಓಡಿಸುವಾಗ ತಣ್ಣಗೆ ಏನೂ ತಾಕಿದ ಅನುಭವ, ಹಾವು ಕಂಡು ಹೌಹಾರಿದ ಯುವಕ!

ಸಾರಾಂಶ

ಕೇರಳದಲ್ಲಿ ಸ್ಕೂಟರ್ ಓಡಿಸುವಾಗ ವ್ಯಕ್ತಿಯೊಬ್ಬನಿಗೆ ತಣ್ಣಗೆ ತಾಕಿದ ಅನುಭವವಾಗಿ ಸ್ಕೂಟರ್‌ನಿಂದ ಬಿದ್ದಿದ್ದಾನೆ. ಸ್ಕೂಟರ್ ಪರಿಶೀಲಿಸಿದಾಗ ಹಾವು ಇರುವುದು ಗೊತ್ತಾಗಿದೆ. ತಜ್ಞರು ಸ್ಕೂಟರ್‌ನಿಂದ ಹಾವನ್ನು ರಕ್ಷಿಸಿದ್ದಾರೆ.

ಕೊಚ್ಚಿ (ಏ.9): ಸ್ಕೂಟರ್‌, ಬೈಕ್‌ ಓಡಿಸುವಾಗ ಎಷ್ಟು ಎಚ್ಚರಿಕೆಯಿದ್ದರೂ ಸಾಲದು. ಇದು ರಸ್ತೆಯ ಮೇಲೆ ಮಾತ್ರವಲ್ಲ, ಮನೆಯಲ್ಲಿ ಸ್ಕೂಟರ್‌ ಪಾರ್ಕ್‌ ಮಾಡಿದಾಗಲೂ ಎಚ್ಚರ ಅವಶ್ಯಕ. ವಿಷಕಾರಿ ಹಾವುಗಳು ಬೈಕ್‌ನ ಒಳೆಗೆ ಅದೇಗೋ ಹೊಕ್ಕಿಕೊಂಡು ಬಿಟ್ಟಿರುತ್ತದೆ. ಇಂಥದ್ದೆ ಹಲವಾರು ವಿಡಿಯೋಗಳನ್ನು ನಾವು ಸೋಶಿಯಲ್‌ ಮೀಡಿಯಾದಲ್ಲಿ ಕಾಣಬಹುದು.


ಕೇರಳದಲ್ಲಿ ಇತ್ತೀಚೆಗೇ ಇದೇ ರಿತಿಯ ಒಂದು ಘಟನೆಯಾಗಿದೆ. ಸ್ಕೂಟರ್‌ ಓಡಿಸುವಾಗ ವ್ಯಕ್ತಿಯೊಬ್ಬನಿಗೆ ಏನೋ ತಣ್ಣಗೆ ತಾಕಿದ ಅನುಭವವಾಗಿದೆ. ಇದರ ಬೆನ್ನಲ್ಲಿಯೇ ಆತ ಸ್ಕೂಟರ್‌ನಿಂದ ಬಿದ್ದಿದ್ದಾನೆ. ಬಳಿಕ ಸ್ಕೂಟರ್‌ಅನ್ನು ಸರಿಯಾಗಿ ಪರಿಶೀಲನೆ ಮಾಡಿದಾಗ ಅದರಲ್ಲಿ ಹಾವು ಇರುವುದು ಗೊತ್ತಾಗಿದೆ. ಸ್ಕೂಟರ್‌ನಲ್ಲಿ ತಣ್ಣಗೆ ತಾಕುವಂಥದ್ದು ಏನಿದೆ ಎಂದು ಸ್ಕೂಟರ್‌ ಓಡಿಸುವಾಗಲೇ ಅತ್ತ ಕಡೆ ಕಣ್ಣು ಹಾಯಿಸಿದ್ದಾನೆ. ಹಾವು ಇದ್ದಿದ್ದನ್ನು ಕಂಡು ಬೈಕ್‌ನಿಂದ ಬಿದ್ದಿದ್ದಾನೆ. ಬಳಿಕ ಜನರು ಬಂದು ಸ್ಕೂಟರ್‌ನಲ್ಲಿನ ಹಾವನ್ನು ತೆಗೆದಿದ್ದಾರೆ.

ಹಾವಿನ ವೀರ್ಯ ಕುಡಿತಾರೆ ಈ ಯುವ ಗಾಯಕಿ: ರುಚಿ ಹೇಗಿದ್ಯಂತೆ ಗೊತ್ತಾ?

ಸ್ಕೂಟರ್ ಮುಂಭಾಗದಲ್ಲಿರುವ ಪ್ಯಾನೆಲ್‌ನಲ್ಲಿ ಹಾವು ಪತ್ತೆಯಾಗಿದೆ. ಎರ್ನಾಕುಲಂ ಕಲೆಕ್ಟರೇಟ್‌ನಲ್ಲಿ ಉದ್ಯೋಗಿ  ಆಗಿರುವ ವ್ಯಕ್ತಿಯ ಸ್ಕೂಟರ್‌ನಲ್ಲಿ ಹಾವೊಂದು ಸಿಕ್ಕಿಬಿದ್ದಿದೆ. ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ, ವಾಹನದಲ್ಲಿ ಚಳಿ ಮತ್ತು ನಡುಕ ಎದುರಿಸಿದ್ದಾನೆ. ಹತ್ತಿರದಿಂದ ನೋಡಿದಾಗ, ಸ್ಕೂಟರ್‌ನಲ್ಲಿ ಹಾವು ಇರುವುದು ಗೊತ್ತಾಗಿದೆ. ಇದರಿಂದ, ಗಾಬರಿಗೊಂಡ ಪ್ರಯಾಣಿಕ ವಾಹನದಿಂದ ಬಿದ್ದಿದ್ದಾನೆ. ಮಾಹಿತಿ ಬಂದ ತಕ್ಷಣ, ತಜ್ಞರು ಹಾವನ್ನು ಹಿಡಿಯಲು ಬಂದಿದ್ದರು. ಸಾಕಷ್ಟು ಪ್ರಯತ್ನದ ನಂತರ, ಸ್ಕ್ರೂಡ್ರೈವರ್ ಬಳಸಿ ಸ್ಕೂಟರ್‌ನ ಮುಂಭಾಗವನ್ನು ಬಿಚ್ಚುವ ಮೂಲಕ ಒಳಗಿದ್ದ ದೊಡ್ಡ ಹಾವನ್ನು ತೆಗೆದುಹಾಕಲಾಗಿದೆ.

x`ಮೈಮರೆತು ರೀಲ್ಸ್ ಮಾಡ್ತಿದ್ದ ಯುವತಿಯ ಕಾಲಿನ ನಡುವೆ ಬಂದ 8 ಅಡಿ ಉದ್ದದ ನಾಗರಹಾವು! ಮುಂದೇನಾಯ್ತು?

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ