
ಭಾರತದ ಪವಿತ್ರ ಧಾರ್ಮಿಕ ಸ್ಥಳವಾಗಿರುವ ವಾರಾಣಾಸಿ-ಕಾಶಿಯಲ್ಲಿ ಕಾರಿನಲ್ಲಿ ಮನೆಗೆ ಬಂದ ಮಗಳನ್ನು ನೋಡಿದ ಪೋಷಕರು ಎಲ್ಲವೂ ಸರಿಯಾಗಿಲ್ಲ ಎಂದೆನಿಸಿದೆ. ಆದರೆ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಇಡೀ ಮನೆಮಂದಿಯೆಲ್ಲಾ ಶಾಕ್ ಆಗಿತ್ತು.
ಹೌದು, ಭಾರತದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ವಾರಾಣಸಿಯಲ್ಲಿ ಕ್ರೀಡಾ ತರಬೇತಿಗೆ ಹೋಗಿದ್ದ ಮಗಳ ಭೀಕರ ಅತ್ಯಾಚಾರ ಘಟನೆಯೊಂದು ನಡೆದುಹೋಗಿದೆ. ಕಾಶಿಯಲ್ಲಿ ಮಹಿಳಾ ಅಥ್ಲೀಟ್ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ ನಡೆದಿದೆ. ಈ ಘಟನೆ ವಾರಾಣಸಿಯ ಲಾಲ್‌ಪುರ್-ಪಾಂಡೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಹುಕುಲಗಂಜ್ ಪ್ರದೇಶದಲ್ಲಿ ಘಟಿಸಿದೆ. ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರದ ಭಯಾನಕ ಘಟನೆ ಬೆಳಕಿಗೆ ಬಂದ ನಂತರ ಪೊಲೀಸ್ ಆಡಳಿತ ಬೆಚ್ಚಿಬಿದ್ದಿದೆ. ಒಟ್ಟು 6 ಯುವಕರು ಸೇರಿ ಈ ಹೇಯ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದು, ಉಳಿದ 5 ಜನರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾಜೀನಾಮೆ ನೀಡಿದ್ರೂ ಶಿಕ್ಷಕಿ ಖಾತೆಗೆ 20 ವರ್ಷ ಸಂಬಳ ಜಮೆ; ಪ್ರಕರಣ ಬೆಳಕಿಗೆ ಬಂದಿದ್ದೇಗೆ?
ಹುಕ್ಕಾ ಬಾರ್‌ನಲ್ಲಿ ಪರಿಚಯ: ಸಂತ್ರಸ್ತೆಯು ಅಥ್ಲೀಟ್ ಆಗಿದ್ದಾಳೆ. ಸಿಗ್ರಾ ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಯುವತಿಗೆ ಆರೋಪಿಗಳ ಪರಿಚಯವಾಗಿತ್ತು. ಅಲ್ಲಿಂದಲೇ ಮಾತುಕತೆ ಶುರುವಾಗಿ ನಂತರ ಸ್ನೇಹ ಬೆಳೆದಿತ್ತು. ಹುಕ್ಕಾ ಬಾರ್‌ನಲ್ಲಿಯೇ ಯುವಕ ಅಥ್ಲೀಟ್ ಯುವತಿಯನ್ನು ಮನೆಗೆ ಬಿಡಲು ಕೇಳಿದ್ದಾನೆ. ಯುವತಿ ಒಪ್ಪಿಗೆ ಸೂಚಿಸಿದ ನಂತರ ಕಾರಿನಲ್ಲಿ ಕುಳಿತಿದ್ದಾಳೆ. ಯುವಕ ಆ ಯುವತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಕಚೇರಿ ಪ್ರದೇಶಕ್ಕೆ ಕರೆದೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಹುಕುಲಗಂಜ್ ರಸ್ತೆಯಲ್ಲಿ ಮೊದಲೇ ಕರೆಸಿಕೊಂಡಿದ್ದ ಇತರ ಐವರು ಯುವಕರು ಕಾರಿನಲ್ಲಿ ಹತ್ತಿದ್ದು, ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಅರೆಪ್ರಜ್ಞಾವಸ್ಥೆಯಲ್ಲಿ ಬಿಟ್ಟು ಹೋದರು, ಸಂತ್ರಸ್ತೆ ಮೌನ: ಘಟನೆ ಬಳಿಕ ಆರೋಪಿಗಳು ಯುವತಿಯನ್ನು ಅರೆಪ್ರಜ್ಞಾವಸ್ಥೆಯಲ್ಲಿ ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಹೇಗೋ ಯುವತಿ ಮನೆಗೆ ತಲುಪಿದ್ದಾಳೆ ಆದರೆ ಮನೆಯವರಿಗೆ ಏನನ್ನೂ ಹೇಳಲಿಲ್ಲ. ಆಕೆಯ ಮಾನಸಿಕ ಮತ್ತು ದೈಹಿಕ ಸ್ಥಿತಿಯನ್ನು ನೋಡಿದ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಚಿಕಿತ್ಸೆ ಪಡೆದ ನಂತರ ಆಕೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ.
ಇದನ್ನೂ ಓದಿ: ಬೆಂಗಳೂರಿನ ಬಾಲಕಿ ಮೇಲೆ ಬ್ಯಾಡ್ಮಿಂಟನ್ ಟ್ರೈನರ್ ರೇಪ್! ಐದಾರು ಬಾಲಕಿಯರ ನಗ್ನ ವಿಡಿಯೋ ಸಂಗ್ರಹ
ಪೊಲೀಸರ ಕ್ರಮ ಮತ್ತು ತನಿಖೆ: ಪೋಷಕರ ದೂರಿನ ಮೇರೆಗೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು. ಡಿಸಿಪಿ ಮೇಲ್ವಿಚಾರಣೆಯಲ್ಲಿ ಮೂರು ಠಾಣೆಗಳ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದು, ಇತರರ ಸ್ಥಳವನ್ನು ಪತ್ತೆಹಚ್ಚಲಾಗುತ್ತಿದೆ. ಹುಕುಲಗಂಜ್, ಸಿಗ್ರಾ ಮತ್ತು ಕಚೇರಿ ಪ್ರದೇಶಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ