ಕಾಸು ಕೊಡಲಿಲ್ಲ ಅಂತ ಹಾವನ್ನೇ ಬೋಗಿಯೊಳಗೆ ಬಿಟ್ಟ: ಹಾವಾಡಿಗನ ಅವಾಂತರಕ್ಕೆ ರೈಲು ಪ್ರಯಾಣಿಕರು ಸುಸ್ತು

Published : Sep 12, 2023, 03:26 PM IST
ಕಾಸು ಕೊಡಲಿಲ್ಲ ಅಂತ ಹಾವನ್ನೇ ಬೋಗಿಯೊಳಗೆ ಬಿಟ್ಟ: ಹಾವಾಡಿಗನ ಅವಾಂತರಕ್ಕೆ ರೈಲು ಪ್ರಯಾಣಿಕರು ಸುಸ್ತು

ಸಾರಾಂಶ

ರೈಲಿನೊಳಗೆ ಹಾವಾಡಿಸಿಕೊಂಡು ಬಂದ ಹಾವಾಡಿಗರು ಬಳಿಕ ಪ್ರಯಾಣಿಕರ ಬಳಿ ಹಣ ನೀಡುವಂತೆ ಕೇಳಿದ್ದು, ಈ ವೇಳೆ ಪ್ರಯಾಣಿಕರು ಹಣ ನೀಡಲು ನಿರಾಕರಿಸಿದ ಹಿನ್ನೆಲೆ ತಮ್ಮ ಬಳಿ ಇದ್ದ ಹಾವನ್ನು ಬೋಗಿಯೊಳಗೆ ಬಿಟ್ಟು ರೈಲು ಪ್ರಯಾಣಿಕರು ಹೆದರುವಂತೆ ಮಾಡಿದ ಘಟನೆ ಉತ್ತರ ಪ್ರದೇಶದ ಮಹೋಬಾ ಎಂಬಲ್ಲಿ ನಡೆದಿದೆ.  

ಲಕ್ನೋ: ರೈಲಿನೊಳಗೆ ಹಾವಾಡಿಸಿಕೊಂಡು ಬಂದ ಹಾವಾಡಿಗರು ಬಳಿಕ ಪ್ರಯಾಣಿಕರ ಬಳಿ ಹಣ ನೀಡುವಂತೆ ಕೇಳಿದ್ದು, ಈ ವೇಳೆ ಪ್ರಯಾಣಿಕರು ಹಣ ನೀಡಲು ನಿರಾಕರಿಸಿದ ಹಿನ್ನೆಲೆ ತಮ್ಮ ಬಳಿ ಇದ್ದ ಹಾವನ್ನು ಬೋಗಿಯೊಳಗೆ ಬಿಟ್ಟು ರೈಲು ಪ್ರಯಾಣಿಕರು ಹೆದರುವಂತೆ ಮಾಡಿದ ಘಟನೆ ಉತ್ತರ ಪ್ರದೇಶದ ಮಹೋಬಾ ಎಂಬಲ್ಲಿ ನಡೆದಿದೆ.  ಹೌರಾದಿಂದ ಗ್ವಾಲಿಯರ್‌ಗೆ ಹೊರಟಿದ್ದ ಚಂಬಲ್ ಎಕ್ಸ್‌ಪ್ರೆಸ್ ರೈಲೇರಿದ ಐವರು ಹಾವಾಡಿಗರ ತಂಡ ಬೋಗಿಗಳಲ್ಲಿ ಸಾಗಿ ಜನರಿಗೆ ಹಾವು ತೋರಿಸಿ ಹಣ ವಸೂಲಿಗೆ ಮುಂದಾಗಿದ್ದಾರೆ. ಈ ವೇಳೆ ಪ್ರಯಾಣಿಕರು ಹಣ ನೀಡಲು ನಿರಾಕರಿಸಿದ್ದಾರೆ ಇದರಿಂದ ಕುಪಿತಗೊಂಡ ಅವರು ಹಾವನ್ನು  ಪ್ರಯಾಣಿಕರಿದ್ದ ಬೋಗಯೊಳಗೆ ಬಿಟ್ಟಿದ್ದಾರೆ. ಇದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಹೆದರಿ ಕಿರುಚಾಡಲು ಶುರು ಮಾಡಿದ್ದಾರೆ. ಪರಿಣಾಮ ರೈಲಿನಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. 

ಉತ್ತರಪ್ರದೇಶದ (Uttar Pradesh) ಮಹೋಬಾ (Mahoba) ಬಳಿಗೆ ರೈಲು ತಲುಪುವ ವೇಳೆ ಈ ಘಟನೆ ನಡೆದಿದೆ. ರೈಲಿನ ಜನರಲ್ ಬೋಗಿಯನ್ನೇರಿದ ಐವರು ಹಾವಾಡಿಗರ ತಂಡ ಪ್ರತಿಯೊಬ್ಬರ ಬಳಿ ಹೋಗಿ ಹಣ ನೀಡುವಂತೆ ಕೇಳಿದ್ದಾರೆ. ಆದರೆ ಪ್ರಯಾಣಿಕರು ಯಾರು ಕೂಡ ಇವರಿಗೆ ಹಣ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ಈ ಕಿಡಿಗೇಡಿ ಹಾವಾಡಿಗರ ಗುಂಪು ತಮ್ಮಲ್ಲಿದ್ದ ಹಾವನ್ನು ಚೀಲದಿಂದ ತೆಗೆದು ಭೋಗಿಯೊಳಗೆ ಬಿಟ್ಟು ಮಜಾ ನೋಡಲು ಮುಂದಾಗಿದ್ದಾರೆ. ಕೂಡಲೇ ಬೊಬ್ಬೆ ಹೊಡೆಯಲು ಶುರು ಮಾಡಿದ ರೈಲಿನ ಪ್ರಯಾಣಿಕರು ರೈಲ್ವೆ ಕಂಟ್ರೋಲ್ ರೂಮ್‌ಗೆ ಈ ವಿಚಾರ ತಿಳಿಸಿದ್ದಾರೆ. ಆದರೆ ರೈಲು ಮುಂದಿನ ನಿಲ್ದಾಣ ತಲುಪುವ ವೇಳೆಗೆಲ್ಲಾ ಈ ಹಾವಾಡಿಗರ ತಂಡ ರೈಲಿನಿಂದ ಹಾರಿ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ. 

ಜೀವಂತ ಹಾವುಗಳನ್ನು ಗೊಂಬೆಗಳಂತೆ ತಬ್ಬಿ ಮಲಗಿದ ಬಾಲಕಿ: ಇವಳೇನು ಹಾವು ರಾಣಿಯೇ?

ನಂತರ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಹಾವು ಬಿಟ್ಟ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ಬೋಗಿಗೆ ಕಳುಹಿಸಿ ಕೊಡಲಾಯಿತು. ಜನರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಈ ಕ್ರಮ ಕೈಗೊಳ್ಳಲಾಯಿತು ಎಂದು ತಿಳಿದು ಬಂದಿದೆ. ಅಲ್ಲದೇ ರೈಲ್ವೆ ಪೊಲೀಸ್ ಪೋರ್ಸ್‌ನ ಸಿಬ್ಬಂದಿ ಕೂಡ ರೈಲೊಳಗೆ ಬಂದು ಹಾವಿಗಾಗಿ ಶೋಧ ನಡೆಸಿದ್ದಾರೆ. ಆದರೆ ಅವರಿಗ್ಯಾರಿಗೂ ಹಾವು ಮಾತ್ರ ಕಾಣಿಸಿಕೊಂಡಿಲ್ಲ, ಈ ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ಹಾವಾಡಿಗರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಾವಿಗೆ ಮುತ್ತಿಕ್ಕಿದ ಯುವಕನ ವೀಡಿಯೋ ವೈರಲ್: ಹಾವು ವಾಪಸ್ ಮುತ್ತಿಟ್ರೆ ಕತೆ ಏನು? 

ಭಾರೀ ಗಾತ್ರದ ಬಿಳಿ ಬಣ್ಣದ ಹಾವು ಪತ್ತೆ: ವೀಡಿಯೋ ವೈರಲ್

ಹಿಮಾಚಲದಲ್ಲಿ ಅಪರೂಪದ ಬಿಳಿ ಬಣ್ಣದ ಹಾವೊಂದು ಕಾಣಿಸಿಕೊಂಡಿದ್ದು, ಇದು ಹುಲ್ಲಿನ ಮೇಲೆ ತೆವಳಿಕೊಂಡು ಹೋಗುತ್ತಿರುವ ವೀಡಿಯೋವನ್ನು ಜನ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಅಂದಹಾಗೆ ಈ ಬಿಳಿ ಬಣ್ಣದ ಹಾವು ಪತ್ತೆಯಾಗಿದ್ದು ಹಿಮಾಚಲ ಪ್ರದೇಶದ ಛಂಬಾದಲ್ಲಿ. ಅಪರೂಪಕ್ಕೆ ಕಾಣಿಸಿಕೊಂಡ ಈ ಹಾವು ಜನರ ಕುತೂಹಲ ಹೆಚ್ಚಿಸಿದೆ. ಆನುವಂಶಿಕ ಅಸ್ವಸ್ಥತೆಯ ಕಾರಣದಿಂದ ಬಿಳಿ ಬಣ್ಣದ ಹಾವುಗಳು ರೂಪುಗೊಳ್ಳುತ್ತವೆ. 

ವರದಿಯ ಪ್ರಕಾರ ಈ ಹಾವು ಐದು ಅಡಿ ಉದ್ದವಿದ್ದು, ಹುಲ್ಲು ಪೊದೆಯ ಮೇಲೆ ಹರಿದಾಡುತ್ತಾ ಸಾಗುತ್ತಿರುವುದು ಕಂಡು ಬಂದಿದೆ. ಅಲ್ಬಿನೋ ಎಂದು ಕರೆಯಲ್ಪಡುವ ಈ ಹಾವುಗಳು ಅತೀ ಅಪರೂಪವಾಗಿದ್ದು, ಕಳೆದ ವರ್ಷ ಪುಣೆಯಲ್ಲಿ ಇದೇ ರೀತಿಯ ಹಾವೊಂದು ಕಂಡು ಬಂದಿತ್ತು.  ಅಲ್ಬಿನೋಸ್ ತಮ್ಮ ವಿಶಿಷ್ಟ ನೋಟಕ್ಕೆ ಹೆಸರುವಾಸಿಯಾಗಿದ್ದು, ಅವುಗಳ ವಿಭಿನ್ನವಾದ ವರ್ಣದ್ರವ್ಯದಿಂದಾಗಿ ಅಪರೂಪವಾಗಿ ಕಂಡು ಬರುತ್ತದೆ. ಅವುಗಳನ್ನು ಅಪರೂಪದ ಜಾತಿಯೆಂದು ಗುರುತಿಸಲಾಗಿದೆ.

ಅಲ್ಬಿನೋ ಹಾವು ಎಂದರೇನು?
ಅಲ್ಬಿನೋ ಹಾವು ಒಂದು ರೀತಿಯ ಹಾವು ಆಗಿದ್ದು ಅದು ಅಲ್ಬಿನಿಸಂ ಎಂದು ಕರೆಯಲ್ಪಡುವ ಆನುವಂಶಿಕ ಅಸ್ವಸ್ಥತೆಯೊಂದಿಗೆ ಜನಿಸುತ್ತದೆ, ಇದರ ದೇಹ ಮತ್ತು ಕಣ್ಣುಗಳಲ್ಲಿ ವರ್ಣದ್ರವ್ಯದ ಕೊರತೆ ಇರುತ್ತದೆ. ಇದೇ ಕಾರಣಕ್ಕೆ ಇದರ ಬಣ್ಣ ಬಿಳಿಯಾಗಿರುತ್ತದೆ. ಇವು ವಿಶಿಷ್ಟವಾದ ನಿರ್ದಿಷ್ಟ ಬಣ್ಣವನ್ನು ಹೊಂದಿದ್ದು, ಈ ಸಮಸ್ಯೆಯಿಂದಾಗಿ ಕೆಲವೊಮ್ಮೆ ಹಳದಿ ಬಣ್ಣದ ಹಾವು ಬಿಳಿ ಬಣ್ಣ ಹೊಂದುತ್ತವೆ. ಹಾಗೆಯೇ ಕೆಂಪು ಬಣ್ಣದ ಹಾವು ಹಳದಿ ಹಾಗೂ ಬಿಳಿ ಬಣ್ಣಕ್ಕೆ ಕಾರಣವಾಗಬಹುದು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ