ಒಡೆದ ವೈನ್ ಕಾರ್ಖಾನೆಯ ಟ್ಯಾಂಕ್: ವೈನಿನ ಹೊಳೆಯಾದ ರಸ್ತೆಗಳು: ವೀಡಿಯೋ

Published : Sep 12, 2023, 12:49 PM IST
ಒಡೆದ ವೈನ್ ಕಾರ್ಖಾನೆಯ ಟ್ಯಾಂಕ್: ವೈನಿನ ಹೊಳೆಯಾದ ರಸ್ತೆಗಳು: ವೀಡಿಯೋ

ಸಾರಾಂಶ

ಭಾನುವಾರ ಪೋರ್ಚುಗಲ್‌ನ ಆ ಪುಟ್ಟ ನಗರದ ರಸ್ತೆಗಳು ಅಕ್ಷರಶಃ ಕೆಂಪಾಗಿದ್ದವು, ಅಲ್ಲಿ ಕೆಂಪು ವೈನ್‌ನ ಹೊಳೆಯೇ ಹರಿದಿದ್ದವು. ಇದಕ್ಕೆ ಕಾರಣವಾಗಿದ್ದು, ಒಡೆದು ಹೋದ ವೈನ್ ಟ್ಯಾಂಕ್,

ಮದುವೆ ಸಮಾರಂಭಗಳಲ್ಲಿ ಅಥವಾ ಇನ್ನಾವುದೋ ಶುಭ ಸಮಾರಂಭಗಳಲ್ಲಿ ಒಪನ್ ಬಾರ್‌ ಇದ್ದರೆ, ಮದ್ಯಪ್ರಿಯರು ತಮಗೆ ತೃಪ್ತಿಯಾಗುವಷ್ಟು ಕಂಠಪೂರ್ತಿ ಕುಡಿದು ಸಂಭ್ರಮಿಸುತ್ತಾರೆ. ಜೊತೆಗೆ ತಮ್ಮ ಆತ್ಮೀಯರಲ್ಲಿ ಅಲ್ಲಿ ಎಣ್ಣೆಯ ಹೊಳೆಯ ಹರಿಯಿರು, ಮಳೆಯೇ ಸುರಿಯಿತು ಎಂದು ಮದಿರೆಯನ್ನು ವರ್ಣಿಸಲು ಶುರು ಮಾಡುತ್ತಾರೆ. ಆದರೆ ನಿಜವಾಗಿಯೂ ಈ ಎಣ್ಣೆಯ ಹೊಳೆ ಮಳೆ ನದಿ ಹರಿದರೆ ಹೇಗಿರುತ್ತದೆ ಎಂಬುದಕ್ಕೆ ಪೋರ್ಚುಗಲ್‌ನ ನಗರವೊಂದು ಸಾಕ್ಷಿಯಾಗಿದೆ. ಈ ರೀತಿ ರೆಡ್ ವೈನ್‌ ಹೊಳೆ ಹರಿಯಲು ಕಾರಣವಾಗಿದ್ದು ಮಾತ್ರ ವೈನ್ ಕಾರ್ಖಾನೆಯೊಂದರ ಟ್ಯಾಂಕ್ ಒಡೆದು ಹೋಗಿದ್ದು...

ಹೌದು ಭಾನುವಾರ ಪೋರ್ಚುಗಲ್‌ನ ಆ ಪುಟ್ಟ ನಗರದ ರಸ್ತೆಗಳು ಅಕ್ಷರಶಃ ಕೆಂಪಾಗಿದ್ದವು, ಅಲ್ಲಿ ಕೆಂಪು ವೈನ್‌ನ ಹೊಳೆಯೇ ಹರಿದಿದ್ದವು. ಇದಕ್ಕೆ ಕಾರಣವಾಗಿದ್ದು, ಒಡೆದು ಹೋದ ವೈನ್ ಟ್ಯಾಂಕ್, ಪೋರ್ಚುಗಲ್‌ನ  ಸಾವೋ ಲೊರೆಂಕೊ ಡಿ ಬೈರೊ ಎಂಬ ಪುಟ್ಟ ನಗರದಲ್ಲಿ ನೆಲೆಯಾಗಿದ್ದ ವೈನ್ ಕಾರ್ಖಾನೆಯೊಂದರ 2.2 ಮಿಲಿಯನ್ ಲೀಟರ್ ಸಾಮರ್ಥ್ಯದ 2 ಟ್ಯಾಂಕುಗಳು ಒಮ್ಮಿಂದೊಮ್ಮೆಲೆ ಒಡೆದು ಹೋಗಿತ್ತು. ಪರಿಣಾಮ ಟ್ಯಾಂಕ್‌ನಲ್ಲಿದ್ದ ವೈನ್‌ ಎಲ್ಲವೂ ಕೆಳಗೆ ಹರಿದು ರಸ್ತೆಗಳಲ್ಲಿ ಹೋಗಲಾರಂಭಿಸಿದ್ದು, ಇದು ರೆಡ್‌ ವೈನ್‌ನ ನದಿಯೊಂದು ಉಗಮವಾಗಿ ಹರಿದಂತೆ ಕಾಣಿಸುತ್ತಿತ್ತು. 

ದೇಸಿ ವಿಸ್ಕಿ ಮೇಲೆ ಪ್ರೇಮ ಮೆರೆದ ಭಾರತೀಯರು: ಹುಡ್ಗೀರ ಬ್ರ್ಯಾಂಡ್‌ ವೋಡ್ಕಾ ಸೇವನೆಯಲ್ಲೂ ಹೆಚ್ಚಳ!

ಲೆವಿರಾ ಡಿಸ್ಟಿಲರಿ ಸಂಸ್ಥೆಗೆ ಸೇರಿದ ಬೆಟ್ಟದ ಮೇಲೆ ಸ್ಥಾಪಿಸಲಾಗಿದ್ದ ವೈನ್ ಸಂಗ್ರಹಿಸಿ ಇಡುತ್ತಿದ್ದ  ಟ್ಯಾಂಕ್ ಒಡೆದು ಹೋಗಿ ಅದರಲ್ಲಿ ವೈನೆಲ್ಲವೂ  ಕೆಳಗೆ ಚೆಲ್ಲಿ ಹೊಳೆಯನ್ನೇ ಸೃಷ್ಟಿಸಿದ್ದವು, 2000 ಸಾವಿರದಷ್ಟು ಜನಸಂಖ್ಯೆ ಇರುವ ಈ ಪುಟ್ಟ ನಗದಲ್ಲಿ ವೈನ್ ಹರಿದು ರಸ್ತೆಗಳನ್ನೇ ನದಿಯಾಗಿಸಿಕೊಂಡು ಹರಿದು ಹೋದವು.  ಈ ಹರಿವು ಯಾವ ಪ್ರಮಾಣದಲ್ಲಿತ್ತೆಂದರೆ ಒಲಿಂಪಿಕ್ ಸಮಯದಲ್ಲಿ ನಿರ್ಮಿಸುವ ಈಜುಕೊಳದಲ್ಲಿ ತುಂಬುವಷ್ಟು ವೈನ್ ಹರಿದು ಹೋದವು. ಆದರೆ ಇದರಿಂದ ಯಾರಿಗೂ ಯಾವುದೇ ಹಾನಿಯಾಗಲಿಲ್ಲ, ಆದರೆ ಇದು ಕೆಲವು ಮನೆಗಳ ನೆಲಮಾಳಿಗೆಯನ್ನು ಪ್ರವೇಶಿಸಿತ್ತು ಎಂದು ಪೋರ್ಚುಗೀಸ್ ವಾರ್ತಾಪತ್ರಿಕೆ ಡಿಯಾರಿಯೊ ಡಿ ಕೊಯಿಂಬ್ರಾ ವರದಿ ಮಾಡಿದೆ.

ಈ ವೈನ್ ಹರಿದು ಹೋಗಿ ಸಮೀಪದ ಸೆರ್ಟಿಮಾ ನದಿಯನ್ನು ತಲುಪಿ ನೀರನ್ನು ಮಲಿನ ಮಾಡದಂತೆ ತಡೆಯಲು ಅಗ್ನಿ ಶಾಮಕ ಸಿಬ್ಬಂದಿ ವೈನ್ ಹರಿಯುವ ಮಾರ್ಗವನ್ನು ಬದಲಿಸುವ ಪ್ರಯತ್ನ ಮಾಡಿದರು  ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವೈನ್ ರಸ್ತೆಯನ್ನೇ ಹೊಳೆಯಾಗಿಸಿಕೊಂಡು ವೇಗವಾಗಿ ಹರಿದು ಹೋಗುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಈ ಕ್ಷಣವನ್ನು ಹಾಸ್ಯ ಮಾಡುತ್ತಿದ್ದಾರೆ.  

ವೈನ್‌ಯಾರ್ಡಲ್ಲಿ ಭಾಗ್ಯಲಕ್ಷ್ಮಿ ನಟಿಯರು, ತೇರೆ ಮೇಲೆ ಮಾತ್ರ ಗೌರಮ್ಮ ಎಂದ್ರು!

ಘಟನೆಗೆ ಲೆವಿರಾ ಡಿಸ್ಟಿಲರಿ (Levira Distillery) ಸಂಸ್ಥೆ ಸಾವೊ ಲೊರೆಂಕೊ ಡಿ ಬೈರೊದ (São Lorenco de Bairro) ನಿವಾಸಿಗಳ ಕ್ಷಮೆ ಕೇಳಿದ್ದು, ಈ ವೈನ್‌ ಪ್ರವಾಹದಿಂದಾದ ಹಾನಿಯನ್ನು ಸರಿ ಪಡಿಸುತ್ತೇವೆ. ಪ್ರವಾಹದಿಂದ ಪರಿಸರಕ್ಕಾದ ತೊಂದರೆಯನ್ನು ಸ್ವಚ್ಛಗೊಳಿಸುತ್ತೇವೆ, ಜೊತೆಗೆ ಹಾನಿಯನ್ನು ಸರಿಪಡಿಸಲು ಸಂಬಂಧಿಸಿದ ವೆಚ್ಚಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಈ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದೆ ಎಂದು ಅಮೆರಿಕಾ ದೈನಿಕ ಯುಎಸ್‌ಎ ಟುಡೇ ವರದಿ ಮಾಡಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ