ಪತ್ನಿಗೆ ಕಚ್ಚಿದ ಹಾವು: ಸರೀಸೃಪದ ಜತೆಗೇ ಆಸ್ಪತ್ರೆಗೆ ದೌಡಾಯಿಸಿದ ಭೂಪ!

By BK AshwinFirst Published Apr 17, 2023, 5:15 PM IST
Highlights

ಮಹಿಳೆಯೊಬ್ಬರಿಗೆ ತನ್ನ ಮನೆಯಲ್ಲಿಯೇ ಹಾವು ಕಚ್ಚಿದ್ದು, ಈ ಹಿನ್ನೆಲೆ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ, ಈ ಬಗ್ಗೆ ಪತಿಗೆ ಮಾಹಿತಿ ತಿಳಿದುಬಂದಿದ್ದು, ಅವರು ತಕ್ಷಣ ಮನೆಗೆ ತೆರಳಿ ಆ ಗೋಣಿಚೀಲದಲ್ಲಿ ಸರೀಸೃಪವನ್ನು ಹಿಡಿದು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.

ಉನ್ನಾವೋ (ಏಪ್ರಿಲ್ 17, 2023): ಇತ್ತೀಚೆಗಷ್ಟೇ ತನಗೆ ಕಚ್ಚಿದ ಹಾವಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಅದರ ತಲೆಯನ್ನೇ ಕಚ್ಚಿ, ಈ ಕೃತ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದರು. ಇದೇ ರೀತಿ, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಮಹಿಳೆಯೊಬ್ಬರಿಗೆ ಹಾವು ಕಚ್ಚಿದ್ದು, ಪತಿ ಆ ಹಾವಿನ ಸಮೇತ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಈ ಹಾವನ್ನು ಕಂಡು ಆಸ್ಪತ್ರೆಯಲ್ಲಿದ್ದ ವೈದ್ಯರು, ಅಟೆಂಡರ್‌ಗಳು ಹಾಗೂ ನರ್ಸ್‌ಗಳೆಲ್ಲ ಗಾಬರಿಯಾಗಿದ್ದರು. ಆಸ್ಪತ್ರೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. 

ಮಹಿಳೆಯೊಬ್ಬರಿಗೆ ತನ್ನ ಮನೆಯಲ್ಲಿಯೇ ಹಾವು ಕಚ್ಚಿದ್ದು, ಈ ಹಿನ್ನೆಲೆ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ, ಈ ಬಗ್ಗೆ ಪತಿಗೆ ಮಾಹಿತಿ ತಿಳಿದುಬಂದಿದ್ದು, ಅವರು ತಕ್ಷಣ ಮನೆಗೆ ತೆರಳಿ ಆ ಗೋಣಿಚೀಲದಲ್ಲಿ ಸರೀಸೃಪವನ್ನು ಹಿಡಿದು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಇದು ಆಸ್ಪತ್ರೆಯಲ್ಲಿ, ವೈದ್ಯರು ಮತ್ತು ಅಟೆಂಡರ್‌ಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. 

Latest Videos

ಇದನ್ನು ಓದಿ: ಹಾವಿನ ತಲೆ ಕಚ್ಚಿ ಹಿಂಸಿಸಿ ಕೊಂದ ದುರುಳರು: ವಿಡಿಯೋ ವೈರಲ್‌ ಬೆನ್ನಲ್ಲೇ ಮೂವರ ಅರೆಸ್ಟ್‌

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಫಿಪುರ್ ಕೊಟ್ವಾಲಿ ಪ್ರದೇಶದ ಉಮರ್ ಅತ್ವಾ ಗ್ರಾಮದ ನಿವಾಸಿ ನರೇಂದ್ರ ಅವರ ಪತ್ನಿ ಅವರ ಪತ್ನಿ ಕುಸುಮಾ ತಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರು. ತನ್ನ ಕೆಲಸಗಳನ್ನು ಮಾಡುವಾಗ, ಹಾವೊಂದು ಕಚ್ಚಿದೆ. ಇದರಿಂದಾಗಿ ಆಕೆ ಕಿರುಚಾಡಿದ್ದು ಪ್ರಜ್ಞಾಹೀನಳಾಗಿದ್ದಾಳೆ. ಕೂಡಲೇ ಮಹಿಳೆಯನ್ನು ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. 

ನಂತರ, ಪತಿ ನರೇಂದ್ರ ಅವರಿಗೆ ವಿಷಯ ತಿಳಿದ ಬಳಿಕ ಅವರು ಮನೆಗೆ ತೆರಳಿ ಹಾವನ್ನು ಹಿಡಿದು ಗೋಣಿಚೀಲದಲ್ಲಿ ಹಾಕಿಕೊಂಡರು. ಬಳಿಕ, ಅವರು ಅದನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ಇದು ವೈದ್ಯರು ಮತ್ತು ಅಟೆಂಡರ್‌ಗಳನ್ನು ಕಂಗೆಡಿಸಿದೆ. ಇನ್ನು, ಸರೀಸೃಪವನ್ನು ಏಕೆ ತಂದಿದ್ದೀರಿ ಎಂದು ಕೇಳಿದಾಗ, ಯಾವ ಹಾವು ತನ್ನ ಹೆಂಡತಿಗೆ ಕಚ್ಚಿದೆ ಎಂದು ವೈದ್ಯರಿಗೆ ತೋರಿಸಲು ಸಾಧ್ಯವಾಗುತ್ತದೆ. ಇದರಿಂದ ಆಕೆಗೆ ಚಿಕಿತ್ಸೆ ನೀಡಬಹುದು ಎಂದು ಹೇಳಿದರು. ಈ ಮಧ್ಯೆ, ಗೋಣಿಚೀಲದಲ್ಲಿದ್ದ ಹಾವನ್ನು ಕಂಡು ವೈದ್ಯರೂ ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: ಇಲಿ ಹಿಡಿಯಲು ಹಾವನ್ನೇ ಬಿಟ್ಟ ವಿಡಿಯೋ ವೈರಲ್‌: ಸ್ಮಾರ್ಟ್‌ ಐಡಿಯಾ ಎಂದ ನೆಟ್ಟಿಗರು..!

ಮಹಿಳೆ ಪ್ರಸ್ತುತ ಅಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆಯಲ್ಲಿ ನಿಯೋಜನೆಗೊಂಡಿರುವ ಡಾ. ತುಷಾರ್ ಶ್ರೀವಾಸ್ತವ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಬಳಿಕ ಆ ಹಾವನ್ನು ಕಾಡಿನಲ್ಲಿ ಬಿಡಲಾಗಿದೆಯಂತೆ. 

ಇನ್ನು, ಉನ್ನಾವೋದಲ್ಲಿ ಇಂತಹ ಪ್ರಕರಣ ನಡೆದಿರೋದು ಇದೇ ಮೊದಲಲ್ಲ. ಈ ಹಿಂದೆ ಮಖಿ ಪೊಲೀಸ್ ವೃತ್ತದ ವ್ಯಾಪ್ತಿಯ ಅಫ್ಜಲ್ ನಗರ ಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಪತ್ನಿಗೆ ಹಾವು ಕಚ್ಚಿದ್ದು, ಪತಿ ತನ್ನ ಪತ್ನಿಯನ್ನು ಮಾತ್ರವ್ಲ ಆಕೆಗೆ ಕಚ್ಚಿದ ಹಾವನ್ನು ಸಹ ಆಸ್ಪತ್ರೆಗೆ ಸಾಗಿಸಿದ್ದರು. ಅವರು ಹಾವನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಸೆರೆಹಿಡಿದು ಅದಕ್ಕೆ ಉಸಿರಾಡಲು ಕೆಲವು ರಂಧ್ರಗಳನ್ನು ಮಾಡಿದ್ದರು. ಆ ವೇಳೆ ಸರೀಸೃಪವನ್ನು ಆಸ್ಪತ್ರೆಗೆ ಕರೆತರುವ ಬಗ್ಗೆ ಅವರನ್ನೂ ಪ್ರಶ್ನಿಸಲಾಯಿತು. ಅದಕ್ಕೆ ಅವರು  “ನನ್ನ ಹೆಂಡತಿಗೆ ಯಾವ ಹಾವು ಕಚ್ಚಿದೆ ಎಂದು ಕೇಳಿದರೆ ಏನು ಹೇಳೋದು? ನೀನೇ ನೋಡಲಿ ಎಂದು ಹಾವನ್ನು ತಂದಿದ್ದೇನೆ” ಎಂದು ಪ್ರತಿಕ್ರಿಯೆ ನೀಡಿದ್ದರು. 

ಇದನ್ನೂ ಓದಿ: ಬಿಸಿಯೂಟದಲ್ಲಿ ಹಾವು: 30 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು; ಪೋಷಕರಿಂದ ತೀವ್ರ ಆಕ್ರೋಶ

click me!