ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 1.11 ಕೋಟಿ ದಾನ ಮಾಡಿದ್ದ ಸಾಧು ಅಪಘಾತದದಲ್ಲಿ ನಿಧನ!

By Santosh NaikFirst Published Apr 17, 2023, 4:38 PM IST
Highlights

Mahant Kanak Bihari Maharaj: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ನಿರ್ಮಾಣಕ್ಕೆ 1.11 ಕೋಟಿ ದೇಣಿಗೆ ನೀಡುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಮಹಾಂತ ಕನಕ ಬಿಹಾರಿ ದಾಸ್ ಮಹಾರಾಜ್ ಅಪಘಾತದಲ್ಲಿ ನಿಧನರಾಗಿದ್ದಾರೆ. ರಘುವಂಶ ಶಿರೋಮಣಿ 1008 ಮಹಂತ್ ಕನಕ್ ಬಿಹಾರಿ ದಾಸ್ ಎಂಬ ಹೆಸರಿನಿಂದ ಪ್ರಸಿದ್ಧರಾದ ಮಹಾರಾಜ್ ಅವರು ರಘುವಂಶಿ ಸಮಾಜದ ರಾಷ್ಟ್ರೀಯ ಸಂತರಾಗಿ ಗುರುತಿಸಿಕೊಂಡಿದ್ದರು.
 

ಭೋಪಾಲ್‌ (ಏ.17): ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ 1 .11ಕೋಟಿ ರೂಪಾಯಿ ದಾನ ಮಾಡುವ ಮೂಲಕವೇ ಸುದ್ದಿಯಾಗಿದ್ದ ಸಾಧು ಮಹಾಂತ ಕನಕ ಬಿಹಾರಿ ದಾಸ್‌ ಮಹಾರಾಜ್‌ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಸೋಮವಾರ ಮಧ್ಯಪ್ರದೇಶದ ನರಸಿಂಗಪುರದಲ್ಲಿ ಈ ಅಪಘಾತ ನಡೆದಿದೆ. ಬರ್ಮನ್‌-ಸಗ್ರಿ ರಾಷ್ಟ್ರೀಯ ಹೆದ್ದಾರಿ 44ನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಇನ್ನೇನು ಗಾಡಿಗೆ ಗುದ್ದಿ ಸಾವು ಕಾಣಲಿದ್ದ ಬೈಕ್‌ ಸವಾರನನ್ನು ರಕ್ಷಿಸುವ ಯತ್ನದಲ್ಲಿ ಮಹಾಂತ ಅವರಿಂದ ವಾಹನ ಡಿವೈಡರ್‌ಗೆ ಹೊಡೆದು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಮೂವರ ಪೈಕಿ ಇಬ್ಬರು ಅಪಘಾತದಲ್ಲಿ ಸಾವು ಕಂಡಿದ್ದಾರೆ. ಪೊಲೀಸರು ಕೇಸ್‌ ದಾಖಲಿಸಿಕೊಂಡು ಪ್ರಕರಣದ ವಿಚಾರಣೆ ಆರಂಭ ಮಾಡಿದ್ದಾರೆ. ಅಯೋಧ್ಯೆಯಯಲ್ಲಿ ರಾಮ ಮಂದಿರ ನಿರ್ಮಾಣ ಘೋಷಣೆಯಾದ ಬಳಿಕ, 1.11 ಕೋಟಿ ರೂಪಾಯಿ ದಾನ ನೀಡುವ ಮೂಲಕ ಮಹಾಂತ ಕನಕ ಬಿಹಾರಿ ದಾಸ್‌ ಮಹಾರಾಜ್‌ ಸುದ್ದಿಯಾಗಿದ್ದರು.  ರಘುವಂಶ ಶಿರೋಮಣಿ 1008 ಮಹಂತ್ ಕನಕ ಬಿಹಾರಿ ದಾಸ್ ಅವರು ರಘುವಂಶಿ ಸಮಾಜದ ರಾಷ್ಟ್ರೀಯ ಸಂತರಾಗಿಯೂ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.
ಮಹಾರಾಜರ ಆಶ್ರಮವು ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ನೋನಿಯಲ್ಲಿತ್ತು. ಕನಕ ಮಹಾರಾಜರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಛಿಂದ್ವಾರಾಕ್ಕೆ ಹಿಂತಿರುಗುವ ವೇಳೆ ಈ ಘಟನೆ ನಡೆಸಿದೆ.

ಇದೇ ವೇಳೆ ಬರ್ಮನ್ ಸಾಗರಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಅವರು, ಮಹೇಂದ್ರ ರಾಮ್ ದೇವಸ್ಥಾನದಲ್ಲಿ ಯಾಗ ಆರಂಭಿಸುವ ಸಿದ್ಧತೆಯಲ್ಲಿ ಭಾಗಿಯಾಗಬೇಕಿತ್ತು.

ದಕ್ಷಿಣ ಭಾರತದ ಅಯೋಧ್ಯೆ ರಾಮದೇವರ ಬೆಟ್ಟದಲ್ಲಿ ಜನಸಾಗರ: ಅದ್ಧೂರಿ ಶ್ರೀ ರಾಮನವಮಿ ಆಚರಣೆ

ರಘುವಂಶಿ ಸಮಾಜದ ನರಸಿಂಗ್‌ಪುರ ಜಿಲ್ಲಾಧ್ಯಕ್ಷ ರಾಜ್‌ಕುಮಾರ್ ರಘುವಂಶಿ ಈ ಕುರಿತಾಗಿ ಮಾತನಾಡಿದ್ದು, ಮಹಂತ್ ಕನಕ್ ಮಹಾರಾಜ್ ಅವರು ರಾಮಮಂದಿರಕ್ಕಾಗಿ 1.11 ಕೋಟಿ ರೂ. ದೇಣಿಗೆ ನೀಡಿದ್ದರು. ಅದರೊಂದಿಗೆ 2024ರ ಫೆಬ್ರವರಿ 10 ರಿಂದ ಅಯೋಧ್ಯೆಯಲ್ಲಿ9 ಕುಂದಿಯಾ ಯಾಗವನ್ನು ಇವರು ನಡೆಸಬೇಕಿತ್ತು. ಇದೇ ಕಾರಣಕ್ಕಾಗಿ ಮಹಾಂತ ಅವರು ಎಲ್ಲಾ ಗ್ರಾಮಗಳಿಗೂ ತೆರಳಿ ರಘುವಂಶಿ ಸಮಾಜದವರನ್ನು ಭೇಟಿಯಾಗುತ್ತಿದ್ದರು ಎಂದು ಹೇಳಿದ್ದಾರೆ. ಸೋನವಾರ ಅವರು ಗುಣಾದಿಂದಾ ಛಿಂದ್ವಾರಕ್ಕೆ ಹಿಂತಿರುಗಿ ಬರುತ್ತಿದ್ದ ವೇಳೆ, ಬೈಕರ್‌ ಒಬ್ಬರನ್ನು ರಕ್ಷಿಸುವ ಸಲುವಾಗಿ ಅವರ ವಾಹನ ಡಿವೈಡರ್‌ಗೆ ಬಡಿದಿದೆ. ಈ ಅಪಘಾತದಲ್ಲಿ ಅವರು ಸಾವು ಕಂಡಿದ್ದಾರೆ. ಮಹಾಂತ ಅವರ ನಿಧನದ ಬೆನ್ನಲ್ಲಿಯೇ ರಘುವಂಶಿ ಸಮಾಜದಲ್ಲಿ ಶೋಕ ಮಡುಗಟ್ಟಿದೆ ಎಂದಿದ್ದಾರೆ.

Latest Videos

Ayodhya Ram Mandir: ವಿವಾದದಿಂದ ನಿರ್ಮಾಣದವರೆಗೆ- ನೀವು ತಿಳಿಯಬೇಕಾದ್ದು..

ರಾಮಮಂದಿರ ಬರ್ಮನ್ ಮಹಂತ್ ಸೀತಾರಾಮ್ ದಾಸ್ ಮಹಾರಾಜ್ ಅವರು ಈ ಕುರಿತಾಗಿ ಮಾತನಾಡಿದ್ದು,  ಮಹಂತ್ ಕನಕ ಬಿಹಾರಿ ಮಹಾರಾಜರು ಸಮಾಜದ ವ್ಯಕ್ತಿತ್ವವಾಗಿದ್ದರು. ಅವರ ಅಗಲಿಕೆ ಸಾಧು ಸಮಾಜಕ್ಕೆ ದೊಡ್ಡ ನಷ್ಟ. ಅಯೋಧ್ಯೆಯಲ್ಲಿ ನಡೆಯಲಿರುವ ಯಾಗದ ಸಿದ್ಧತೆಯಲ್ಲಿ ನಿರತರಾಗಿದ್ದರು. ಆದರೆ ರಸ್ತೆ ಅಪಘಾತದಲ್ಲಿ ಅವರು ಕಾಲನ ಕರೆಗೆ ಓಗೊಟ್ಟಿದ್ದಾರೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

click me!