ನುಟೆಲ್ಲಾ ಡಬ್ಬಿಯಲ್ಲಿ 8.9 ಲಕ್ಷ ಮೌಲ್ಯದ ಚಿನ್ನ : ಏರ್‌ಪೋರ್ಟ್‌ನಲ್ಲಿ ಪ್ಯಾಸೆಂಜರ್ ಅಂದರ್

Published : Aug 31, 2023, 03:19 PM ISTUpdated : Aug 31, 2023, 03:35 PM IST
 ನುಟೆಲ್ಲಾ ಡಬ್ಬಿಯಲ್ಲಿ  8.9 ಲಕ್ಷ ಮೌಲ್ಯದ  ಚಿನ್ನ : ಏರ್‌ಪೋರ್ಟ್‌ನಲ್ಲಿ ಪ್ಯಾಸೆಂಜರ್ ಅಂದರ್

ಸಾರಾಂಶ

ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕನೋರ್ವನನ್ನು ಬಂಧಿಸಿದ್ದು, ಆತನಿಂದ ನುಟೆಲ್ಲಾ ಕ್ರೀಮ್ ಬಾಟಲ್ ಒಳಗೆ ತುಂಬಿಸಿ ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.  

ತಿರುಚಿ: ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕನೋರ್ವನನ್ನು ಬಂಧಿಸಿದ್ದು, ಆತನಿಂದ ನುಟೆಲ್ಲಾ ಕ್ರೀಮ್ ಬಾಟಲ್ ಒಳಗೆ ತುಂಬಿಸಿ ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.  24 ಕ್ಯಾರೆಟ್ ಪ್ರಮಾಣೀಕೃತ ಚಿನ್ನ ಇದಾಗಿದ್ದು, ನುಟೆಲ್ಲಾ ಜಾರ್‌ನಲ್ಲಿದ್ದ 8.9 ಲಕ್ಷ ಮೌಲ್ಯದ 149 ಗ್ರಾಂ ತೂಗುತ್ತಿದ್ದ ಚಿನ್ನದ ಬಾರ್‌ನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಪ್ರಯಾಣಿಕನ್ನು ಬಂಧಿಸಿದ್ದಾರೆ. 

ನ್ಯೂಟೆಲ್ಲಾದ ಎರಡು ಡಬ್ಬಿಗಳಲ್ಲಿ ಪೌಡರ್ ರೂಪದಲ್ಲಿ ಈ ಚಿನ್ನ ಇತ್ತು. ಮಲೇಷ್ಯಾದ ಕೌಲಾಲಂಪುರದಿಂದ ತಿರುಚಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕನ ಬಳಿ ಇಂದ ಈ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ.  ನೂಟೆಲ್ಲಾದಲ್ಲಿ ಪೌಡರ್ ರೂಪದಲ್ಲಿದ್ದ ಈ ಚಿನ್ನವನ್ನು ಜಪ್ತಿ ಮಾಡಲು ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 110ರ ಅಡಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಕಳ್ಳಸಾಗಣೆಯಲ್ಲಿ ಕೇರಳ ನಂ.1 : ದೇಶದಲ್ಲಿ 2022ರಲ್ಲಿ 3500 ಕೆಜಿ ಚಿನ್ನ ಜಪ್ತಿ

ವಿದೇಶದಿಂದ ಕದ್ದು ಚಿನ್ನ ಸಾಗಣೆ ಮಾಡುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಇಂತಹ ಹತ್ತಾರು ಪ್ರಕರಣಗಳನ್ನು ಏರ್‌ಪೋರ್ಟ್‌ಗಳ ಕಸ್ಟಮ್ಸ್ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಕೆಲ ದಿನಗಳ ಹಿಂದೆ ಬ್ಯಾಕಾಂಕ್‌ನಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆಏರ್ ಏಷ್ಯಾ ವಿಮಾನದಲ್ಲಿ ಬಂದಿಳಿದ ಇಬ್ಬರು ಪ್ರಯಾಣಿಕರ ಬಳಿ 8.2 ಲಕ್ಷ ಮೌಲ್ಯದ 48 ಸಾವಿರ ಸಿಗರೇಟ್‌ಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿತ್ತು. 

ಇವಿಷ್ಟೇ ಅಲ್ಲದೇ ಕಳೆದ ಏಪ್ರಿಲ್‌ನಲ್ಲಿ ಕೌಲಾಲಂಪುರದಿಂದ ಚೆನ್ನೈಗೆ ಬಂದಿದ್ದ ಮಹಿಳೆಯೋರ್ವರನ್ನು  ಚೆನ್ನೈ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿತ್ತು. ಈಕೆಯ ಬ್ಯಾಗ್‌ನಲ್ಲಿ 22 ಜೀವಂತ ಹಾವುಗಳಿದ್ದವು, ವನ್ಯಜೀವಿಗಳ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಈ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು.

ಏರ್‌ ಇಂಡಿಯಾ ಕ್ಯಾಬಿನ್‌ ಸಿಬ್ಬಂದಿಯಿಂದಲೇ ಚಿನ್ನ ಕಳ್ಳಸಾಗಣೆ : ಕೊಚ್ಚಿ ಏರ್‌ಪೋರ್ಟ್‌ನಲ್ಲಿ ಅಂದರ್ 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ
ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್