ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ 'ಭೂತ್‌ನಾಥ್' ವಿಡಿಯೋ ಅಸ್ತ್ರ ಪ್ರಯೋಗಿಸಿದ ಸ್ಮೃತಿ ಇರಾನಿ!

Published : Oct 15, 2026, 11:06 PM IST
smriti irani shares Rahul Gandhi ai video

ಸಾರಾಂಶ

ದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ 'ಭೂತ್‌ನಾಥ್ ರಿಟರ್ನ್ಸ್' ಸಿನಿಮಾದ ಎಐ ಎಡಿಟೆಡ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸತ್ತವರ ಹೆಸರಿನಲ್ಲಿ ಕಳ್ಳವೋಟ್ ಹಾಕುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಹೊಸದೆಹಲಿ (ಅ.15): ದೇಶದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ (Smriti Irani) ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಶೇಷವೆಂದರೆ, ರಾಹುಲ್ ಗಾಂಧಿ ಅವರನ್ನು ಟೀಕಿಸಲು ಸ್ಮೃತಿ ಇರಾನಿ ಬಾಲಿವುಡ್‌ನ ಜನಪ್ರಿಯ 'ಭೂತ್‌ನಾಥ್ ರಿಟರ್ನ್ಸ್' ಸಿನಿಮಾದ ಎಐ (AI) ಎಡಿಟೆಡ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಎಐ ಎಡಿಟೆಡ್ ವಿಡಿಯೋದಲ್ಲಿ ಏನಿದೆ?

ಬಾಲಿವುಡ್‌ನ 'ಭೂತ್‌ನಾಥ್ ರಿಟರ್ನ್ಸ್' ಸಿನಿಮಾದಲ್ಲಿ ಬೋಮನ್ ಇರಾನಿ ಮತ್ತು ಅಮಿತಾಬ್ ಬಚ್ಚನ್ ನಟಿಸಿರುವ ಪ್ರಸಿದ್ಧ ದೃಶ್ಯವೊಂದನ್ನು ಎಐ (AI) ಮೂಲಕ ಎಡಿಟ್ ಮಾಡಲಾಗಿದೆ. ಮೂಲ ವಿಡಿಯೋದಲ್ಲಿದ್ದ ಬೋಮನ್ ಇರಾನಿ ಅವರ ಮುಖದ ಬದಲಿಗೆ ರಾಹುಲ್ ಗಾಂಧಿ ಅವರ ಮುಖವನ್ನು ಎಡಿಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಸತ್ತ ವ್ಯಕ್ತಿಯೊಬ್ಬರ ಹೆಸರು ಮತದಾರರ ಪಟ್ಟಿಯಲ್ಲಿ ಇನ್ನೂ ಹೇಗೆ ಉಳಿದುಕೊಂಡಿದೆ ಎಂಬ ಸಂಭಾಷಣೆ ಇದೆ.

ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರ ಮುಖವಿರುವ ಪಾತ್ರ, 'ಸಬ್ಕೋ ಪತಾ ಹೈ ಯೆ ಮರಾ ಹುವಾ ಹೈ, ಔರ್ ವೋಟ್ ನಹೀ ಕರ್ ಸಕ್ತಾ...' (ಎಲ್ಲರಿಗೂ ಗೊತ್ತು ಇವರು ಸತ್ತಿದ್ದಾರೆ ಮತ್ತು ವೋಟ್ ಮಾಡಲು ಸಾಧ್ಯವಿಲ್ಲ) ಎನ್ನುತ್ತದೆ. ಇದಕ್ಕೆ ಪ್ರತಿಕ್ರಿಯಿಸುವ ಅಮಿತಾಬ್ ಬಚ್ಚನ್ ಪಾತ್ರ, ತಮ್ಮ ಸಾವಿನ ನಂತರವೂ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಮಾಯವಾಗಿಲ್ಲ ಮತ್ತು ಹಿಂದಿನ ಚುನಾವಣೆಯಲ್ಲಿ ತಮ್ಮ ಹೆಸರಿನಲ್ಲಿ ಬೇರೆ ಯಾರೋ ಕಳ್ಳವೋಟ್ ಹಾಕಿದ್ದಾರೆ ಎಂದು ಆರೋಪಿಸುವ ದೃಶ್ಯ ಇದರಲ್ಲಿದೆ.

ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸವಾಲು:

ಈ ವಿಡಿಯೋವನ್ನು 'X' (ಟ್ವಿಟರ್) ಜಾಲತಾಣದಲ್ಲಿ ಹಂಚಿಕೊಂಡಿರುವ ಸ್ಮೃತಿ ಇರಾನಿ, ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ನಿಜವಾಗಿಯೂ ನಿದ್ರೆ ಮಾಡುತ್ತಿರುವವರನ್ನು ಎಬ್ಬಿಸಬಹುದು, ಆದರೆ ದೇಶವನ್ನು ದಾರಿ ತಪ್ಪಿಸಲು ಕುರುಡರಂತೆ ನಟಿಸುತ್ತಿರುವವರನ್ನು ಎಬ್ಬಿಸಲು ಸಾಧ್ಯವಿಲ್ಲ! SIR Explain!' ಎಂದು ಸವಾಲು ಹಾಕುವ ಮೂಲಕ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ವಿವಾದ:

ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಸ್ತುತ ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಈ ಪರಿಷ್ಕರಣೆ ಪ್ರಕ್ರಿಯೆಯ ಬಗ್ಗೆ ತೀವ್ರ ಕಳಳವಳ ವ್ಯಕ್ತಪಡಿಸಿವೆ. ಮತ್ತೊಂದೆಡೆ, ಬಿಜೆಪಿಯು ವಿಪಕ್ಷಗಳ ಈ ಅಭಿಯಾನವನ್ನು ತೀವ್ರವಾಗಿ ಟೀಕಿಸುತ್ತಿದೆ. ಈ ವಿವಾದದ ನಡುವೆ ಸ್ಮೃತಿ ಇರಾನಿ ಹಂಚಿಕೊಂಡಿರುವ ಈ ಎಐ ವಿಡಿಯೋ ಈಗ ರಾಷ್ಟ್ರೀಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Sugarprice: ಸಕ್ಕರೆ ಬೆಲೆ ಮತ್ತೆ ದುಬಾರಿ; ಮಿಡಲ್ ಕ್ಲಾಸ್ ಜನರಿಗೆ ಸಿಹಿ ಇಲ್ಲದ ದಸರಾ-ಸಪ್ಪೆ ಪಟಾಕಿ ದೀಪಾವಳಿ!
CAA: ಪಾಕ್ ಪಾಪಿಗಳ ಕಿರುಕುಳದಿಂದ ಪಾರಾಗಲು ಭಾರತದ ಪೌರತ್ವ ಪಡೆದು ನಿಟ್ಟುಸಿರು ಬಿಟ್ಟ ಹಿಂದೂ ಮಹಿಳೆಯರು!