ಕರ್ನಾಟಕದ ರೀತಿ ತ್ರಿಪುರಾದಲ್ಲೂ ಸ್ಮಾರ್ಟ್‌ಮೀಟರ್‌ ಅಳವಡಿಕೆ ಗದ್ಲ

Kannadaprabha News   | Kannada Prabha
Published : Jul 21, 2025, 05:56 AM IST
smart meter

ಸಾರಾಂಶ

ಕಾಂಗ್ರೆಸ್‌ ಸರ್ಕಾರವಿರುವ ಕರ್ನಾಟಕದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ವಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಬಿಜೆಪಿ ಆಡಳಿತದ ತ್ರಿಪುರಾದಲ್ಲಿ ಇದರ ತದ್ವಿರುದ್ಧ ಪರಿಸ್ಥಿತಿ ಇದೆ. ಪ್ರತಿಪಕ್ಷ ಕಾಂಗ್ರೆಸ್‌ ಅದರ ವಿರುದ್ಧ ಅಭಿಯಾನ ನಡೆಸುತ್ತಿದೆ.

ಅಗರ್ತಲಾ: ಕಾಂಗ್ರೆಸ್‌ ಸರ್ಕಾರವಿರುವ ಕರ್ನಾಟಕದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ವಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಬಿಜೆಪಿ ಆಡಳಿತದ ತ್ರಿಪುರಾದಲ್ಲಿ ಇದರ ತದ್ವಿರುದ್ಧ ಪರಿಸ್ಥಿತಿ ಇದೆ. ಪ್ರತಿಪಕ್ಷ ಕಾಂಗ್ರೆಸ್‌ ಅದರ ವಿರುದ್ಧ ಅಭಿಯಾನ ನಡೆಸುತ್ತಿದೆ.

ಸ್ಮಾರ್ಟ್‌ ಮೀಟರ್‌ ಅಳವಡಿಕೆ ವಿರೋಧಿಸಿ ರ್‍ಯಾಲಿ, ಪ್ರತಿಭಟನೆ, ಅಭಿಯಾನಗಳನ್ನು ಆಯೋಜಿಸುತ್ತಿರುವ ತ್ರಿಪುರಾ ಕಾಂಗ್ರೆಸ್‌, ಕರ್ನಾಟಕದ ಬಿಜೆಪಿ ಮಾದರಿಯಲ್ಲೇ ಅಧಿಕ ವಿದ್ಯುತ್ ಬಿಲ್‌ ಬರುವ ಸಾಧ್ಯತೆ, ಪಾರದರ್ಶಕತೆಯ ಕೊರತೆ ಮತ್ತು ಕಾರ್ಯವಿಧಾನದ ಅಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ರಾಜೀಬ್ ಭಟ್ಟಾಚಾರ್ಜಿ, ‘ವಿರೋಧ ಪಕ್ಷವು ಸ್ಮಾರ್ಟ್‌ ಮೀಟರ್‌ ಬಗ್ಗೆ ದುರುದ್ದೇಶಪೂರಿತ ಪ್ರಚಾರವನ್ನು ನಡೆಸುತ್ತಿತ್ತು. ಇದರಿಂದ ಜನರು ದಾರಿ ತಪ್ಪಬಾರದು. ಆ ಸಾಧನಗಳು ವಿದ್ಯುತ್ ಬಳಕೆಯ ನಿಖರವಾದ ರೀಡಿಂಗ್‌ ನೀಡುತ್ತವೆ. ಅನೇಕ ರಾಜ್ಯಗಳಲ್ಲಿ ಈಗಾಗಲೇ ಸ್ಮಾರ್ಟ್‌ ಮೀಟರ್‌ ಅಳವಡಿಸಲಾಗಿದೆ’ ಎಂದು ಹೇಳಿದ್ದಾರೆ. ಜತೆಗೆ, ‘ಅವುಗಳಲ್ಲಿ ಯಾವುದೇ ಸಮಸ್ಯೆ ಕಂಡುಬಂದಲ್ಲಿ ಅವನ್ನು ಸರಿಪಡಿಸಲು ವಿಶೇಷ ಕಾರ್ಯಪಡೆಯನ್ನೂ ರಚಿಸಲಾಗಿದೆ. ದೂರುಗಳನ್ನು ಸ್ವೀಕರಿಸಲು ಸಹಾಯವಾಣಿ ಸಂಖ್ಯೆಯನ್ನೂ ಒದಗಿಸಲಾಗಿದೆ’ ಎಂದರು.

  • ಕಾಂಗ್ರೆಸ್‌ ಸರ್ಕಾರವಿರುವ ಕರ್ನಾಟಕದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ವಿಪಕ್ಷ ಬಿಜೆಪಿ ವಿರೋಧ
  • ಬಿಜೆಪಿ ಆಡಳಿತದ ತ್ರಿಪುರಾದಲ್ಲಿ ಇದರ ತದ್ವಿರುದ್ಧ ಪರಿಸ್ಥಿತಿ
  • ತಿಪಕ್ಷ ಕಾಂಗ್ರೆಸ್‌ ಅದರ ವಿರುದ್ಧ ಅಭಿಯಾನ
  • ರ್ನಾಟಕದ ಬಿಜೆಪಿ ಮಾದರಿಯಲ್ಲೇ ಅಧಿಕ ವಿದ್ಯುತ್ ಬಿಲ್‌ ಬರುವ ಸಾಧ್ಯತೆ, ಪಾರದರ್ಶಕತೆಯ ಕೊರತೆ ಮತ್ತು ಕಾರ್ಯವಿಧಾನದ ಅಕ್ರಮಗಳ ಬಗ್ಗೆ ಕಳವಳ

ಸ್ಮಾರ್ಟ್‌ ಮೀಟರ್‌ ಅಳವಡಿಕೆ ವಿರೋಧಿಸಿ ರ್‍ಯಾಲಿ, ಪ್ರತಿಭಟನೆ, ಅಭಿಯಾನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

CCTVಗಾದ್ರೂ ಸ್ವಲ್ಪ ಮರ್ಯಾದೆ ಕೊಡಿ: ಮನೆಯಲ್ಲಿ ಏನೂ ಸಿಗದೆ ರೊಚ್ಚಿಗೆದ್ದ ಕಳ್ಳ ಬರೆದ ಪತ್ರದಲ್ಲಿ ಏನಿದೆ?
ಸಾಕುನಾಯಿಯ ಅನಾರೋಗ್ಯದಿಂದ ಖಿನ್ನತೆ: ಫಿನಾಯಿಲ್ ಸೇವಿಸಿ ಸೋದರಿಯರಿಬ್ಬರು ಸಾವಿಗೆ ಶರಣು