ಕೋಳಿ ಮರಿಗೆ ಸಿಹಿ ಮುತ್ತು ನೀಡಿ ಬಿಗಿದಪ್ಪಿದ ಕೋತಿ ಮರಿ; ಹೃದಯಸ್ಪರ್ಶಿ ವಿಡಿಯೋ ವೈರಲ್!

By Suvarna News  |  First Published Jun 27, 2021, 9:02 PM IST
  • ಕೋಳಿ ಮರಿಗೆ ಸಿಹಿ ಮುತ್ತು ನೀಡಿದ ಕೋತಿ ಮರಿ ವಿಡಿಯೋ ವೈರಲ್
  • ನೆಟ್ಟಿಗರ ಮನಸ್ಸು ಗೆದ್ದ ನಿಶ್ಕಲ್ಮಶ ಪ್ರೀತಿ, ಆತ್ಮೀಯತೆ
  • ಕ್ಯೂಟ್ ಲವ್ ಸ್ಟೋರಿಗೆ ಮಿಲಿಯನ್ ಲೈಕ್ಸ್ , ಕಮೆಂಟ್

ನವದೆಹಲಿ(ಜೂ.27):  ಪ್ರಾಣಿಗಳ ಪ್ರೀತಿ, ಅಕ್ಕರೆ, ವಾತ್ಸಲ್ಯ, ಆತ್ಮೀಯತೆಗೆ ಸರಿಸಾಟಿ ಯಾವುದೂ ಇಲ್ಲ. ಕಾರಣ ಪ್ರಾಣಿಗಳ ಈ ಪ್ರೀತಿಯಲ್ಲಿ ಕಲ್ಮಶವಿಲ್ಲ. ಈ ರೀತಿಯ ಪ್ರಾಣಿಗಳ ನಡುವಿನ ಪ್ರೀತಿ ವಿಡಿಯೋ ವೈರಲ್ ಆಗಿದೆ. ಈ ಸಾಲಿಗೆ ಮತ್ತೊಂದು ವಿಡಿಯೋ ಸೇರಿಕೊಂಡಿದೆ. ಇದು ಕೋಳಿ ಮರಿ ಹಾಗೂ ಕೋತಿ ಮರಿ ವಿಡಿಯೋ.

ಬಲೆ ಬೀಸಿ ಹಿಡಿದ ಮೀನಿನ ಹೊಟ್ಟೆಯೊಳಗೆ ಫುಲ್ ಬಾಟಲ್ ವಿಸ್ಕಿ; ವಿಡಿಯೋ ವೈರಲ್

Tap to resize

Latest Videos

undefined

ಕೋಳಿ ಮರಿ ಜೊತೆ ಆಟವಾಡುತ್ತಿರುವ ಕೋತಿ ಮರಿ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಕೋಳಿ ಮರಿ ಜೊತೆ ಆಟವಾಡುತ್ತಾ ಬಿಗಿದಪ್ಪಿಕೊಂಡಿದೆ. ಇಷ್ಟೇ ಅಲ್ಲ ಕೋತಿ ಮರಿಗೆ ಸಿಹಿ ಮುತ್ತು ನೀಡಿದ ಈ ವಿಡಿಯೋ ನೆಟ್ಟಿಗ ಹೃದಯ ಗೆದ್ದಿದೆ. ಫಾರೆಸ್ಟ್ ಅಧಿಕಾರಿ ಶುಶಾಂತ್ ನಂದಾ ಈ ವಿಡಿಯೋ ಹಂಚಿಕೊಂಡಿದ್ದಾರೆ.

 

Loved this magical interactions of two pure souls 💕 pic.twitter.com/FSV6c0Ite2

— Susanta Nanda IFS (@susantananda3)

ಮೈದಾನದಲ್ಲಿ ಕೊಹ್ಲಿ ಬಾಂಗ್ರಾ ಡ್ಯಾನ್ಸ್, ಗೆದ್ದರೆ ನಿಮ್ಮೊಂದಿಗೆ ಸ್ಟೆಪ್ಸ್ ಎಂದ ಫ್ಯಾನ್ಸ್!.

ಕೋತಿ ಮರಿಯಿಂದ ಕೋಳಿ ಮರಿ ಹಲವು ಬಾರಿ ದೂರ ತೆರಳಲು ಯತ್ನಿಸಿದೆ. ಆದರೆ ಕೋತಿ ಮರಿ ಬಿಗಿದಿಪ್ಪಿ ಮುತ್ತು ನೀಡಿದೆ. ಹೃದಸ್ಪರ್ಶಿ ವಿಡಿಯೋ ಎಲ್ಲರ ಮನಸ್ಸು ಹಗುರ ಮಾಡುವುದು ಖಚಿತ.  ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ ಸಂಡೇ ವಿಶ್ರಾಂತಿಗೆ ಹೊಸ ಚೈತನ್ಯ ನೀಡಿದೆ.

 

Cuteness overloaded.

— Rathika Ramasamy (@RathikaRamasamy)

Aiyooo...soooo cute😘

— Pallavi(Ruby)Baruah🇮🇳 (@25rubybaruah)

Absolutely clean hearts.

— venkatesh (@halsurvenka)
click me!