ಭಾರತದ ಕೋವಿಡ್ ಗುಣಮುಖರ ಸಂಖ್ಯೆ ಶೇ. 96.75%ಕ್ಕೆ ಏರಿಕೆ; ಆತಂಕದ ನಡುವೆ ನೆಮ್ಮದಿ!

By Suvarna NewsFirst Published Jun 27, 2021, 6:18 PM IST
Highlights
  • ಕೊರೋನಾ 2ನೇ ಅಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ
  • ಇದರ ನಡುವೆ ಡೆಲ್ಟಾ ಸೇರಿದಂತ 3ನೇ ಅಲೆ ಭೀತಿ ಆವರಿಸಿದೆ
  • ಕೊರೋನಾ ಗುಣಮುಖರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ
  • ಭಾರತದ ಕೊರೋನಾ ಪ್ರಕರಣ, ಲಸಿಕಾ ಅಭಿಯಾನದ ಮಾಹಿತಿ ಇಲ್ಲಿದೆ.
     

ನವದೆಹಲಿ(ಜೂ.27):  ಕೊರೋನಾ ವೈರಸ್ 2ನೇ ಅಲೆ ಆತಂಕ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಡೆಲ್ಟಾ ಪ್ಲಸ್ ವೇರಿಯೆಂಟ್ ಭೀತಿ ಹೆಚ್ಚಾಗಿದೆ. ಇದರೊಂದಿಗೆ ತಜ್ಞರ ಸಲ್ಲಿಸಿರುವ 3ನೇ ಅಲೆ ವರದಿ ಕೂಡ ಜನರ ಆತಂಕವನ್ನು ಹೆಚ್ಚಿಸಿದೆ. ಇದರ ನಡುವೆ ಭಾರತದ ಸಕ್ರಿಯೆ ಕೊರೋನಾ ಪಕರಣ ಸಂಖ್ಯೆ ಹಾಗೂ ಗುಣಮುಖರ ಸಂಖ್ಯೆ ಸಮಾಧಾನ ತಂದಿದೆ.

ಲಸಿಕೆ ನಿರಾಕರಿಸಿದರೆ ಜೈಲು, ನಿಮ್ಮಿಷ್ಟದಂತೆ ಇರಲು ಭಾರತಕ್ಕೆ ತೊಲಗಿ: ಫಿಲಿಪೈನ್ ಅಧ್ಯಕ್ಷ ವಾರ್ನಿಂಗ್!.

ಕಳೆದ 24 ಗಂಟೆಯಲ್ಲಿ ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ ಬರೇ 1.94% ರಷ್ಟಿದೆ.  ಕೊರೋನಾದಿಂದ ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಸಂಖ್ಯೆ ಸತತ 45 ನೇ ದಿನವೂ ಹೊಸ ಪ್ರಕರಣಕ್ಕಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 57,944 ಮಂದಿ ಗುಣಮುಖರಾಗಿದ್ದಾರೆ.  ಈ ಮೂಲಕ  ಒಟ್ಟು ಗುಣಮುಖ ದರ 96.75%, ಏರಿಕೆಯಾಗಿದೆ.

ದೇಶದಲ್ಲಿನ ಕೊರೋನಾ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 17,77,309 ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಮೂಲಕ ಭಾರತ ಇದುವರೆಗೆ ಒಟ್ಟು 40.42 ಕೋಟಿ (40,42,65,101) ಪರೀಕ್ಷೆಗಳನ್ನು ನಡೆಸಿದೆ.

'ಲಸಿಕೆ 75% ಜನಕ್ಕೆ ಉಚಿತ, 25% ಜನಕ್ಕೆ ಶುಲ್ಕ ಏಕೆ?.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 50,040 ಹೊಸ ಪ್ರಕರಣಗಳು ವರದಿಯಾಗಿವೆ. ಸತತ 20 ನೇ ದಿನವೂ  1 ಲಕ್ಷಕ್ಕಿಂತ ಕಡಿಮೆ ಹೊಸ ಪ್ರಕರಣಗಳು ದಾಖಲಾಗುತ್ತಿವೆ.  ಜೂನ್ 21 ರಿಂದ ಭಾರತದ ಲಸಿಕಾ ಅಭಿಯಾನದ ವೇಗ ಹೆಚ್ಚಾಗಿದೆ. ಪರಿಣಾಮ ಭಾರತದದ ಲಸಿಕಾ ಅಭಿಯಾನ  32 ಕೋಟಿ ಮೈಲಿಗಲ್ಲು ದಾಟಿದೆ.  ಒಟ್ಟು 32,17,60,077 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 64,25,893 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.

click me!