ಏನಿದು ವಿಚಿತ್ರ... ಇಲ್ಲಿ ನಡೆಯುತ್ತೆ ಚಪ್ಪಲಿ ಏಟಿನ ಹೋಳಿ

Suvarna News   | Asianet News
Published : Mar 18, 2022, 10:02 AM IST
ಏನಿದು ವಿಚಿತ್ರ... ಇಲ್ಲಿ ನಡೆಯುತ್ತೆ ಚಪ್ಪಲಿ ಏಟಿನ ಹೋಳಿ

ಸಾರಾಂಶ

ಪರಸ್ಪರ ಚಪ್ಪಲಿ ಎಸೆದುಕೊಂಡು ಹೋಳಿ ಆಚರಣೆ ಪಾಟ್ನಾದ ವಾಟರ್‌ಪಾರ್ಕ್‌ನಲ್ಲಿ ವಿಚಿತ್ರ ಹೋಳಿ ಆಚರಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಪಾಟ್ನಾ: ಬಿಹಾರದ ವಾಟರ್‌ ಪಾರ್ಕೊಂದರಲ್ಲಿ ಜನ ವಿಚಿತ್ರವಾಗಿ ಹೋಳಿ ಆಚರಿಸುತ್ತಿದ್ದಾರೆ. ಪರಸ್ಪರ ಒಬ್ಬರ ಮೇಲೊಬ್ಬರು ಚಪ್ಪಿ ಎಸೆಯುವ ಮೂಲಕ ಜನ ಹೋಳಿ ಆಚರಣೆ ಮಾಡಿದ್ದು ವಿಚಿತ್ರ ಎನಿಸಿದೆ. ಬಣ್ಣಗಳ ಹಬ್ಬವಾದ ಹೋಳಿಯನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಜನರು ವಿಧ ವಿಧದ ಸಿಹಿತಿಂಡಿಗಳನ್ನು ಸವಿಯುತ್ತಾ, ಪಾನೀಯಗಳನ್ನು ಸೇವಿಸುತ್ತಾ 'ಹೋಳಿ ಹೈ' ಎಂದು ಹಾಡುತ್ತಾ ಬಣ್ಣಗಳನ್ನು ಎಲ್ಲರ ಮೇಲೆ ಎರಚುತ್ತಾ ಹೋಳಿ ಆಚರಿಸುತ್ತಾರೆ. ಮಕ್ಕಳು ವೃದ್ಧರಾದಿಯಾಗಿ ವಾಟರ್ ಗನ್‌ಗಳಿಂದ ಪರಸ್ಪರ ದಾಳಿ ಮಾಡುತ್ತಾ ನೀರಿನ ಬಲೂನ್‌ಗಳನ್ನು ಎಸೆಯುವ ಮೂಲಕ ಹಬ್ಬವನ್ನು ಆಚರಿಸುವುದನ್ನು ನೀವು ನೋಡಿರಬಹುದು. ಆದರೆ  ಸಂದರ್ಭವನ್ನು ಸಂಭ್ರಮಿಸಲು ಒಬ್ಬರ ಮೇಲೊಬ್ಬರು ಚಪ್ಪಲಿ ಎಸೆದುಕೊಳ್ಳುವುದನ್ನು ನೀವು ಎಲ್ಲೂ ನೋಡಿರಲು ಸಾಧ್ಯವಿಲ್ಲ.

ಆದರೆ ಬಿಹಾರದ (Bihar) ಪಾಟ್ನಾದಲ್ಲಿರುವ (Patna) ವಾಟರ್ ಪಾರ್ಕ್‌ನಲ್ಲಿ (water park) ಹೋಳಿ ಆಡಲು ಜನರು ಪರಸ್ಪರ ಚಪ್ಪಲಿ ಎಸೆಯಲು ಪ್ರಾರಂಭಿಸಿದಾಗ ಸಂಭ್ರಮಾಚರಣೆ ತೀವ್ರ ಸ್ವರೂಪ ಪಡೆದುಕೊಂಡಿತು. ನಿನ್ನೆ ನಡೆದ (ಮಾರ್ಚ್ 17) ಛೋಟಿ ಹೋಳಿಯಲ್ಲಿ ಈ ವಿಚಿತ್ರ ಆಚರಣೆ ನಡೆದಿದೆ. ಚಪ್ಪಲಿ ಎಸೆಯುತ್ತಾ ಹೋಳಿ ಆಚರಿಸುತ್ತಿರುವ ದೃಶ್ಯದ ವಿಡಿಯೋ  ಸಾಮಾಜಿಕ ಮಾಧ್ಯಮದಲ್ಲಿ (social media) ವೈರಲ್ ಆಗಿದೆ. ವೀಡಿಯೊದಲ್ಲಿ ಜನ ಪಾಟ್ನಾದ ವಾಟರ್ ಪಾರ್ಕ್‌ಗೆ ಭೇಟಿ ನೀಡುತ್ತಿರುವುದನ್ನು ಮತ್ತು ವಾಟರ್ ಸ್ಲೈಡ್‌ಗಳ ಬಳಿ ಬಣ್ಣದ ನೀರಿನ ಬೃಹತ್ ಕೊಳದಲ್ಲಿ ಚಪ್ಪಲಿ ಎಸೆಯುತ್ತಾ ಆಡುತ್ತಿರುವುದನ್ನು ತೋರಿಸಿದೆ. ಒಬ್ಬರಿಗೊಬ್ಬರು ಬಣ್ಣ ಹಚ್ಚಿದ ನಂತರ ಜನರು ಪರಸ್ಪರ ಚಪ್ಪಲಿ ಎಸೆಯಲು ಆರಂಭಿಸಿದರು.

HoLi 2022: ನವವಿವಾಹಿತೆ ಕಾಮದಹನ ನೋಡ್ಲೇಬಾರ್ದು, ಅತ್ತೆ ಸೊಸೆ ಜೊತೆಯಾಗಿ ನೋಡಿದ್ರಂತೂ ಕಷ್ಟ ಕಷ್ಟ

ಚಪ್ಪಲ್ ಮಾರ್ ಹೋಳಿ (ಚಪ್ಪಲಿ ಏಟಿನ ಹೋಳಿ) ಆಡುವಾಗ ಜನರು ಒಬ್ಬರನ್ನೊಬ್ಬರು ಗುರಿಯಾಗಿಸಿಕೊಂಡು ಚಪ್ಪಲಿಗಳನ್ನು ಎಸೆಯುತ್ತಿದ್ದರು. ಇದರಿಂದ ಚಪ್ಪಲಿಗಳು ಎಲ್ಲೆಂದರಲ್ಲಿ ಹಾರಾಡುತ್ತಿದ್ದವು. ಹತ್ತಾರು ಚಪ್ಪಲಿಗಳು ಗಾಳಿಯಲ್ಲಿ ಎತ್ತರದಲ್ಲಿ ಮತ್ತು ನೀರಿನಲ್ಲಿ ತೇಲುತ್ತಿರುವುದನ್ನು ಕಾಣಬಹುದು. ಈ ವೀಡಿಯೊವನ್ನು ಇಲ್ಲಿಯವರೆಗೆ 36,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಭಾರತ (India)ದಲ್ಲಿ ಹೋಳಿ (Holi) ಹಬ್ಬ (Festival)ವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತೆ. ಪರಸ್ಪರ ಬಣ್ಣ (Color) ಎರೆಚಿಕೊಂಡು ಜನರು ಬಣ್ಣದಲ್ಲಿ ಮಿಂದೇಳುತ್ತಾರೆ. ಹೋಳಿ ಭಾರತದಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ. ಹೋಳಿ ಹಿಂದಿನ ದಿನ ಹೋಳಿ ದಹನ ನಡೆಯುತ್ತದೆ. ಅದನ್ನು ಕಾಮ ದಹನ ಎಂದು ಕರೆಯಲಾಗುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿ ಹೋಳಿ ದಹನವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಲಾಗುತ್ತದೆ. ಕಾಮ ದಹನದ ಮರುದಿನ ಬಣ್ಣದ ಹೋಳಿಯಾಡಲಾಗುತ್ತದೆ. ಹೋಳಿ ಹಬ್ಬದ ಹಿಂದಿನ ದಿನ ಅಂದ್ರೆ ಹೋಳಿ ದಹನದ ದಿನ ಕೆಲ ಉಪಾಯಗಳನ್ನು ಮಾಡಿದ್ರೆ ಜೀವನದ ಎಲ್ಲ ಸಂಕಷ್ಟ ದೂರವಾಗಲಿದೆ. 

Holi 2022: ಬಣ್ಣದ ಜೊತೆ ಹಣ ಮನೆಗೆ ಬರ್ಬೇಕೆಂದ್ರೆ ಹೋಳಿ ದಿನ ಮಾಡಿ ಈ ಕೆಲಸ 

ಹೋಳಿ ಹಬ್ಬಕ್ಕೆ ಒಂದು ದಿನ ಮೊದಲು ಕಾಮ ದಹನದ ದಿನ ಬಡವರಿಗೆ,ನಿರ್ಗತಿಕರಿಗೆ,ಅವಶ್ಯಕತೆಯಿರುವವರಿಗೆ ವಸ್ತು,ಆಹಾರವನ್ನು ದಾನ ಮಾಡಿ. ಹೀಗೆ ಮಾಡಿದ್ರೆ ನಿಮ್ಮ ಆರೋಗ್ಯ ಹಾಗೂ ಸಂಪತ್ತಿನ ಮೇಲೆ ಸಕಾರಾತ್ಮಕ ಪ್ರಭಾವವುಂಟಾಗಲಿದೆ. ಇದ್ರಿಂದ ಮಾನಸಿಕ ಶಾಂತಿ ಸಿಗಲಿದೆ.  ನೌಕರಿಯಲ್ಲಿ ತೃಪ್ತಿಯಿಲ್ಲ ಅಥವಾ ಎಷ್ಟೇ ಕೆಲಸ ಮಾಡಿದ್ರೂ ಉದ್ಯೋಗದಲ್ಲಿ ನೆಮ್ಮದಿ,ಬಡ್ತಿ ಸಿಗ್ತಿಲ್ಲವೆಂದ್ರೆ ಕಾಮ ದಹನದ ದಿನ ಅಗ್ನಿಗೆ ತೆಂಗಿನ ಕಾಯಿಯನ್ನು ಹಾಕಿ. ಅಲ್ಲದೆ ಕಾಮನ ಮೂರ್ತಿಗೆ ಏಳು ಬಾರಿ ಪ್ರದಕ್ಷಿಣೆ ಹಾಕಿ. 

ಹೋಳಿ ಹಬ್ಬವು ಹೋಳಿ ದಹನದಿಂದ ಶುರುವಾಗುತ್ತದೆ. ಕೆಟ್ಟದ್ದು ತೊಲಗಿ ಒಳ್ಳೆಯದು ಬರಲಿ ಎಂಬುದು ಇದ್ರ ಸಂಕೇತವಾಗಿದೆ. ಸದಾ ಮನೆಯಲ್ಲಿ ಸಂಪತ್ತು ತುಂಬಿರಬೇಕು ಅಥವಾ ಸುಖ-ಶಾಂತಿ ನೆಲೆಸಿರಬೇಕೆಂದು ಬಯಸುವವರು ಕಾಮ ದಹನದ ಪೂಜೆ ವೇಳೆ ಒಣ ಹಣ್ಣುಗಳು ಹಾಗೂ ಮಿಠಾಯಿಯನ್ನು ಅರ್ಪಿಸಿ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ