G-23: ಆಜಾದ್ ಮನೆಯಲ್ಲಿ 2ನೇ ಸಾರಿ ಸಭೆ ಸೇರಿದ ನಾಯಕರು, ಕೈ ಪಟ್ಟ ಬದಲು?

By Kannadaprabha News  |  First Published Mar 18, 2022, 3:31 AM IST


* ಮತ್ತೆ ಜಿ-23 ನಾಯಕರ ಸಭೆ: ನಾಯಕತ್ವ ಬದಲಾವಣೆಗೆ ಪಟ್ಟು

* ಪಕ್ಷ ವಿಭಜಿಸುವ ಉದ್ದೇಶ ಇಲ್ಲ, ಬಲವರ್ಧನೆ ಉದ್ದೇಶವಷ್ಟೇ

* ಸೋನಿಯಾ ಮನವರಿಕೆಗೆ ಇಂದು ಪ್ರಯತ್ನ* ಸೋನಿಯಾ ಭೇಟಿ ಮಾಡಲಿರುವ ಗುಲಾಂ ನಬಿ


ನವದೆಹಲಿ(ಮಾ. 18) ಪಂಚರಾಜ್ಯ ಚುನಾವಣೆಯ (5 State Result) ಹೀನಾಯ ಸೋಲಿನ ಬಳಿಕ ಕಾಂಗ್ರೆಸ್‌ (Congress) ಪಕ್ಷದಲ್ಲಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಜಿ-23 ಬಂಡಾಯ ನಾಯಕರು ಗುರುವಾರ ಮತ್ತೊಮ್ಮೆ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರ ನಿವಾಸದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ನಾಯಕತ್ವ ಬದಲಾವಣೆ ಅತ್ಯಗತ್ಯ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಶುಕ್ರವಾರ ಸೋನಿಯಾ ಗಾಂಧಿ (Sonia Gandhi)ಅವರನ್ನು ಜಿ-23 ನಾಯಕ ಗುಲಾಂ ನಬಿ ಆಜಾದ್‌ ಭೇಟಿ ಮಾಡಲಿದ್ದಾರೆ.

ಅಲ್ಲದೆ ಪಕ್ಷ ಸಂಘಟನೆಯಷ್ಟೇ ಜಿ-23 ಬಣದ ಉದ್ದೇಶ, ಪಕ್ಷ ವಿಭಜನೆಯಲ್ಲ ಎಂದು ಮನವರಿಕೆ ಮಾಡಲು ನಿರ್ಧರಿಸಲಾಯಿತು. ನಾಯಕತ್ವದ ಮೇಲೆ ಒತ್ತಡ ಹೇರಲು ಇನ್ನು ಮುಂದೆ ನಿರಂತರವಾಗಿ ಸಭೆ ನಡೆಸಲೂ ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಗುಲಾಂ ನಬಿ ಅವರು ಶುಕ್ರವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಜಿ-23 ಬಣದ ನಿಲುವಿನ ಬಗ್ಗೆ ಮನವರಿಕೆ ಮಾಡಲಿದ್ದಾರೆ.

Tap to resize

Latest Videos

Karnataka Politics: ರಾಜ್ಯಕ್ಕೆ ಬರಲಿದ್ದಾರೆ ಅಮಿತ್ ಶಾ...ಅವರ ಮುಂದೆಯೇ ಸಂಪುಟ ಫೈನಲ್

ಈ ಮಧ್ಯೆ ಜಿ-23 ನಾಯಕರ ಸಭೆಗೂ ಮುನ್ನ ಬಂಡಾಯ ನಾಯಕರಲ್ಲಿ ಒಬ್ಬರಾದ ಭೂಪಿಂದರ್‌ ಸಿಂಗ್‌ ಹೂಡಾ ಜೊತೆ ರಾಹುಲ್‌ ಗಾಂಧಿ ಗುರುವಾರ ಮಾತುಕತೆ ನಡೆಸಿದರು. ಈ ವೇಳೆ ಭೂಪಿಂದರ್‌ ಸಿಂಗ್‌ ಸಹ, ಜಿ-23 ಬಣ ಪಕ್ಷವನ್ನು ವಿಭಜಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಹಾಗೂ ಸಮಗ್ರ ನಾಯಕತ್ವ ಪಕ್ಷಕ್ಕೆ ಬೇಕು ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌ 5 ರಾಜ್ಯಗಳಲ್ಲಿ ಸೋತ ಕಾರಣ ಮರುಸಂಘಟನೆ ಬಗ್ಗೆಯೂ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ‘ರಾಹುಲ್‌ ಮೇಲೆ ನಂಬಿಕೆ ಇಲ್ಲ. ಗಾಂಧಿಗಳ ನಾಯಕತ್ವ ಬದಲಾವಣೆ ಆಗಲೇಬೇಕು’ ಎಂದು ಜಿ-23 ನಾಯಕ ಶಂಕರಸಿಂಗ್‌ ವಘೇಲಾ ಹಾಗೂ ಪಟ್ಟು ಹಿಡಿದು ಆಗ್ರಹಿಸಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ನಂತರ ಜಿ-23 ಬಂಡಾಯ ನಾಯಕರು ಸರಣಿ ಸಭೆ ನಡೆಸುತ್ತಿದ್ದು, ಬುಧವಾರ ಸಹ ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರ ನಿವಾಸದಲ್ಲಿ ಸಭೆ ಸೇರಲಾಗಿತ್ತು. ಈ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಗಾಂಧಿ ಕುಟುಂಬ ದೂರ ಇರಬೇಕು, ರಾಹುಲ್‌ ಗಾಂಧಿ ನಾಯಕತ್ವದಲ್ಲಿ ನಂಬಿಕೆ ಇಲ್ಲ. ಕಾಂಗ್ರೆಸ್‌ ಉನ್ನತಿ ಕಾಣಬೇಕೆಂದರೆ, ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಪಡೆಯಬೇಕೆಂದರೆ ಸಮರ್ಥ ನಾಯಕತ್ವದ ಅಗತ್ಯವಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

 ಈ ಹಿಂದೆ ಸಹ ನಾಯಕರು ನಾಯಕತ್ವ ಬದಲಾವಣೆಗೆ ಪತ್ರ ಬರೆದಿದ್ದರು ಎಂಬುದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಆಂತರಿಕ ವಲಯದಲ್ಲಿ ಸಮೀಕ್ಷೆಯನ್ನು ನಡೆಸಿತ್ತು.   ಎರಡು ಅವಧಿಯಲ್ಲಿ ಸಚಿರಾದವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂಬ ಮಾತುಗಳು ಕೇಳಿ  ಬಂದಿದ್ದವು. 

 

click me!