ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧನ

By Ravi Janekal  |  First Published Sep 9, 2023, 7:03 AM IST

ಸ್ಕಿಲ್ ಡೆವೆಲಪ್‌ಮೆಂಟ್ ಯೋಜನೆ ಹಗರಣ ಸಂಬಂಧ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಶನಿವಾರ ಮುಂಜಾನೆ ಆಂಧ್ರದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.


ಸ್ಕಿಲ್ ಡೆವೆಲಪ್‌ಮೆಂಟ್ ಯೋಜನೆ ಹಗರಣ ಸಂಬಂಧ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಶನಿವಾರ ಮುಂಜಾನೆ 6ಗಂಟೆಯ ಸಮಯ ಆಂಧ್ರ ಪ್ರದೇಶ ನಂದ್ಯಾಲ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಆಂಧ್ರದ ಕೌಶಲ್ಯಾಭಿವೃದ್ಧಿ ನಿಗಮದಲ್ಲಿ 371 ಕೋಟಿ ಭ್ರಷ್ಟಾಚಾರ ನಡೆಸಿರುವ ಆರೋಪ. 2014ರಲ್ಲಿ ಚಂದ್ರಬಾಬು ನಾಯ್ಡು ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿರುವ ಹಗರಣ. ಟೆಂಡರ್​ ಕಡೆಯದೆ 371 ಕೋಟಿ ಹಣ ಬಿಡುಗಡೆ ಮಾಡಿದ ಅರೋಪ. ಈ ಪ್ರಕರಣದಲ್ಲಿ A1 ಅರೋಪಿಯಾಗಿರುವ ಚಂದ್ರಬಾಬು ನಾಯ್ಡು. ಹಗರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿದ್ದ ಸಿಎಂ ಜಗನ್​​. ಹಗರಣದ ಬಗ್ಗೆ ಉತ್ತರಿಸುವಂತೆ ಸೂಚಿಸಲಾಗಿತ್ತು. ಆದರೆ ಈವರೆಗೆ ಸೂಕ್ತ ಉತ್ತರ ನೀಡದ ಚಂದ್ರಬಾಬು ನಾಯ್ಡು.ಹೀಗಾಗಿ ಚಂದ್ರಬಾಬು ನಾಯ್ಡು ಬಂಧನಕ್ಕೆ ಸೂಚನೆ ನೀಡಿದ ಹೈಕೋರ್ಟ್​ ಹೈಕೋರ್ಟ್​ ಸೂಚನೆ ಮೇರೆಗೆ ಬೆಳಗಿನ ಜಾವ 6  ಗಂಟೆಗೆ ಬಂಧಿಸಿದ ಸಿಐಡಿ ಪೊಲೀಸರು.

Tap to resize

Latest Videos

ಟಿಡಿಪಿ ಕಾರ್ಯಕರ್ತರಿಂದ ತೀವ್ರ ಪ್ರತಿರೋಧ:

ಸಿಐಡಿ ಪೊಲೀಸರು ಬಂಧಿಸಲು ತೆರಳಿದ್ದಾಗ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಟಿಡಿಪಿ ಕಾರ್ಯಕರ್ತರಿಂದ ತೀವ್ರ ಪ್ರತಿರೋಧ ಎದುರಿಸಿದರು. ಈ ವೇಳೆ ಎಸ್‌ಪಿಜಿ ಪಡೆಗಳು ಸಹ ಪೊಲೀಸರಿಗೆ ವಶಕ್ಕೆ ಪಡೆಯಲು ಅನುಮತಿ ನೀಡಲಿಲ್ಲ. ನಿಯಮಗಳ ಪ್ರಕಾರ ಬೆಳಗ್ಗೆ 5.30 ರವರೆಗೆ ನಾಯ್ಡುರನ್ನು ಭೇಟಿಯಾಗಲು, ತಲುಪಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ ಎಂದು ಎಸ್‌ಪಿಜಿ ಪಡೆಗಳು ತಿಳಿಸಿದರು. ಹೀಗಾಗಿ ಬೆಳಗ್ಗೆ 6 ಗಂಟೆಯವರೆಗೆ ಕಾದು ನಾಯ್ಡು ಹೊರಹೋಗುವ ಸಂದರ್ಭದಲ್ಲಿ ನಾಯ್ಡು ಅವರ ವಾಹನ ಬಾಗಿಲು ಬಡಿದು ಕೆಳಗಿಳಿಸಿ ಬಂಧಿಸಿದ್ದಾರೆ..

ವಾಹನದಿಂದ ಚಂದ್ರಬಾಬು ನಾಯ್ಡು ಅವರನ್ನು ಕೆಳಗಿಳಿಸಿದ ಬಳಿಕ ಸ್ಕಿಲ್ ಡೆವೆಲಪ್‌ಮೆಂಟ್ ಹಗರಣ ಸಂಬಂಧ ಬಂಧಿಸಲಾಗುತ್ತಿದೆ ಎಂದು ಡಿಐಜಿ ಅವರಿಗೆ ತಿಳಿಸಿದರು ಈ ವೇಳೆ ಕಾರ್ಯಕರ್ತರಿಂದ ಪ್ರತಿರೋಧದ ನಡುವೆಯೂ ವಶಕ್ಕೆ ಪಡೆದ ಪೊಲೀಸರು. ಸದ್ಯ ಚಂದ್ರಬಾಬು ನಾಯ್ಡುರನ್ನು ವಿಜಯವಾಡಕ್ಕೆ ಶಿಫ್ಟ್ ಮಾಡಿದ ಪೊಲೀಸರು.

click me!