ಜಿ20ರಿಂದ ಹೊಸ ಪಥಕ್ಕೆ ನಾಂದಿ: ಮೋದಿ ವಿಶ್ವಾಸ

Published : Sep 09, 2023, 12:30 AM IST
ಜಿ20ರಿಂದ ಹೊಸ ಪಥಕ್ಕೆ ನಾಂದಿ: ಮೋದಿ ವಿಶ್ವಾಸ

ಸಾರಾಂಶ

ಭಾರತವು ಆಯೋಜಿಸುತ್ತಿರುವ ಮೊದಲ ಜಿ20 ಶೃಂಗಸಭೆ ಇದಾಗಿದೆ. ಇದು ನಮಗೆ ಸಂತಸ ತರುತ್ತಿದೆ. ಈಗ ಭಾರತಕ್ಕೆ ಬಂದಿರುವ ಅತಿಥಿಗಳು ನಮ್ಮ ಆತಿಥ್ಯವನ್ನು ಆನಂದಿಸುವ ವಿಶ್ವಾಸವಿದೆ’ ಎಂದ ಮೋದಿ. 

ನವದೆಹಲಿ(ಸೆ.09): ಇಂದು(ಶನಿವಾರ) ಹಾಗೂ ನಾಳೆ(ಭಾನುವಾರ) ಭಾರತದ ರಾಜಧಾನಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯು ಮಾನವ ಕೇಂದ್ರಿತ ಹಾಗೂ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ (ಅಂತರ್ಗತ ಅಭಿವೃದ್ಧಿಯ) ಹೊಸ ಹಾದಿ ರೂಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಮಹಾತ್ಮಾ ಗಾಂಧೀಜಿ ಅವರ ಬಡವರ ಉದ್ಧಾರದ ತತ್ವ ಪಠಿಸಿದ್ದಾರೆ.

ಶುಕ್ರವಾರ ಸಂಜೆ ಸರಣಿ ಟ್ವೀಟ್‌ ಮಾಡಿರುವ ಮೋದಿ, ‘ಭಾರತವು ಆಯೋಜಿಸುತ್ತಿರುವ ಮೊದಲ ಜಿ20 ಶೃಂಗಸಭೆ ಇದಾಗಿದೆ. ಇದು ನಮಗೆ ಸಂತಸ ತರುತ್ತಿದೆ. ಈಗ ಭಾರತಕ್ಕೆ ಬಂದಿರುವ ಅತಿಥಿಗಳು ನಮ್ಮ ಆತಿಥ್ಯವನ್ನು ಆನಂದಿಸುವ ವಿಶ್ವಾಸವಿದೆ’ ಎಂದಿದ್ದಾರೆ.

ದೇಶಕ್ಕೆ ಬಂದ ಮಗಳು ಅಳಿಯ, ಸಾಂಪ್ರದಾಯಿಕವಾಗಿ ಕಚ್ಚೆ ಪಂಚೆ ಧರಿಸಿ ಸ್ವಾಗತಿಸಿದ ಕೇಂದ್ರ ಸಚಿವ!

‘ಜಿ 20 ಶೃಂಗವು ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಹೊಸ ಹಾದಿಯನ್ನು ರೂಪಿಸಲಿದೆ. ಮಹಾತ್ಮಾ ಗಾಂಧೀಜಿ ಅವರು ಸರದಿಯಲ್ಲಿನ ಕೊನೆಯ ವ್ಯಕ್ತಿಯಾದ ಹಿಂದುಳಿದವರಿಗೆ ಸೇವೆ ಸಲ್ಲಿಸುವ ಅವರ ಧ್ಯೇಯ ಪಠಿಸಿದ್ದರು. ಅದನ್ನು ಈಗ ಅನುಕರಿಸುವುದು ಮುಖ್ಯ’ ಎಂದು ತಿಳಿಸಿದ್ದಾರೆ.

‘21ನೇ ಶತಮಾನದ ವೇಳೆ ಬಹುಪಕ್ಷೀಯ ಸಂಸ್ಥೆಗಳನ್ನು ಬಲಪಡಿಸಲು ಬಯಸುತ್ತೇವೆ. ನಾವು ತಾಂತ್ರಿಕ ರೂಪಾಂತರ ಮತ್ತು ಡಿಜಿಟಲ್‌ ಸಾರ್ವಜನಿಕ ಮೂಲಸೌಕರ್ಯಗಳಂತಹ ಭವಿಷ್ಯದ ವಲಯಗಳಿಗೆ ಅಪಾರ ಆದ್ಯತೆಯನ್ನು ನೀಡುತ್ತೇವೆ. ನಾವು ಮತ್ತಷ್ಟುಲಿಂಗ ಸಮಾನತೆ, ಮಹಿಳಾ ಸಬಲೀಕರಣ ಮತ್ತು ವಿಶ್ವ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದಿದ್ದಾರೆ,

‘ನಮ್ಮ ಸಾಂಸ್ಕೃತಿಕ ನೀತಿಯಲ್ಲಿ ಬೇರೂರಿರುವ ಭಾರತದ ಜಿ20 ಅಧ್ಯಕ್ಷೀಯ ವಿಷಯವಾದ ‘ವಸುಧೈವ ಕುಟುಂಬಕಂ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಘೋಷಣೆಯು ಇಡೀ ಜಗತ್ತು ಒಂದೇ ಕುಟುಂಬ ಎಂಬ ನಮ್ಮ ವಿಶ್ವ ದೃಷ್ಟಿಕೋನವನ್ನು ಆಳವಾಗಿ ಅನುರಣಿಸುತ್ತದೆ’ ಎಂದಿದ್ದಾರೆ

‘ಭಾರತದ ಜಿ20 ಅಧ್ಯಕ್ಷ ಸ್ಥಾನವು ಅಂತರ್ಗತ, ಮಹತ್ವಾಕಾಂಕ್ಷೆಯ, ನಿರ್ಣಾಯಕ ಮತ್ತು ಕಾರ್ಯ ಆಧಾರಿತವಾಗಿದೆ. ನಾವು ಹಿಂದುಳಿದ ದೇಶಗಳ ಅಭಿವೃದ್ಧಿಗಾಗಿ ದನಿ ಎತ್ತಿದ್ದೇವೆ. ಸಮತೋಲಿತ ಬೆಳವಣಿಗೆಯ ಇರಾದೆ ನಮ್ಮದಾಗಿದೆ’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ