ಬುಧವಾರ ದಾಳಿಗೂ ಮುನ್ನ ಎಲ್ಲ ನಾಲ್ವರು ಆರೋಪಿಗಳಿಂದ ಮೊಬೈಲ್‌ಗಳನ್ನು ಪಡೆದುಕೊಂಡಿದ್ದ ಲಲಿತ್, ಬಳಿಕ ಸಂಸತ್ತಿನ ಹೊರಗೆ ನೀಲಂ ಮ್ತತು ಅಮೋಲ್ ಸ್ಮೋಕ್ ಕ್ಯಾನ್ ಸಿಡಿಸಿದ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಪರಾರಿಯಾಗಿದ್ದ.
ನವದೆಹಲಿ (ಡಿಸೆಂಬರ್ 15, 2023): ಸಂಸತ್ತಿನಲ್ಲಿ ನಡೆದ ಸ್ಮೋಕ್ ಬಾಂಬ್ ದಾಳಿಯ ಮಾಸ್ಟರ್ ಮೈಂಡ್, ಕೋಲ್ಕತಾದಲ್ಲಿ ಶಿಕ್ಷಕನಾಗಿರುವ ಲಲಿತ್ ಝಾ ನನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ.
ನಾಪತ್ತೆಯಾಗಿದ್ದ ಈತನನ್ನು ತೀವ್ರ ಶೋಧದ ಬಳಿಕ ದಿಲ್ಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದರಿಂದಾಗಿ ಸಂಸತ್ ದಾಳಿಯ ಎಲ್ಲ ಆರೋಪಿಗಳು ಸೆರೆ ಸಿಕ್ಕಂತಾಗಿದೆ. ಈತ ಬಂಗಾಳದ ಎನ್‌ಜಿಒ ಒಂದರ ಪ್ರಧಾನ ಕಾರ್ಯದರ್ಶಿಯಾಗಿದ್ದ. ಗಾಂಧಿ ಚಿಂತನೆಗಳ ಹಾಗೂ ಪ್ರಧಾನಿ ಮೋದಿಯವರ ವಿರೋಧಿಯಾಗಿದ್ದ.
ಇದನ್ನು ಓದಿ: ಸಂಸತ್ ದಾಳಿಕೋರರ ಗುರಿ ಪ್ರಧಾನಿ ಮೋದಿ! ದಾಳಿಗೆ ಅಸಲಿ ಕಾರಣ ಇದೇನಾ?
ಬುಧವಾರ ದಾಳಿ ನಡೆಯುವಾಗ ಸಂಸತ್ತಿನ ಹೊರಗಿನ ಘಟನೆಯನ್ನು ಚಿತ್ರೀಕರಿಸಿಕೊಂಡು ಪರಾರಿಯಾಗಿದ್ದ. ಬಿಹಾರ ಮೂಲದ ಲಲಿತ್ ಕೋಲ್ಕತಾದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಾ ಎನ್‌ಜಿಒಗಳ ಜತೆ ಸೇರಿ ಬೇರೆ ಬೇರೆ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದ.
ಭಗತ್ ಸಿಂಗ್‌ರಿಂದ ಪ್ರೇರೇಪಣೆಗೊಂಡಿದ್ದ ಈತ, ಫೇಸ್‌ಬುಕ್‌ನಲ್ಲಿರುವ ಭಗತ್ ಸಿಂಗ್ ಫ್ಯಾನ್ ಕ್ಲಬ್ ಮೂಲಕ ಉಳಿದ ದಾಳಿಕೋರರ ಸಂಪರ್ಕಕ್ಕೆ ಬಂದಿದ್ದ. ಸಂಸತ್ ಮೇಲೆ ದಾಳಿ ನಡೆಸಲು, ಅದಕ್ಕಾಗಿ ಪರಿಶೀಲನೆ ನಡೆಸಲು, 22ನೇ ವರ್ಷಾಚರಣೆ ದಿನವೇ ದಾಳಿ ನಡೆಸಲು ದಿನ ನಿಗದಿ ಮಾಡಿದ್ದು ಈತನೇ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಇದನ್ನು ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ: 8 ಲೋಕಸಭೆ ಸಿಬ್ಬಂದಿ ಅಮಾನತು, ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು
ಬುಧವಾರ ದಾಳಿಗೂ ಮುನ್ನ ಎಲ್ಲ ನಾಲ್ವರು ಆರೋಪಿಗಳಿಂದ ಮೊಬೈಲ್‌ಗಳನ್ನು ಪಡೆದುಕೊಂಡಿದ್ದ ಲಲಿತ್, ಬಳಿಕ ಸಂಸತ್ತಿನ ಹೊರಗೆ ನೀಲಂ ಮತ್ತು ಅಮೋಲ್ ಸ್ಮೋಕ್ ಕ್ಯಾನ್ ಸಿಡಿಸಿದ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಪರಾರಿಯಾಗಿದ್ದ.
ತಾನು ಸೆರೆ ಹಿಡಿದ ವಿಡಿಯೋವನ್ನು ಕೋಲ್ಕತ್ತಾದಲ್ಲಿನ ಎನ್‌ಜಿಒ ಸಂಸ್ಥಾಪಕ ನೀಲಾಕ್ಷ್ ಎಂಬಾತನ ಮೊಬೈಲ್‌ಗೆ ಕಳುಹಿಸಿ, ಇದನ್ನು ಸುರಕ್ಷಿತವಾಗಿ ಇಡು ಎಂಬ ಸಂದೇಶ ರವಾನಿಸಿದ್ದ ಎಂಬ ವಿಷಯವೂ ಬೆಳಕಿಗೆ ಬಂದಿತ್ತು.
ಇದನ್ನು ಓದಿ: ಮೊದಲು ಗ್ಯಾಲರಿಯಿಂದ ಬಿದ್ದರು ಎಂದು ಭಾವಿಸಿದ್ದೆ; ಆಮೇಲೆ ಉದ್ದೇಶಪೂರ್ವಕ ಕುಕೃತ್ಯ ಎಂದು ಗೊತ್ತಾಯ್ತು: ಕಾರ್ತಿ ಚಿದಂಬರಂ
ಇದನ್ನು ಓದಿ: ಮಹುವಾ ರೀತಿ ಪ್ರತಾಪ್ ಸಿಂಹ ವಜಾಕ್ಕೆ ಆಗ್ರಹ: ಇಂದು ವಿಪಕ್ಷಗಳ ತುರ್ತು ಸಭೆ; ರಾಷ್ಟ್ರಪತಿ ಮುರ್ಮು ಭೇಟಿ
ಸಂಸತ್ ಭದ್ರತಾ ಲೋಪ: ಸ್ಮೋಕ್ ಕ್ಯಾನ್ ಎಂದರೇನು? ಸಂಸತ್ತಿನ ವೀಕ್ಷಕರ ಪಾಸ್ ಪಡೆವ ಪ್ರಕ್ರಿಯೆ ಹೇಗಿದೆ ನೋಡಿ..