ಸರ್‌, ಮೇಡಂ ಪದ ನಿಷೇಧ : ಸಮಾನತೆಗೆ ಒತ್ತು

By Kannadaprabha NewsFirst Published Sep 3, 2021, 7:32 AM IST
Highlights
  • ಜನಪ್ರತಿನಿಧಿಗಳನ್ನು ‘ಸರ್‌’ ಅಥವಾ ‘ಮೇಡಂ’ ಎಂದು ಕರೆಯುವ ಅಗತ್ಯವಿಲ್ಲ
  • ಅವರ ಹೆಸರು ಅಥವಾ ಹುದ್ದೆಯ ಪದನಾಮದಿಂದ ಕರೆಯಬೇಕು

ಪಾಲಕ್ಕಾಡ್‌ (ಸೆ.03): ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಮತ್ತೂರ್‌ ಗ್ರಾಮ ಪಂಚಾಯಿತಿಗೆ ತೆರಳುವ ಗ್ರಾಮಸ್ಥರು ಅಥವಾ ಯೋಜನೆಗಳ ಫಲಾನುಭವಿಗಳು ಅಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ‘ಸರ್‌’ ಅಥವಾ ‘ಮೇಡಂ’ ಎಂದು ಕರೆಯುವ ಅಗತ್ಯವಿಲ್ಲ. 

ಅವರ ಹೆಸರು ಅಥವಾ ಹುದ್ದೆಯ ಪದನಾಮದಿಂದ ಕರೆಯಬೇಕು ಎಂಬ ನೂತನ ನಿಯಮ ಜಾರಿ ಮಾಡಲಾಗಿದೆ. ಮಂಗಳವಾರ ಪಂಚಾಯಿತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಸದಸ್ಯರೆಲ್ಲರೂ ಅವಿರೋಧವಾಗಿ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದಾರೆ. 

ಕೊರೋನಾ ಏರಿಕೆ; ಕೇಂದ್ರದಿಂದ ಕೇರಳಕ್ಕೆ ಖಡಕ್ ಎಚ್ಚರಿಕೆ!

ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯ ವೃದ್ಧಿಸಲು ವಸಹಾತುಶಾಹಿ ವ್ಯವಸ್ಥೆಯಲ್ಲಿ ‘ಗೌರವ’ವದ ಹೆಸರಲ್ಲಿ ಬಳಸುತ್ತಿದ್ದ ಈ ಪದ ಬಳಕೆಯನ್ನು ನಿಷೇಧಿಸಲಾಗಿದೆ. ಈ ಮೂಲಕ ಇಂಥ ಪದಗಳನ್ನು ನಿಷೇಧ ಮಾಡಿದ ದೇಶದ ಮೊದಲ ಗ್ರಾಮ ಪಂಚಾಯಿತಿ ಎಂಬ ಖ್ಯಾತಿ ಪಡೆದಿದೆ.

click me!