ಒಂದೇ ದಿನದಲ್ಲಿ 47000 + ಕೋವಿಡ್ ಕೇಸ್‌ : 2 ತಿಂಗಳ ಗರಿಷ್ಠ

By Kannadaprabha News  |  First Published Sep 3, 2021, 7:05 AM IST
  •  24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 47,092 ಕೊರೋನಾ ಪ್ರಕರಣಗಳು ದೃಢಪಟ್ಟಿವೆ
  •  ಕಳೆದ ಎರಡು ತಿಂಗಳಿನಲ್ಲಿ ದಾಖಲಾದ ಏಕದಿನದ ಗರಿಷ್ಠ ಸಂಖ್ಯೆ

ನವದೆಹಲಿ (ಆ.03): ಮೂರನೇ ಅಲೆಯ ಭೀತಿಯ ನಡುವೆಯೇ ಗುರುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 47,092 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ ಎರಡು ತಿಂಗಳಿನಲ್ಲಿ ದಾಖಲಾದ ಏಕದಿನದ ಗರಿಷ್ಠ ಸಂಖ್ಯೆಯಾಗಿದೆ. ಮತ್ತೊಂದೆಡೆ, ಏನೇ ಮಾಡಿದರೂ ಸೋಂಕು ನಿಯಂತ್ರಣಕ್ಕೆ ಬರದ ಕೇರಳದಲ್ಲಿ ಗುರುವಾರ 32097 ಕೇಸುಗಳು ಪತ್ತೆಯಾಗಿವೆ. ಇದು ದೇಶದಲ್ಲಿ ಮೂರನೇ ಅಲೆಗೆ ಮುನ್ನುಡಿಯಾಗಿರಬಹುದು ಎಂಬ ಆತಂಕ ಮೂಡಿದೆ.

ಈ ನಡುವೆ ಹಬ್ಬದ ಋುತುಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರ, ಜನರು ಸಾಮೂಹಿಕವಾಗಿ ಗುಂಪುಗೂಡುವುದಕ್ಕೆ ರಾಜ್ಯ ಸರ್ಕಾರಗಳು ಅವಕಾಶ ನೀಡಬಾರದು. ಒಂದು ವೇಳೆ ಅನಿವಾರ್ಯ ಎಂದಾದಲ್ಲಿ ಎರಡೂ ಲಸಿಕೆ ಪಡೆದುಕೊಂಡವರಿಗೆ ಮಾತ್ರವೇ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡಬೇಕು. ಜನರು ಲಸಿಕೆ ಪಡೆದುಕೊಳ್ಳುವುದರ ಜೊತೆಗೆ ಕೋವಿಡ್‌ ನಡವಳಿಕೆ ಪಾಲಿಸಬೇಕು. ಜನರು ತಮ್ಮ ಮನೆಗಳಲ್ಲಿಯೇ ಹಬ್ಬವನ್ನು ಅಚರಿಸಬೇಕು ಎಂದು ಮನವಿ ಮಾಡಿದೆ.

Tap to resize

Latest Videos

4 ಜಿಲ್ಲೆಗಳಲ್ಲಿ ಶೂನ್ಯ ಕೇಸ್: ಇಲ್ಲಿದೆ ಸೆ.1ರ ಕರ್ನಾಟಕದ ಕೊರೋನಾ ಅಂಕಿ-ಸಂಖ್ಯೆ

2 ತಿಂಗಳ ಗರಿಷ್ಠ: ಗುರುವಾರದ 47,092 ಪ್ರಕರಣ ಕಳೆದ ಎರಡು ತಿಂಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ಜು.1ರಂದು ದೇಶದಲ್ಲಿ 48,786 ಕೇಸ್‌ ಪತ್ತೆಯಾಗಿದ್ದು, ಈ ಹಿಂದಿನ ಗರಿಷ್ಠವಾಗಿತ್ತು. ಇದರೊಂದಿಗೆ ಒಟ್ಟು ಸೋಂಕಿತರ ಪ್ರಮಾಣ 3.38 ಕೋಟಿಗೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 509 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 4.39 ಲಕ್ಷಕ್ಕೆ ತಲುಪಿದೆ. ಸೋಂಕು ಏಕಾಏಕಿ ಏರಿಕೆಯಾದ ಹಿನ್ನೆಲೆಯಲ್ಲಿ ಸಕ್ರಿಯ ಸೋಂಕಿನ ಪ್ರಮಾಣ 3,89,583ಕ್ಕೆ ಹೆಚ್ಚಿದೆ. ಚೇತರಿಕೆ ಪ್ರಮಾಣ ಶೇ.97.48ರಷ್ಟಿದೆ.

ಕೇರಳದಲ್ಲಿ ಇಳಿಯದ ಕೇಸು:  ಈ ನಡುವೆ ಕೇರಳದಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟುಏರಿಕೆಯಾಗಿದೆ. ರಾಜ್ಯದಲ್ಲಿ ಗುರುವಾರ ಮತ್ತೆ 32,097 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 188 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 41.22 ಲಕ್ಷಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 21,149ಕ್ಕೆ ತಲುಪಿದೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿತರ ಪ್ರಮಾಣ 2.40 ಲಕ್ಷಕ್ಕೆ ಹೆಚ್ಚಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ.18.41ಕ್ಕೆ ಏರಿಕೆಯಾಗಿದೆ.

click me!