ಗುವಾಹಟಿ (ಸೆ.03): ಕೋವಿಡ್ 19ನಿಂದಾಗಿ ಸಾವಿಗೀಡಾದ ಬಡ ಕುಟುಂಬದವರ ರಕ್ತ ಸಂಬಂಧಿಗಳಿಗೆ 1 ಲಕ್ಷ ರು. ನೀಡಲು ಅಸ್ಸಾಂ ಸರ್ಕಾರ ಬುಧವಾರ ನಿರ್ಧರಿಸಿದೆ.
ಈ ಪರಿಹಾರ ಧನ ಪಡೆಯುವವರು ಸರ್ಕಾರಿ ಉದ್ಯೋಗಿಗಳಾಗಿರಬಾರದು ಹಾಗೂ ಸರ್ಕಾರ ನೀಡುವ ಯಾವುದೇ ವಿಶ್ರಾಂತಿ ವೇತನ ಪಡೆಯುತ್ತಿರಬಾರದು ಎಂಬ ಷರತ್ತು ವಿಧಿಸಲಾಗಿದೆ.
ಕೊರೋನಾ ಏರಿಕೆ; ಕೇಂದ್ರದಿಂದ ಕೇರಳಕ್ಕೆ ಖಡಕ್ ಎಚ್ಚರಿಕೆ!
‘ ಪ್ರಾರ್ಥನಾ ಯೋಜನೆಯಡಿಯಲ್ಲಿ 6 ಸಾವಿರ ಫಲಾನಿಭವಿಗಳನ್ನು ಗುರುತಿಸಲಾಗಿದೆ. ಇವರೆಲ್ಲರಿಗೂ ಗಾಂಧಿ ಜಯಂತಿ ದಿನದಂದು 1 ಲಕ್ಷ ರು. ಪರಿಹಾರಧನ ವಿತರಿಸಲಾಗುತ್ತದೆ. ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ, ಗಂಡನನ್ನು ಕಳೆದುಕೊಂಂಡ ಮಹಿಳೆಯರಿಗೆ ಪರಿಹಾರ ನೀಡಲು ಈಗಾಗಲೆ ಸರ್ಕಾರ 2 ಯೋಜನೆಗಳನ್ನು ಜಾರಿಗೊಳಿಸಿದೆ.
ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಹೆಸರಿನಲ್ಲಿ 7 ಲಕ್ಷ ರು.ಗಳ ನಿಶ್ಚಿತ ಠೇವಣಿ ಇಡಲಾಗುತ್ತದೆ ಎಂದು ಸಚಿವ ಪಿಯೂಶ್ ಹಜಾರಿಕ ಹೇಳಿದ್ದಾರೆ.