ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರೋದು ಕಾಮನ್. ಆದರೆ ಕಣ್ಣಲ್ಲಿ ನೀರು ಬರದೇ ಈರುಳ್ಳಿ ಕತ್ತರಿಸೋದು ಹೇಗೆ ಇಲ್ಲಿದೆ ಟ್ರಿಕ್ಸ್
ಬೆಂಗಳೂರು (ಏ.09): ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಸರ್ವೇ ಸಾಮಾನ್ಯ. ಆದರೆ, ಇದುವರೆಗೂ ಯಾರೂ ಬಗೆಹರಿಸಲಾಗದ ಈ ಸಮಸ್ಯೆಗೆ ಟಿಕ್‌ಟಾಕ್ ಬಳಕೆದಾರನೊಬ್ಬ ಪರಿಹಾರ ಕಂಡುಹಿಡಿದಿದ್ದಾನೆ.
ಮ್ಯಾಕ್ಸ್ ಮೆಕ್‌ಕಾನ್ ಎಂಬಾತ ತರಕಾರಿ ಹೆಚ್ಚುವ ಮಣೆಯ ಪಕ್ಕ ಒದ್ದೆ ಬಟ್ಟೆಯನ್ನು ಇಟ್ಟು ಈರುಳ್ಳಿ ಕಟ್ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
ಈರುಳ್ಳಿ ಬೆಲೆ ಭಾರೀ ಇಳಿಕೆ : ಗ್ರಾಹಕರಲ್ಲಿ ಸಂತಸ
ಈತನ ಪ್ರಕಾರ, ಈರುಳ್ಳಿಯಲ್ಲಿರುವ ಆಮ್ಲ ನೀರಿಗೆ ಆಕರ್ಷಿತವಾಗುತ್ತದೆ. ಹೀಗಾಗಿ ಮಣೆಯ ಮೇಲೆ ಒದ್ದೆ ಬಟ್ಟೆಯನ್ನು ಇಟ್ಟು ಈರುಳ್ಳಿ ಕತ್ತರಿಸಿದರೆ ಕಣ್ಣಲ್ಲಿ ನೀರುಬರುವುದಿಲ್ಲ ಎಂಬುದು ಆತನ ವಾದ.
ಈರುಳ್ಳಿಯನ್ನು ಕಣ್ಣಲ್ಲಿ ನೀರು ಬಾರದೇ ಈ ರೀತಿ ಟ್ರಿಕ್ ಬಳಸಿ ಬೇಗನೇ ಕಟ್ ಮಾಡಬಹುದಾಗಿದೆ ಎಂದು ಈತ ಹೇಳಿದ್ದಾನೆ.