ವಿವಾದಾತ್ಮಕ ಗೋವಾ ಕೆಫೆಯಲ್ಲಿ ಸಚಿವೆ ಸ್ಮೃತಿ ಕುಟುಂಬದ ಹೂಡಿಕೆ, ಮಾಧ್ಯಮ ವರದಿಯಿಂದ ತಲ್ಲಣ!

Published : Aug 03, 2022, 10:58 AM ISTUpdated : Aug 03, 2022, 11:00 AM IST
 ವಿವಾದಾತ್ಮಕ ಗೋವಾ ಕೆಫೆಯಲ್ಲಿ ಸಚಿವೆ ಸ್ಮೃತಿ ಕುಟುಂಬದ ಹೂಡಿಕೆ, ಮಾಧ್ಯಮ ವರದಿಯಿಂದ ತಲ್ಲಣ!

ಸಾರಾಂಶ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಗೋವಾದಲ್ಲಿ ಅಕ್ರಮ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಅನ್ನೋ ಕಾಂಗ್ರೆಸ್ ಆರೋಪ ಭಾರಿ ವಿವಾದಕ್ಕೆ ಕಾರಣಾಗಿತ್ತು. ಮಾನನಷ್ಟ ಮೊಕದ್ದಮೆ, ಹೈಕೋರ್ಟ್‌ನಿಂದ ಕಾಂಗ್ರೆಸ್‌ ನಾಯಕರಿಕೆ ಸೂಚನೆಯ ನೀಡಲಾಗಿದೆ.  ಕೆಫೆ ಕುರಿತ ವರದಿಯೊಂದು ಬಹಿರಂಗಗೊಂಡಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಇದೀಗ ಕಾಂಗ್ರೆಸ್ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. 

ನವದೆಹಲಿ(ಆ.3): ಗೋವಾದಲ್ಲಿರುವ ಸಿಲ್ಲಿ ಸೋಲ್ ಕೆಫೆ ಬಾರ್ ಅಂಡ್ ರೆಸ್ಟೋರೆಂಟ್ ಕಳೆದ ಕೆಲದಿನಗಳಿಂದ ಭಾರಿ ವಿವಾದಕ್ಕೆ ಕಾರಣಾವಾಗಿದೆ. ವಿವಾದಕ್ಕೂ ಹೆಚ್ಚಾಗಿ ರಾಜಕೀಯ ಕಚ್ಚಾಟಕ್ಕೆ ವೇದಿಕೆಯಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಜೋಯಿಶ್ ಇರಾನಿ ಗೋವಾದಲ್ಲಿ ಅಕ್ರಮ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಈ ಆರೋಪ ಅಲ್ಲಗೆಳೆದ ಸ್ಮೃತಿ ಇರಾನಿ ಕೋರ್ಟ್ ಮೆಟ್ಟಿಲೇರಿದ್ದಾರೆ.  ಇದರ ನಡುವೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮತ್ತೊಂದು ರಾಜಕೀಯ ಹೋರಾಟಕ್ಕೆ ವೇದಿಕೆಯಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ ಸ್ಮೃತಿ ಇರಾನಿ ಕುಟುಂಬದ ಮೂವರು ಸದಸ್ಯರ ಹೂಡಿಕೆ ಗೋವಾ ಸಿಲ್ಲಿ ಸೋಲ್ ಕೆಫೆಯೊಂದಿಗೆ ಸಂಬಂಧ ಹೊಂದಿದೆ ಎಂದಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತೆ ಸ್ಮೃತಿ ಹಾಗೂ ಬಿಜೆಪಿ ವಿರುದ್ದ ಆರೋಪ ಮಾಡಿದೆ. ವರದಿ ಪ್ರಕಾರ ಸಚಿವೆ ಸ್ಮೃತಿ ಇರಾನಿ, ಪುತ್ರ ಜೋಹ್ರ್ ಇರಾನಿ, ಪುತ್ರಿ ಜೋಯಿಶ್ ಇರಾನಿ, ಶಾನೆಲ್ಲಾ ಇರಾನಿ ಹಾಗೂ ಪತಿ ಝಬಿನ್ ಇರಾನಿ ಗೋವಾದಲ್ಲಿನ ಉಗ್ರಯ ಮರ್ಕಂಟೈಲ್ ಪ್ರವೈಟ್ ಲಿಮಿಟೆಡ್ ಮತ್ತು ಉಗ್ರಯ ಆಗ್ರೋ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಎರಡು ಸಂಸ್ಥೆಗಳನ್ನು ಹೊಂದಿದ್ದಾರೆ. ಈ ಎರಡು ಕಂಪನಿಗಳು ಎಯ್ಟಾಲ್ ಫುಡ್ ಅಂಡ್ ಬಿವರೇಜಸ್ ಅನ್ನೋ ಕಂಪನಿಯಲ್ಲಿ ಹೂಡಿಕೆ ಮಾಡಿದೆ. ಆದರೆ ಈ ಮೂರು ಕಂಪನಿಗಳಲ್ಲಿ ಸ್ಮೃತಿ ಇರಾನಿ ಯಾವುದೇ ಹೂಡಿಕೆ ಮಾಡಿಲ್ಲ. ಇರಾನಿ ಕುಟುಂಬಸ್ಥರ ಒಡೆತನದಲ್ಲಿ ಈ ಮೂರು ಕಂಪನಿಗಳಿವೆ. 

ಸರ್ಕಾರದ ಸರಕು ಸೇವಾ ತೆರಿಗೆ ಗುರಿತಿನ ಸಂಖ್ಯೆ ಅಂದರೆ GSTIN ದಾಖಲೆಗಳಲ್ಲಿ ಎಯ್ಟಾಲ್ ಫುಡ್ ಅಂಡ್ ಬಿವರೇಜಸ್ ಕಂಪನಿ ವಿಳಾಸ H No 452, ನೆಲ ಮಹಡಿ, ಬೌಟಾ ವಡ್ಡೋ, ಅಸ್ಸಾಗೋವ್, ಉತ್ತರ ಗೋವಾ ಅನ್ನೋ ವಿಳಾಸದಲ್ಲಿದೆ. ಈ ವಿಳಾಸಕ್ಕೂ ವಿವಾದಕ್ಕೂ ಏನ್ ಸಂಬಂಧಾ ಅಂತಾ ಗೊಂದಲ ಪಡಬೇಕಿಲ್ಲ. ಇಲ್ಲೆ ಸಣ್ಣ ಸಾಮ್ಯತೆ ಇದೆ. ಸ್ಮೃತಿ ಇರಾನಿ ಕುಟಂಬಸ್ಥರ ಒಡೆತನದಲ್ಲಿರುವ ಎಯ್ಟಾಲ್ ಫುಡ್ ಅಂಡ್ ಬಿವರೇಜಸ್ ಕಂಪನಿ ವಿಳಾಸ ಹಾಗೂ ಸದ್ಯ ವಿವಾದ ಸೃಷ್ಟಿಯಾಗಿರುವ ಸಿಲ್ಲಿ ಸೋಲ್ ಕೆಫೆ ಬಾರ್ ಅಂಡ್ ರೆಸ್ಟೋರೆಂಟ್ ವಿಳಾಸ ಎರಡೂ ಒಂದೇ ಆಗಿದೆ. 

ಸ್ಮೃತಿ ಇರಾನಿ Defamation Case: ಟ್ವೀಟ್‌ ಡಿಲೀಟ್‌ ಮಾಡಿ, 3 ಕಾಂಗ್ರೆಸ್‌ ನಾಯಕರಿಗೆ ಕೋರ್ಟ್‌ ಸೂಚನೆ!

ಎಯ್ಟಾಲ್ ಸಂಸ್ಥೆಯಲ್ಲಿ ಉಗ್ರಯ ಮರ್ಕಂಟೈಲ್ ಪ್ರವೈಟ್ ಲಿಮಿಟೆಡ್ ಶೇಕಡಾ 50 ರಷ್ಟು  ಮತ್ತು ಉಗ್ರಯ ಆಗ್ರೋ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಶೇಕಡಾ 25 ರಷ್ಟು ಹೂಡಿಕೆ ಮಾಡಿದೆ. ಸಿಲ್ಲಿ ಸೋಲ್ಸ್ ಗೋವಾ ಕೆಫೆ ಅಂಡ್ ಬಾರ್ ಲೈಸೆನ್ಸ್ ಮುಂಬೈ ಮೂಲದ ಆ್ಯಂಟೋನಿ ಡಿ ಗಾಮ ಹೆಸರಲ್ಲಿದೆ. 2021ರ ಮೇ ತಿಂಗಳಲ್ಲಿ ಆ್ಯಂಟೋನಿ ಡಿ ಗಾಮಾ ಮದ್ಯ ಹಾಗೂ ಬಾರ್ ಲೈಸೆನ್ಸ್ ನವೀಕರಿಸಿದ್ದಾರೆ ಎಂದು ಗೋವಾ ಅಬಕಾರಿ ಇಲಾಖೆ ಸ್ಪಷ್ಟಪಡಿಸಿದೆ.

 

 

ಎಯ್ಟಾಲ್ ಕಂಪನಿ ವಿಳಾಸ ಹಾಗೂ ಸಿಲ್ಲಿ ಸೋಲ್ಸ್ ಗೋವಾ ಬಾರ್ ವಿಳಾಸ ಎರಡೂ ಒಂದೇ ಆಗಿರುವುದು ಇದೀಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇಷ್ಟೇ ಅಲ್ಲ ಇದೇ ಸಿಲ್ಲಿ ಸೋಲ್ಸ್ ಗೋವಾ ಕೆಫೆಯಲ್ಲಿ ಸ್ಮೃತಿ ಇರಾನಿ ಪುತ್ರಿ ಜೋಯಿಶ್ ಇರಾನಿ ಚೆಫ್ ಆಗಿ ತರಬೇತಿ ಪಡೆದಿದ್ದಾರೆ ಎಂದು ನ್ಯಾಯಾಲಯದಲ್ಲಿ ಸ್ಮೃತಿ ಇರಾನಿ ಪರ ವಕೀಲರು ಹೇಳಿದ್ದರು. ಇದರ ಹೊರತಾಗಿ ಯಾವುದೇ ಸಂಬಂಧ ಸಿಲ್ಲಿ ಸೋಲ್ಸ್ ಕೆಫಿ ಜೊತೆಗಿಲ್ಲ ಎಂದು ವಕೀಲರು ದೆಹಲಿ ಹೈಕೋರ್ಟ್‌ಗೆ ಹೇಳಿದ್ದರು. 

ಸೋನಿಯಾ, ರಾಹುಲ್‌ ವಿರುದ್ಧ ಮಾತನಾಡಿದ್ದಕ್ಕೆ ಮಗಳು ಟಾರ್ಗೆಟ್: ಸ್ಮೃತಿ ಇರಾನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿಲ್ಲಿ ಸ್ಫೋಟ ನಂಟಿನ ಅಲ್‌ ಫಲಾ ವಿವಿಯ ₹140 ಕೋಟಿ ಆಸ್ತಿ ಜಪ್ತಿ
ಶ್ರೀಮಂತ ಪಾಲಿಕೆ ಮೇಲೆ ಮೊದಲ ಬಾರಿ ಕೇಸರಿ ಪತಾಕೆ ಬಿಜೆಪಿ ಮಹಾ ಧುರಂಧರ್‌!