ಕೇರಳಕ್ಕೆ ಹೋಲಿಸಿದರೆ ಕರ್ನಾಟಕ ಸುರಕ್ಷಿತ: ಧರ್ಮ ಪ್ರಚಾರಕ ಭದ್ರಾನಂದ ಶ್ರೀ

Published : Aug 03, 2022, 10:54 AM IST
ಕೇರಳಕ್ಕೆ ಹೋಲಿಸಿದರೆ ಕರ್ನಾಟಕ ಸುರಕ್ಷಿತ: ಧರ್ಮ ಪ್ರಚಾರಕ ಭದ್ರಾನಂದ ಶ್ರೀ

ಸಾರಾಂಶ

ಕೇರಳ, ಬಂಗಾಳಕ್ಕೆ ಹೋಲಿಸಿದರೆ ಕಾನೂನು ಸುವ್ಯವಸ್ಥೆ ಉತ್ತಮ ಕರ್ನಾಟಕದಲ್ಲಿ ಉತ್ತಮವಾಗಿದೆ. ಕೇರಳಕ್ಕಿಂತ ಕರ್ನಾಟಕ ಸುರಕ್ಷಿತ ಎಂದು  ಕೇರಳದ ಸನಾತನ ಧರ್ಮ ಪ್ರಚಾರಕ  ಭದ್ರಾನಂದ ಹೇಳಿಕೆ ನೀಡಿದ್ದಾರೆ.

 ಬೆಂಗಳೂರು (ಆ.3): ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಹೆದರಿಸುವುದು ಸಾಮಾನ್ಯ. ಆ ರಾಜ್ಯಗಳಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆ ನಡೆಯುತ್ತಿರುತ್ತವೆ. ಕೇರಳದಲ್ಲಂತೂ ಹಿಂದೂಗಳೇ ಸುರಕ್ಷಿತರಿಲ್ಲ. ಈ ಎರಡು ರಾಜ್ಯಗಳ ಪರಿಸ್ಥಿತಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಕೇರಳದ ಸನಾತನ ಧರ್ಮ ಪ್ರಚಾರಕ ಭದ್ರಾನಂದ ಸ್ವಾಮೀಜಿ ಹೇಳಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ನಿರಂತರವಾಗಿ ಕೇರಳದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಹಿಂದೂಗಳ ಮೇಲೆ ದೌರ್ಜನ್ಯ, ಕಗ್ಗೊಲೆ ನಡೆಯುತ್ತಿವೆ. ಸುಮಾರು 167ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗಿದೆ. ಆದರೆ ಅಲ್ಲಿನ ಪಿಣರಾಯಿ ವಿಜಯನ್‌ ಸರ್ಕಾರ ಹಿಂದೂಗಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಮುಸ್ಲಿಂ ಮೂಲಭೂತವಾದಿ ಸಂಘಟನೆಗಳಿಗೆ ಬೆನ್ನೆಲುಬಾಗಿ ನಿಂತಂತೆ ವರ್ತಿಸುತ್ತಿದೆ. ಅದೇ ರೀತಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ದೌರ್ಜನ್ಯ ಹತ್ಯೆ ನಡೆದಾಗಲೂ ಸೂಕ್ತ ಕ್ರಮ ಕೈಗೊಳ್ಳದ ಅಲ್ಲಿನ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳಿಗೆ ಪರೋಕ್ಷವಾಗಿ ಕೃತ್ಯ ನಡೆಸಲು ಕುಮ್ಮಕ್ಕು ನೀಡುತ್ತಿರುವ ಉದಾಹರಣೆಗಳಿವೆ ಎಂದು ಆಪಾದಿಸಿದರು.

ಮಂಗಳೂರು ಹತ್ಯೆಗಳು ವಿಷಾದನೀಯ: ಮಂಗಳೂರಿನಲ್ಲಿ ಪ್ರವೀಣ್‌ ನೆಟ್ಯಾರು ಹತ್ಯೆ ಬಳಿಕ ಫಾಜಿಲ್‌ ಕೊಲೆ ನಡೆದದ್ದು ದುರದೃಷ್ಟಕರವಾಗಿದೆ. ಮಂಗಳೂರಿನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡಲಾಗಿದೆ. ಆದರೆ ಪ್ರವೀಣ್‌ ಹತ್ಯೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಹೊಣೆಗಾರರನ್ನಾಗಿ ಮಾಡಿರುವುದು ವಿಷಾದನೀಯ ಎಂದರು.

ಕಾರ್ಯಕರ್ತರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ, ಬಿಜೆಪಿ ಸರ್ಕಾರದ ವಿರುದ್ಧ ಸೂಲಿಬೆಲೆ ಆಕ್ರೋಶ

ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ನಡೆಯುತ್ತಿದೆ. ಇಂತಹ ಘಟನೆಗಳನ್ನು ಬೊಮ್ಮಾಯಿ ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದಾರೆ. ಹಿಜಾಬ್‌, ಹಲಾಲ್‌, ಆಜಾನ್‌ ನಿರ್ಣಯಗಳನ್ನು ರಾಜ್ಯದಲ್ಲಿ ಶಾಂತ ರೀತಿಯಿಂದ ಅನುಷ್ಠಾನಗೊಳಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

ಹಾವೇರಿ: ಹಿಂದೂ ಕಾರ್ಯಕರ್ತರ ಹತ್ಯೆಗೆ ರಾಣೆಬೆನ್ನೂರಲ್ಲಿ ಭುಗಿಲೆದ್ದ ಆಕ್ರೋಶ

ಸಂಯಮ ಕಾಪಾಡಿ: ಕರ್ನಾಟಕದಲ್ಲಿನ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ಬಿಜೆಪಿಯ ಯುವ ಕಾರ್ಯಕರ್ತರು ಭಾವೋದ್ವೇಗದಿಂದ ಪ್ರತಿಕ್ರಿಯಿಸುವುದು ವಿಷಾದನೀಯ. ನಾವೆಲ್ಲ ಒಂದು ಕುಟುಂಬದ ಸನಾತನ ಧರ್ಮದ ಕುಟುಂಬ ಸದಸ್ಯರಾಗಿದ್ದು, ನಮ್ಮ ನಡುವಿನ ವೈಯಕ್ತಿಕ, ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಇಂತಹ ಸಂದರ್ಭದಲ್ಲಿ ಹೊರ ಹಾಕುವುದು ಸೂಕ್ತವಲ್ಲ. ಎಲ್ಲರೂ ಸಂಯಮದಿಂದ ವರ್ತಿಸಬೇಕಾಗಿದೆ. ಸರ್ಕಾರಕ್ಕೆ ನಮ್ಮೆಲ್ಲರ ಬೆಂಬಲ ಅಗತ್ಯ ಎಂದು ಭದ್ರಾನಂದ ಸ್ವಾಮೀಜಿ ಹೇಳಿದರು.

 

 Mohmed Fazil Murder Case: 3 ರೌಡಿಶೀಟರ್‌ ಸೇರಿ 6 ಸೆರೆ - ಎಲ್ಲ ಬಂಧಿತರಿಗೆ ಹಿಂದೂ ಸಂಘಟನೆಗಳ ನಂಟು!

ನಮ್ಮ ಕುಟುಂಬ ಒಂದು ದೇಹ ಇದ್ದಂತೆ, ಭಿನ್ನಾಭಿಪ್ರಾಯಗಳ ಮೂಲಕ ನಮ್ಮ ದೇಹದ ಅಂಗಗಳನ್ನು ನಾವೇ ಕತ್ತರಿಸಿಕೊಂಡರೆ ನಮ್ಮ ದೇಹ ವಿಕಲಾಂಗವಾಗುತ್ತದೆ. ಕೊನೆಗೆ ದೇಹವೇ ಇಲ್ಲದಂತಾಗುತ್ತದೆ. ಹಾಗಾಗಿ ಧರ್ಮೋ ರಕ್ಷತಿ ರಕ್ಷಿತಃ ಎಂಬ ತತ್ವವನ್ನು ಎಲ್ಲರೂ ಪಾಲಿಸಬೇಕು ಎಂದು ಭದ್ರಾನಂದ ಅವರು ಮನವಿ ಮಾಡಿಕೊಂಡರು.

ಕೇರಳದಲ್ಲಿ ಹಿಂದೂ ಕಾರ‍್ಯಕರ್ತರಿಗೆ ರಕ್ಷಣೆ ನೀಡುವಲ್ಲಿ ಪಿಣರಾಯಿ ಸರ್ಕಾರ ವಿಫಲವಾಗಿದೆ. ಅದು ಮುಸ್ಲಿಂ ಸಂಘಟನೆಗಳಿಗೆ ಬೆನ್ನೆಲುಬಾಗಿ ನಿಂತಿದೆ. ಆದರೆ ಕರ್ನಾಟಕದಲ್ಲಿ ಇಂತಹ ಘಟನೆಗಳನ್ನು ಬೊಮ್ಮಾಯಿ ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದಾರೆ.

- ಭದ್ರಾನಂದ ಸ್ವಾಮೀಜಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಹೆಜ್ಜೆ ಹಾಕಲಿದೆ ಮುಧೋಳ ನಾಯಿ? ಪ್ರಾಣಿಗಳ ಪರೇಡ್
India Latest News Live: ಜನವರಿಯಿಂದ ಬದಲಾಗಲಿದೆ ನಿಮ್ಮ ದೈನಂದಿನ ಬದುಕು - ಹೊಸ ನಿಯಮ, ಮಹತ್ವದ ಬದಲಾವಣೆ