ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ?  ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!

ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!

Published : Jul 09, 2026, 04:53 PM IST
ಅಮರನಾಥ ಯಾತ್ರೆ ಆರಂಭಕ್ಕೂ ಮುನ್ನವೇ ಪವಿತ್ರ ಹಿಮಲಿಂಗ ಕರಗಿ ಕಣ್ಮರೆಯಾಗಿದೆ. ಇದು ಕೇವಲ ಶಿವಲಿಂಗದ ಕಥೆಯಲ್ಲ, ಬದಲಾಗಿ ಜಾಗತಿಕ ತಾಪಮಾನದಿಂದ ಹಿಮಾಲಯವು ಎದುರಿಸುತ್ತಿರುವ ದೊಡ್ಡ ಅಪಾಯದ ಎಚ್ಚರಿಕೆಯಾಗಿದೆ.

ಮೊನ್ ಮೊನ್ನೆಯಷ್ಟೇ ಶಿವಭಕ್ತರು ಖುಷಿಖುಷಿಯಿಂದ ಹಿಮಾಲಯದ ಕಡೆ ಯಾತ್ರೆ ಶುರುಮಾಡಿದ್ರು.. ಲಕ್ಷಾಂತರ ಜನ, ತಮ್ಮ ಜೀವನದ ಅಪೂರ್ವ ಕ್ಷಣ ಸಾರ್ಥಕಗೊಳಿಸಿಕೊಳ್ಳೋಕೆ, ಹೊರಟು ನಿಂತ್ರು.. ಆದ್ರೆ ಅವರು ಆ ಹಿಮಪರ್ವತದ ನಡುವೆ ಅದೇನು ನೋಡಬೇಕು ಅಂತ ಹೊರಟಿದ್ರೋ, ಅದು ಕಾಣಿಸಿಕೊಳ್ಳೋಕೇ ರೆಡಿ ಇಲ್ಲ.. ಹಾಗೆ ದರ್ಶನ ಕೊಡದೆ ಮೌನವಾಗಿದ್ದು ಅಮರನಾಥದಲ್ಲಿ ನೆಲೆನಿಂತ ಪರಮೇಶ್ವರನ ಹಿಮಲಿಂಗ.. ಹೌದು.. ನೀವು ಕೇಳಿಕೊಂಡಿದ್ದು ಸತ್ಯ.. ಆ ಅದ್ಭುತ ಗುಹೆಯೊಳಗೆ ಇರಬೇಕಿದ್ದ ಶಿವಲಿಂಗವೇ ಕಣ್ಮರೆಯಾಗಿದೆ.. ಅದಕ್ಕೆ ಕಾರಣ ಏನು? ಕಾರಣವಾಗಿದ್ದು ಯಾರು? ಪರಮೇಶ್ವರ ಕೊಟ್ಟ ಪ್ರಳಯದ ಸುಳಿವು ಎಂಥಾದ್ದು?

ಅಂಥಾ ದುರ್ದಿನಗಳು ಬಾರದೇ ಇರ್ಲಿ.. ಆದ್ರೆ ಅದಕ್ಕಿಂತಾ ಮುಖ್ಯವಾಗಿ, ಹಿಮಾಲಯ ಈಗ ಏನಾಗಿದೆ ಗೊತ್ತಾ? ನಮಗೆ ಕಣ್ಣಿಗೆ ಎದ್ದು ಕಾಣ್ತಾ ಇರೋದೇನೋ, ಅಮರನಾಥದ ಹಿಮಲಿಂಗದ ಕತೆ ಮಾತ್ರ.. ಆದ್ರೆ ಇದು ಅಷ್ಟಕ್ಕೆ ಮಾತ್ರವೇ ಸೀಮಿತವಾದ ಕತೆ ಅಲ್ಲ.

ಅಮರನಾಥದ ಗುಹೆಯ ಹೊರಗೆ ಭಯೋತ್ಪಾದನೆಯ ವಿರುದ್ಧ ಹೋರಾಡಲು ಲಕ್ಷಾಂತರ ಭದ್ರತಾ ಸಿಬ್ಬಂದಿಯನ್ನು ಇಟ್ಟಿದ್ದೇವೆ.. ಆದರೆ, ಗುಹೆಯ ಒಳಗಿನ ತಾಪಮಾನದ ವಿರುದ್ಧದ ಯುದ್ಧದಲ್ಲಿ ನಾವು ಸೋಲುತ್ತಿದ್ದೇವೆ ಅನ್ನೋದು ಕಹಿ ಸತ್ಯ.. ಅಂದ್ ಹಾಗೆ, ಈ ರೀತಿ ಅಮರನಾಥದ ಹಿಮಲಿಂಗ ಧಿಡೀರ್ ಅಂತ ಕರಗಿದ್ದು ಇದೇ ಮೊದಲೇನೂ ಅಲ್ಲ.. ಈ ಹಿಂದೆಯೂ ಇದೇ ಥರ ಆಗಿತ್ತು.

ಕಾಶ್ಮೀರದ ಆ ಮಂಜಿನ ಸೌಂದರ್ಯ ಇವತ್ತು ದೊಡ್ಡ ಅಪಾಯದಲ್ಲಿದೆ.. ಕೇವಲ ಶಿವಲಿಂಗ ಕರಗೋದನ್ನೇ ನೋಡಿ ಆತಂಕ ಪಡೋ ಬದಲು, ಹಿಮಾಲಯ ಇವತ್ತು ನಮಗೆ ಕೊಡ್ತಿರೋ ಎಚ್ಚರಿಕೆಯನ್ನ ಅರ್ಥ ಮಾಡ್ಕೊಳ್ಬೇಕಿದೆ..

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
Read more