
ನವದೆಹಲಿ(ಜು.02): ದೇಶದ ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಕಳೆದ ಕೆಲವು ದಶಕಗಳಲ್ಲಿ ಪಾವತಿಸಿದ ವರದಕ್ಷಿಣೆ ಗಣನೀಯ ಏರಿಕೆ ಕಂಡಿದೆ. 1960 ರಿಂದ ಗ್ರಾಮೀಣ ಭಾರತದಲ್ಲಿ 40,000 ವಿವಾಹಗಳ ಅಧ್ಯಯನದ ಆಧಾರದ ಮೇಲೆ ಇದು ತಿಳಿದುಬಂದಿದೆ.
ವಧುವಿನ ಕಡೆಯಿಂದ ಪಾವತಿಸುವ ವರದಕ್ಷಿಣೆ ಹೆಚ್ಚಳದ ವಿಚಾರಕ್ಕ ಬಂದಾಗ ಕೇರಳವು ಭಾರತದ ರಾಜ್ಯಗಳಲ್ಲಿ ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಿದೆ.
ದೆಹಲಿ ಮೂಲದ ಥಿಂಕ್-ಟ್ಯಾಂಕ್ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್‌ನ 2006 ರ ಗ್ರಾಮೀಣ ಆರ್ಥಿಕ ಮತ್ತು ಜನಸಂಖ್ಯಾ ಸಮೀಕ್ಷೆಯನ್ನು (ಆರ್‌ಇಡಿಎಸ್) ಬಳಸಿದೆ, ಇದು ದೇಶದ ಜನಸಂಖ್ಯೆಯ ಶೇಕಡಾ 96 ರಷ್ಟು 17 ಪ್ರಮುಖ ರಾಜ್ಯಗಳನ್ನು ಒಳಗೊಂಡಿದೆ.
ಗಂಡನ ಮನೆ ಕಾಟ ತಾಳಲಾರೆ, ಮೆಸೇಜ್ ಕಳಿಸಿ ನೇಣಿಗೆ ಶರಣಾದ ನವವಿವಾಹಿತೆ
ಕೇರಳ, ಅನೇಕ ಸಾಮಾಜಿಕ ಸೂಚಕಗಳನ್ನು ಉತ್ತಮವಾಗಿ ನಿರ್ವಹಿಸುವ ರಾಜ್ಯ, ವರದಕ್ಷಿಣೆ ವಿಷಯಕ್ಕೆ ಬಂದಾಗ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ.
ಕೇರಳವು 1970 ರ ದಶಕದಿಂದ ಸಂಪೂರ್ಣ ಮತ್ತು ನಿರಂತರ ವರದಕ್ಷಿಣೆ ಹಣದುಬ್ಬರವನ್ನು ತೋರಿಸುತ್ತದೆ.ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ವರದಕ್ಷಿಣೆ ಮೊತ್ತ ಹೊಂದಿದೆ. ಹರಿಯಾಣ, ಪಂಜಾಬ್ ಮತ್ತು ಗುಜರಾತ್‌ನಾದ್ಯಂತ ಇದೇ ರೀತಿಯ ಹಣದುಬ್ಬರ ಪ್ರವೃತ್ತಿ ಕಂಡುಬರುತ್ತದೆ.
ಹಾಸನ; ಒಂದೇ ತಿಂಗಳಿನಲ್ಲಿ ಅಕ್ಕ-ತಂಗಿ ಆತ್ಮಹತ್ಯೆ, ವರದಕ್ಷಿಣೆ ಕಿರುಕುಳ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ