
ಚೆನ್ನೈ(ಜು.02): ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ಲೆಕ್ಚರರ್ ಒಬ್ಬರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಾಕಿ ಮೈದಾನದ ಬಳಿ ಶವ ಕಂಡ ಬಳಿಕ ಸಂಸ್ಥೆಯ ಕ್ರೀಡಾಧಿಕಾರಿ ಈ ಮಾಹಿತಿಉನ್ನು ಪೊಲೀಸರಿಗೆ ನೀಡಿದ್ದಾರೆ. ಮೃತ ವ್ಯಕ್ತಿಯನ್ನು 30 ವರ್ಷದ ಉನ್ನಿಕೃಷ್ಣನ್ ನಾಯರ್ ಎಂದು ಗುರುತಿಸಲಾಗಿದೆ. 2021ರ ಏಪ್ರಿಲ್‌ನಲ್ಲಿ ಬಿ. ಟೆಕ್ ಪೂರೈಸಿದ ಅವರು, ಪ್ರಾಜೆಕ್ಟ್ ಅಸೋಸಿಯೇಟ್ ಹಾಗೂ ಅತಿಥಿ ಉಪನ್ಯಾಸಕರಾಗಿ ಐಐಟಿ ಮದ್ರಾಸ್‌ಗೆ ಸೇರಿದ್ದರು.
ಬೆಳಗ್ಗೆ ಕೇರಳದಿಂದ ಮರಳಿದ್ದರು
ಮಾಧ್ಯಮ ವರದಿಯನ್ವಯ ಅವರು ಗುರುವಾರ ಬೆಳಗ್ಗೆ ಕೇರಳದಿಂದ ಕ್ಯಾಂಪಸ್‌ಗೆ ಮರಳಿದ್ದರು. ಆದರೆ ಹಾಕಿ ಮೈದಾನಕ್ಕೆ ಆಡಲು ಬಂದ ಕೆಲ ವಿದ್ಯಾರ್ಥಿಗಳು ಅವರ ಶವ ಕಂಡು ದಂಗಾಗಿದ್ದಾರೆ. ಕೊಟ್ಟೂರ್‌ಪುರಂ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು, ಆಸ್ಪತ್ರೆಗೆ ಕಳುಹಿಸಿದ್ದಾರೆ.
ಮೃತನ ತಂದೆ ಇಸ್ರೋ ಉದ್ಯೋಗಿ
ಉನ್ನಿಕೃಷ್ಣನ್‌ರವರ ತಂದೆ ಇಸ್ರೋ ಉದ್ಯೋಗಿಯಾಗಿದ್ದಾರೆ. ಇನ್ನು ಉನ್ನಿಕೃಷ್ಣನ್‌ರವರ ಕೋಣೆಯಲ್ಲಿ ಹನ್ನೊಂದು ಪುಟಗಳ ಡೆತ್‌ನೋಟ್ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಕ್ಷನ್ 174 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ