
ಮುಜಾಫರ್‌ನಗರ್(ನ.27): ಕೋಮುಗಲಭೆಗಳಿಗೆ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶದ ಮುಜಫರ್‌ನಗರ್‌ದಲ್ಲಿ, ಈ ಬಾರಿ ಕೋಮು ಸೌಹಾರ್ದತೆಯ ಸಂದೇಶ ವಿನಿಮಯವಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ಇಲ್ಲಿನ 70 ವರ್ಷದ ಸಿಖ್ ವ್ಯಕಕ್ತಿಯೋರ್ವ ಮುಸ್ಮಿಂ ಭಾಂಧವರಿಗೆ ಮಸೀದಿ ಕಟ್ಟಲು ತಮ್ಮ ಸ್ವಂತ ಜಾಗವನ್ನು ಬಿಟ್ಟುಕೊಡುವ ಮೂಲಕ ಸೌಹಾರ್ದತೆಯ ಸಂದೇಶ ರವಾನಿಸಿದ್ದಾರೆ.
ಬಾಬರ್ ಅಯೋಧ್ಯೆ(5 ಎಕರೆ)ಯಲ್ಲೇ ಇರಲಿದ್ದಾನೆ: ಸಹೋದರರ ನಂಬಿಕೆ ಮುಖ್ಯ ಎಂದ ಸುಪ್ರೀಂ!
ಸಿಖ್‌ರ ಧರ್ಮಗುರು ಗುರುನಾನಕ್ ದೇವ್ ಅವರ 550ನೇ ಜನ್ಮ ಜಯಂತಿ ಅಂಗವಾಗಿ, ಸಾಮಾಜಿಕ ಕಾರ್ಯಕರ್ತ ಸುಖ್‌ಪಾಲ್ ಸಿಂಗ್ ಬೇಡಿ ಮುಸ್ಲಿಂ ಭಾಂಧವರಿಗೆ ಮಸೀದಿ ಕಟ್ಟಲು ತಮ್ಮ ಸ್ವಂತ ಜಾಗ ನೀಡಿದ್ದಾರೆ.
ಅಯೋಧ್ಯೆ ತೀರ್ಪು: ರಾಮಜನ್ಮಭೂಮಿ ಸನಿಹ ಮಸೀದಿಗಿಲ್ಲ ಜಾಗ?
900 ಚದರ ಅಡಿ ಸ್ವಂತ ಜಾಗವನ್ನು ಪುರ್ಕಾಜಿ ನಗರ ಪಂಚಾಯ್ತಿ ಮುಖ್ಯಸ್ಥ ಜಹೀರ್ ಫಾರೂಖಿ ಅವರಿಗೆ ಸುಖ್‌ಪಾಲ್ ಸಿಂಗ್ ಬೇಡಿ ಹಸ್ತಾಂತರಿಸುವ ಮೂಲಕ ಸೌಹಾರ್ದತೆ ಮೆರೆದರು.
ಇನ್ನು ಜಾಗವನ್ನು ಸ್ವೀಕರಿಸಿರುವ ಮುಸ್ಲಿಂ ಭಾಂಧವರು ಮಸೀದಿ ಜೊತೆ ಜೊತೆಗೆ ಸಮಾಜದಲ್ಲಿ ಸೌಹಾರ್ದತೆಯನ್ನು ಕಟ್ಟುವ ವಾಗ್ದಾನ ಮಾಡಿದರು.
ಅಯೋಧ್ಯೆ ಹೊರ ಭಾಗದಲ್ಲಿ ಮಸೀದಿಗೆ ಜಾಗ ನೀಡಿ, ಸರ್ಕಾರಕ್ಕೆ ವಿಹಿಂಪ ಒತ್ತಾಯ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ