ಪದ್ಮ ಪ್ರಶಸ್ತಿ ಸ್ವೀಕರಿಸುವ ಮೊದಲು ಪ್ರಧಾನಿ ಮೋದಿ ಬಳಿ ತೆರಳಿ ಭಾವುಕರಾದ ಸಿದ್ದಿ ಮಹಿಳೆ ಹೀರಾಬಾಯಿ!

By Suvarna NewsFirst Published Mar 22, 2023, 7:42 PM IST
Highlights

ಸಿದ್ದಿ ಬುಡಕಟ್ಟು ಜನಾಂಗದ ನಾಯಕಿ ಹೀರಾಬಾಯಿ ಇಬ್ರಾಹಿಂ ಲೊಬಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಮೊದಲು ಪ್ರಧಾನಿ ಮೋದಿ ಬಳಿ ತೆರಳಿ ಭಾವುಕರಾಗಿದ್ದಾರೆ. ಮೋದಿಗೆ ಧನ್ಯವಾದ ತಿಳಿಸಿದ ಹೀರಾಬಾಯಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
 

ನವದೆಹಲಿ(ಮಾ.22): ಪದ್ಮ ಪ್ರಶಸ್ತಿ ಪ್ರಧಾನದ ವೇಳೆ ಕೆಲವು ಶಿಷ್ಠಾಚಾರಗಳಿವೆ. ಹೆಸರು ಘೋಷಿಸಿದಾಗ ರಾಷ್ಟ್ರಪತಿ ಬಳಿ ಬಂದು ಪ್ರಶಸ್ತಿ ಸ್ವೀಕರಿಸಬೇಕು. ಬಳಿಕ ಸೂಚಿಸಿದ ರೀತಿಯಲ್ಲೇ ಮರಳಿ ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳಬೇಕು. ಆದರೆ ಗುಜರಾತ್‌ನ ಸಿದ್ದಿ ಬುಡುಕಟ್ಟು ನಾಯಕಿ ಹೀರಾಬಾಯಿ ಇಬ್ರಾಹಿಂ ಲೊಬಿ ಎಲ್ಲಾ ಸಂಪ್ರದಾಯ ಮುರಿದು ಹೆಸರು ಕೂಗಿದಾಗ ರಾಷ್ಟ್ರಪತಿ ಬಳಿ ತೆರಳದೇ ಪ್ರಧಾನಿ ನರೇಂದ್ರ ಮೋದಿ ಬಳಿ ತೆರಳಿದ್ದಾರೆ. ಬಳಿಕ ನಮ್ಮಂತವನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಭಾವುಕರಾದ ಹೀರಾಬಾಯಿ ಮಾತನಾಡುತ್ತಲೇ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಗುಜರಾತ್‌ನ ಜುನಾಘಡ ಜಿಲ್ಲೆಯ ಜಂಬೂರು ಗ್ರಾಮದ ನಿವಾಸಿಯಾಗಿರುವ ಹೀರಾಬಾಯಿ, ಸಿದ್ಧಿ ಬುಡಕಟ್ಟು ಜನಾಂಗಕ್ಕೆ ಶಿಕ್ಷಣ ಸೇರಿದಂತೆ ಇತರ ಸೌಲಭ್ಯ ಒದಗಿಸುವ ಮೂಲಕ, ಸಿದ್ದು ಜನಾಂಗವನ್ನು ಅಭಿವೃದ್ಧಿ ಶ್ರಮಿಸಿದ್ದಾರೆ. ಇವರ ಅವಿರತ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಶಶ್ತಿ ಸ್ವೀಕರಿಸಲು ಆಗಮಿಸಿದ ಹೀರಾಬಾಯಿ ಇಬ್ರಾಹಿಂ ಲೊಬಿ ಇದೀಗ ಎಲ್ಲರ ಗಮನಸೆಳೆದಿದ್ದಾರೆ.

ಎಸ್‌ಎಮ್ ಕೃಷ್ಣ ಸೇರಿ 106 ಮಂದಿಗೆ ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ ಮುರ್ಮು!

ಪದ್ಮಶ್ರೀ ಪ್ರಶಸ್ತಿಗಾಗಿ ಹೀರಾಬಾಯಿ ಹೆಸರು ಘೋಷಿಸಲಾಗಿದೆ. ವಯಸ್ಸು, ಆರೋಗ್ಯದ ಕಾರಣ ಸಿಬ್ಬಂದಿಗಳು ಹೀರಾಬಾಯಿ ಕೈಹಿಡಿದು ರಾಷ್ಟ್ರಪತಿ ಬಳಿ ಕರೆತರುತ್ತಿದ್ದರು. ಈ ವೇಳೆ ಹೀರಾಬಾಯಿ ನೇರವಾಗಿ ಪ್ರಧಾನಿ ಮೋದಿ ಬಳಿ ತೆರಳಿದ್ದಾರೆ. ಬಳಿಕ ಹಳ್ಳಿಯ ಮೂಲೆಯಲ್ಲಿದ್ದ ನಮ್ಮನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ತಮ್ಮ ಮಾತಿನ ನಡುವೆ ಹೀರಾಬಾಯಿ ಭಾವುಕರಾಗಿದ್ದಾರೆ. ಹೀರಾಬಾಯಿ ಒಂದೊಂದು ಮಾತಿಗೂ ಗೃಹ ಸಚಿವ ಅಮಿತ್ ಶಾ, ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಕೇಂದ್ರ ಸರ್ಕಾರದ ಸಚಿವರು ಹಾಗೂ ನೆರೆದಿದ್ದ ಗಣ್ಯರು ಚಪ್ಪಾಳೆ ತಟ್ಟಿದರು.

 

| Hailing from the Siddi tribe, Hirbai Ibrahim Lobi receives the Padma Shri award from President Droupadi Murmu. She works for the upliftment and development of the Siddi tribal community. pic.twitter.com/OBQy4Yh4ON

— ANI (@ANI)

 

ಮಾತನಾಡುತ್ತಲೇ ಕಣ್ಣೀರಿಟ್ಟ ಹೀರಾಬಾಯಿ ಇಬ್ರಾಹಿಂ ಲೊಬಿ, ಬಳಿಕ ರಾಷ್ಟ್ರಪತಿ ಬಳಿ ತೆರಳಿ ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಿದರು. ಶಿಕ್ಷಣ ಸೇರಿದಂತೆ ಯಾವ ಸೌಲಭ್ಯವೂ ಇಲ್ಲದೆ ಅವಕಾಶ ವಂಚಿತ ಸಿದ್ದಿ ಜನಾಂಗದವನ್ನು ಮುಖ್ಯವಾಹಿನಿಗೆ ತರಲು ಹೀರಾಬಾಯಿ ಇಬ್ರಾಹಿಂ ಲೋಧಿ ಅವಿರತ ಪರಿಶ್ರಮ ಪಟ್ಟಿದ್ದಾರೆ. ಸುಮಾರು 700ಕ್ಕೂ ಹೆಚ್ಚು ಮಹಿಳೆಯರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಅವರ ಬದುಕು ಹಸನಾಗಿಸಲು ಶ್ರಮಿಸಿದ್ದಾರೆ.

ಕೃಷಿ ಕ್ಷೇತ್ರದ 12 ಸಾಧಕರಿಗೆ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ರೈತ ರತ್ನ ಪ್ರಶಸ್ತಿ ಪ್ರದಾನ

ಹೀರಾಬಾಯಿ ಇಬ್ರಾಹಿಂ ಲೊಬಿ ಆಫ್ರಿಕಾ ಮೂಲದ ಸಿದ್ದಿ ಬುಡುಕಟ್ಟು ಜನಾಂಗದವರು.  ಗುಜರಾತ್‌ನ ಗಿರ್ ಅರಣ್ಯ ಬಳಿ ಇರುವ ಜಂಬೂರ್ ಗ್ರಾಮದಲ್ಲಿ ನೆಲೆಸಿರುವ ಸಿದ್ದಿ ಬುಡಕಟ್ಟ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ದುಡಿದ ನಾಯಕಿ. ಇದೀಗ ಸರ್ಕಾರದಿಂದ ಹಲವು ಸೌಲಭ್ಯಗಳು ಸಿದ್ದಿ ಜನಾಂಗಕ್ಕೆ ನೀಡಲಾಗಿದೆ. ಆದರೆ ಸರ್ಕಾರದಿಂದ ಯಾವುದೇ ಸೌಲಭ್ಯವಿಲ್ಲದ ಸಮಯದಲ್ಲಿ ಬುಡುಕಟ್ಟು ಸಮುಯಾದ ಅಭಿವೃದ್ಧಿ ನಿಂತವರು ಹೀರಾಬಾಯಿ ಇಬ್ರಾಹಿಂ ಲೊಬಿ. ಭಾರತದ ಹೆಮ್ಮೆಯ ಏಷ್ಯನ್ ಸಿಂಹ ಎಂದು ಇವರನ್ನು ಕರೆಯುತ್ತಾರೆ.

click me!