Shubhanshu Shukla: ಭಾರತೀಯ ಶುಭಾಂಶು ನಾಳೆ ಅಂತರಿಕ್ಷಕ್ಕೆ: ಹೊಸ ಇತಿಹಾಸ!

Kannadaprabha News   | Kannada Prabha
Published : Jun 09, 2025, 06:42 AM ISTUpdated : Jun 09, 2025, 10:20 AM IST
Shubhanshu Shukla

ಸಾರಾಂಶ

ಆ್ಯಕ್ಸಿಯೋಂ-4 ಯೋಜನೆಯ ಭಾಗವಾಗಿ ಶುಭಾಂಶು ಶುಕ್ಲಾ ಜೂ.10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. 40 ವರ್ಷಗಳಲ್ಲಿ ಅಂತರಿಕ್ಷಕ್ಕೆ ತೆರಳುತ್ತಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 

ನವದೆಹಲಿ (ಜೂ.8): ಆ್ಯಕ್ಸಿಯೋಂ-4 ಯೋಜನೆಯ ಭಾಗವಾಗಿ ಭಾರತೀಯ ಶುಭಾಂಶು ಶುಕ್ಲಾ, ಜೂ.10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಇದರೊಂದಿಗೆ 40 ವರ್ಷಗಳಿಕ ಅಂತರಿಕ್ಷ ಯಾತ್ರೆ ಕೈಗೊಳ್ಳುತ್ತಿರುವ ಮೊದಲ ಭಾರತೀಯ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುತ್ತಿರುವ ಮೊದಲ ಭಾರತೀಯ ಎಂಬ ಹಿರಿಮೆಗೆ ಅವರು ಪಾತ್ರರಾಗಲಿದ್ದಾರೆ. 1984ರಲ್ಲಿ ರಾಕೇಶ್‌ ಶರ್ಮಾ, ರಷ್ಯಾದ ಸೂಯೆಜ್‌ ನೌಕೆಯಲ್ಲಿ ಅಂತರಿಕ್ಷ ಪ್ರವಾಸ ಕೈಗೊಂಡು ಇತಿಹಾಸ ನಿರ್ಮಿಸಿದ್ದರು.

ಭಾರತೀಯ ಕಾಲಮಾನ ಮಂಗಳವಾರ ಸಂಜೆ 5:52ಕ್ಕೆ ಅಮೆರಿಕದ ಫ್ಲೋರಿಡಾದಿಂದ ಸ್ಪೇಸೆಕ್ಸ್‌ನ ಫಾಲ್ಕನ್‌ 9 ರಾಕೆಟ್‌ ಮೂಲಕ ಶುಕ್ಲಾ ಮತ್ತು ಇತರೆ ಮೂವರು ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ.

ಈ ಬಗ್ಗೆ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಶುಕ್ಲಾ,‘ಇಂಥ ದೊಡ್ಡ ಯೋಜನೆಯ ಭಾಗಿರುವುದಕ್ಕೆ ತುಂಬಾ ಅದೃಷ್ಟಶಾಲಿ ಎನಿಸುತ್ತಿದೆ. ಈ ಪಯಣವು ತುಂಬಾ ಖುಷಿ ನೀಡುತ್ತಿದೆ ಎಂದು ಹೇಳಿದ್ದಾರೆ. ಜೊತೆಗೆ ನಾನು ಭಾಗವಾಗಿರುವ ಈ ಯೋಜನೆಗೆ ನನ್ನ ಪಾಲಿಗೆ ಅತ್ಯಂತ ದೊಡ್ಡ ಯೋಜನೆಯಾಗಿದೆ. ನಾನು ಇಲ್ಲಿಗೆ ಬರುತ್ತೇನೆ ಎಂಬುದೇ ಗೊತ್ತಿಲ್ಲದಾಗ, ಈ ಕ್ಷಣದಲ್ಲಿ ನಿಂತಿರುವುದು ತುಂಬಾ ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಒಂದೇ ದಿನ 2 ಬಾರಿ ಪ್ರಜ್ಞೆ ತಪ್ಪಿದ ಧನಕರ್‌ : ದಿಲ್ಲಿ ಏಮ್ಸ್‌ಗೆ ದಾಖಲು
ಪೌರೋಹಿತ್ಯ ಮಾಡಿಕೊಂಡು ಹೆಂಡ್ತಿ ಕನಸಿಗೆ ಜೀವ ತುಂಬಿದ ಗಂಡನಿಗೆ ಡಿವೋರ್ಸ್ ಭಾಗ್ಯ ನೀಡಿದ ಸಬ್‌ ಇನ್ಸ್‌ಪೆಕ್ಟರ್‌