
ಬೆಂಗಳೂರು (ಜ.22): ಶತಮಾನಗಳ ಕಾಲ ನಡೆಸಿದ್ದ ಹೋರಾಟದ ಫಲವಾಗಿ ಕೊನೆಗೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಮರು ನಿರ್ಮಾಣವಾಗಿದೆ. ಮಂದಿರದ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. 2019ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ರಚಿತವಾಗಿದ್ದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಅಂದಿನಿಂದ ಇಡೀ ಮಂದಿರದ ವಿಚಾರದಲ್ಲಿ ಬಹಳ ಮುತುವರ್ಜಿಯಿಂದ ಕೆಲಸ ಮಾಡಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆದ ಬಳಿಕ ಮೊದಲ ಬಾರಿಗೆ ದೇವಸ್ಥಾನ ಟ್ರಸ್ಟ್ ಗರ್ಭಗುಡಿಯ ಒಳಗಿನ ಪ್ರಭು ಶ್ರೀರಾಮನ ಚಿತ್ರವನ್ನು ಪ್ರಕಟ ಮಾಡಿದೆ. ಇದಕ್ಕೆ ಹಿಂದಿಯಲ್ಲಿ ಶೀರ್ಪಿಕೆ ಬರೆದಿದ್ದು, 'ನಿನ್ನ ಕರುಣೆ ಇರಲಿ ಪ್ರಭು..' ಎನ್ನುವ ಸಾಲನ್ನು ಬರೆದಿದೆ. ದೇವಸ್ಥಾನದ ಟ್ವಿಟರ್ ಪೇಜ್ ಹಂಚಿಕೊಂಡ ಈ ಫೋಟೋವನ್ನು ಈವರೆಗೂ 3.66 ಲಕ್ಷ ಮಂದಿ ನೋಡಿದ್ದಾರೆ. 46 ಸಾವಿರ ಮಂದಿ ಲೈಕ್ ಒತ್ತಿದ್ದರೆ. 11 ಸಾವಿರ ಮಂದಿ ರೀಟ್ವೀಟ್ ಮಾಡಿದ್ದಾರೆ. 1 ಸಾವಿರಕ್ಕೂ ಅಧಿಕ ಕಾಮೆಂಟ್ಸ್‌ಗಳು ಬಂದಿವೆ. ಹೆಚ್ಚಿನ ಕಾಮೆಂಟ್ಸ್‌ಗಳಲ್ಲಿ ಶ್ರೀರಾಮನ ಹೊಸ ಮೂರ್ತಿಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ