Krishna Birthplace dispute: ಮಥುರಾದಲ್ಲಿ ತೀವ್ರ ಕಟ್ಟೆಚ್ಚರ

By Suvarna NewsFirst Published Dec 5, 2021, 11:56 AM IST
Highlights

ಮಥುರಾದಲ್ಲಿ ಶ್ರೀಕೃಷ್ಣನ ಪ್ರತಿಮೆ ಸ್ಥಾಪನೆಗೆ ಮುಂದಾದ ಹಿಂದೂ ಮಹಾಸಭಾ

ಬಾಬ್ರಿ ಮಸೀದಿ ಧ್ವಂಸ ಸ್ಮರಣಾರ್ಥ ಶ್ರೀಕೃಷ್ಣನ ಮೂರ್ತಿ ಸ್ಥಾಪನೆಗೆ ನಿರ್ಧಾರ

ಆಡಳಿತದಿಂದ ಅವಕಾಶ ನಿರಾಕರಣೆ, ಅಹಿತಕರ ಘಟನೆ ನಡೆಯದಂತೆ ಭಾರೀ ಕಟ್ಟೆಚ್ಚರ

ನವದೆಹಲಿ(ಡಿ.6): ಅಖಿಲ ಭಾರತ ಹಿಂದೂ ಮಹಾಸಭಾವು ಡಿಸೆಂಬರ್ 6 ರಂದು ಮಥುರಾದ ಶಾಹಿ ಈದ್ಗಾದಲ್ಲಿ ಜಲಾಭಿಷೇಕ  ಮಾಡಿ ಅಲ್ಲಿ ಶ್ರೀಕೃಷ್ಣ ಮೂರ್ತಿಯನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿದ ಹಿನ್ನೆಲೆ ಇಂದು ನಗರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಬಾಬ್ರಿ ಮಸೀದಿಯಡಿ ರಾಮಜನ್ಮ ಭೂಮಿ ಇರುವ ನಂಬಿಕೆಯಡಿ 1992ರ ಡಿಸೆಂಬರ್  6 ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಲಾಗಿತ್ತು. ಈ ಘಟನೆ ನಡೆದು  29 ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇದರ ಸ್ಮರಣಾರ್ಥವಾಗಿ ಇಂದು ಶ್ರೀಕೃಷ್ಣ ಜನ್ಮಸ್ಥಾನ ಎಂಬ ಉಲ್ಲೇಖವಿರುವ ಮಥುರಾದಲ್ಲಿ ಜಲಾಭಿಷೇಕ ನಡೆಸಿ ಶ್ರೀ ಕೃಷ್ಣಮೂರ್ತಿಯನ್ನು ಪ್ರತಿಷ್ಠಾಪಿಸುವುದಾಗಿ ಈ ಹಿಂದೆ ಹಿಂದೂ ಮಹಾಸಭಾ ಘೋಷಣೆ ಮಾಡಿತ್ತು. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಿರುವಂತೆ ಮಥುರಾದ ಶಾಹಿ ಈದ್ಗಾ ಬಳಿ ಭದ್ರತೆ ಹೆಚ್ಚಿಸಲಾಗಿದೆ. 

ಅಖಿಲ ಭಾರತ ಹಿಂದೂ ಮಹಾಸಭಾ, ಶ್ರೀಕೃಷ್ಣ ಜನ್ಮಭೂಮಿ ನಿರ್ಮಾಣ ನ್ಯಾಸ್, ನಾರಾಯಣಿ ಸೇನೆ ಮತ್ತು ಶ್ರೀಕೃಷ್ಣ ಮುಕ್ತಿ ದಳ ಎಂಬ  ನಾಲ್ಕು ಬಲಪಂಥೀಯ ಗುಂಪುಗಳು ಈ ಹಿಂದೆ  ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಕೋರಿದ್ದವು. ಹಿಂದೂಗಳ ನಂಬಿಕೆಯಂತೆ ಭಗವಾನ್‌ ಶ್ರೀಕೃಷ್ಣನ ಜನ್ಮಸ್ಥಾನವಾದ ಮಥುರಾವನ್ನು 4 ಸೂಪರ್ ವಲಯಗಳು, 4 ವಲಯಗಳು ಮತ್ತು 8 ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾವು ಶ್ರೀಕೃಷ್ಣನ ನಿಜವಾದ ಜನ್ಮಸ್ಥಳದಲ್ಲಿ ಕೃಷ್ಣನ ವಿಗ್ರಹವನ್ನು ಸ್ಥಾಪಿಸಲು ಅನುಮತಿ ಕೇಳಿದೆ. ಅದು ಶಾಹಿ ಈದ್ಗಾದಲ್ಲಿದೆ ಎಂದು ಈ ಸಂಘಟನೆಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ 7ರವರೆಗೆ ಶ್ರೀಕೃಷ್ಣ ಜನ್ಮಭೂಮಿ ಹಾಗೂ ಶಾಹಿ ಈದ್ಗಾ ಮಸೀದಿಗೆ ಹೋಗುವ ರಸ್ತೆಯಲ್ಲಿ ಯಾವುದೇ ವಾಹನಗಳು ಪ್ರಯಾಣಿಸುವುದಕ್ಕೆ ಅನುಮತಿ ನಿರಾಕರಿಸಲಾಗಿದೆ. 

Mathura: ಮಸೀದೀಲಿ ಕೃಷ್ಣ ವಿಗ್ರಹ ಸ್ಥಾಪನೆ ಘೋಷಣೆ : ನಿಷೇಧಾಜ್ಞೆ ಜಾರಿ!

2000 ಕ್ಕೂ ಹೆಚ್ಚು ಅರೆಸೇನಾ ಪಡೆಯ ಸಿಬ್ಬಂದಿ ಭದ್ರತಾ ಕರ್ತವ್ಯದಲ್ಲಿದ್ದು, ಅಲ್ಲದೇ ಗುಪ್ತಚರ ಸಂಸ್ಥೆಗಳು, ವದಂತಿಗಳನ್ನು ಹರಡುವ ಮತ್ತು ಶಾಂತಿ ಕದಡಲು ಯೋಜಿಸುವವರ ಮೇಲೆ ಕಣ್ಣಿಟ್ಟಿವೆ. ಭದ್ರತಾ ವ್ಯವಸ್ಥೆಯ ಭಾಗವಾಗಿ ನಗರದ ಪೊಲೀಸ್ ಲೈನ್ ನಲ್ಲಿ ಶನಿವಾರ ಕವಾಯತು ಹಾಗೂ ಕಾಲ್ನಡಿಗೆ ಜಾಥಾ ನಡೆಸಲಾಗಿತ್ತು.
ಇಂದಿನಿಂದ  ಡಿ.7ರ ಸಂಜೆವರೆಗೆ ಜನ್ಮಭೂಮಿ–ಡಿಂಗ್ ಗೇಟ್ ಕಡೆಗೆ ಯಾವುದೇ ವಾಹನ ಹೋಗಲು ಅವಕಾಶ ಇರುವುದಿಲ್ಲ. ಗೋವರ್ಧನ ಇಂಟರ್‌ ಸೆಕ್ಷನ್‌ನಿಂದ ( Govardhan intersection) ಯಾವುದೇ ಭಾರೀ ವಾಹನಗಳು ನಗರ ಪ್ರವೇಶಿಸುವಂತಿಲ್ಲ. ಮಸಾನಿಯಿಂದ ಡಿಂಗ್ ಗೇಟ್ ಅಥವಾ ಭೂತೇಶ್ವರಕ್ಕೆ ಹೋಗಬೇಕಾದ ಯಾವುದೇ ವಾಹನವು ಮಸಾನಿ(Masani)ಯಿಂದ ಗೋಕುಲ್ ರೆಸ್ಟೋರೆಂಟ್(Gokul Restaurant) ಮೂಲಕ ಸಾಗಿ ಗೋವರ್ಧನ್ ಚೌರಾಹಾ ಮೂಲಕ ಭೂತೇಶ್ವರ(Bhuteshwar)ಕ್ಕೆ ಹೋಗಬೇಕಾಗುವುದು.

Krishna Janmabhoomi: ಅಯೋಧ್ಯೆ ಆಯ್ತು, ಇದೀಗ ಮಥುರೆ ಸಿದ್ಧತೆ: UP ಡಿಸಿಎಂ ಕೇಶವ ಪ್ರಸಾದ್‌ ಮೌರ್ಯ!

ಭರತ್‌ಪುರ ಗೇಟ್‌ನಿಂದ ಡಿಂಗ್ ಗೇಟ್‌ವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಮತ್ತು ಯಾವುದೇ ನಾಲ್ಕು ಚಕ್ರದ ವಾಹನಗಳು ಅಥವಾ ಭಾರಿ ಗಾತ್ರದ ವಾಹನಗಳು ಧೌಲಿ ಪಯೌ(Dhauli Pyau)ದಿಂದ ಸ್ಟೇಟ್ ಬ್ಯಾಂಕ್ ಇಂಟರ್‌ಸೆಕ್ಷನ್‌ಗೆ ಹೋಗಲು ಅವಕಾಶವಿಲ್ಲ. ಕತ್ರಾ ಕೇಶವ್ ದೇವ್ ದೇವಸ್ಥಾನ ಮತ್ತು ಶಾಹಿ ಈದ್ಗಾ ಇರುವ ಪ್ರದೇಶವನ್ನು ರೆಡ್‌ ಜೋನ್‌ ಎಂದು ಗುರುತಿಸಲಾಗಿದ್ದು,  ಅಲ್ಲಿ ಅತ್ಯಧಿಕ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಥುರಾಕ್ಕೆ ಪ್ರವೇಶಿಸುವ ಪ್ರತಿ ಪ್ರವೇಶ ದ್ವಾರಗಳಲ್ಲಿ ಸಾಕಷ್ಟು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಗ್ರೋವರ್ (Gaurav Grover)ತಿಳಿಸಿದ್ದಾರೆ. ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿ ಮಥುರಾದಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿದೆ. . ಒಂದು ಪ್ರದೇಶದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನ ಸೇರುವುದನ್ನು  ನಿಷೇಧಿಸಲಾಗಿದೆ. 

click me!