SHOCKING: ಚಿಕನ್ ಬಿರಿಯಾನಿಯಲ್ಲಿ ಸತ್ತ ಕಪ್ಪೆ ಪ್ರತ್ಯಕ್ಷ! ಹೈದರಾಬಾದ್ ಐಐಐಟಿ ವಿದ್ಯಾರ್ಥಿಗಳು ಆಕ್ರೋಶ!

By Ravi Janekal  |  First Published Oct 20, 2024, 5:41 PM IST

ಹೈದರಾಬಾದ್‌ನ ಐಐಐಟಿ ಮೆಸ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡಿದ್ದ ಚಿಕನ್ ಬಿರಿಯಾನಿಯಲ್ಲಿ ಸತ್ತ ಕಪ್ಪೆ ಪತ್ತೆಯಾಗಿರುವುದು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.


Trending video : ಹೈದರಾಬಾದ್‌ನ ಐಐಐಟಿ ಮೆಸ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡಿದ್ದ ಚಿಕನ್ ಬಿರಿಯಾನಿಯಲ್ಲಿ ಸತ್ತ ಕಪ್ಪೆ ಪತ್ತೆಯಾಗಿರುವುದು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. 

ಬಿರಿಯಾನಿಯಲ್ಲಿ ಸತ್ತ ಕಪ್ಪೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ವೈರಲ್ ಆಗುತ್ತಿವೆ. ಇದೇ ತಿಂಗಳ 16ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ, ಈ ವಿಷಯವನ್ನು ತೆಲಂಗಾಣ ಆಹಾರ ಸುರಕ್ಷತಾ ಆಯುಕ್ತರ ಗಮನಕ್ಕೂ ತರಲಾಗಿದೆ. 

Latest Videos

undefined

ಕಣ ಕಣದಲ್ಲೂ ಕೇಸರಿ; ವಿಮಲ್‌ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಮರಿ!

'ಇಂದು ಕದಂಬ ಮೆಸ್‌ನಲ್ಲಿ (ಐಐಐಟಿ ಹೈದರಾಬಾದ್) ನನ್ನ ಸ್ನೇಹಿತನ ಊಟದಲ್ಲಿ ಕಪ್ಪೆ ಕಂಡುಬಂದಿದೆ. ಇದನ್ನು ಒಪ್ಪಲಾಗದು ಮತ್ತು ಗಂಭೀರವಾದ ಆರೋಗ್ಯದ ಅಪಾಯವನ್ನು ಉಂಟುಮಾಡುತ್ತದೆ ಎಂದು @cfs_telangana , ದಯವಿಟ್ಟು ತಕ್ಷಣ ಕ್ರಮ ತೆಗೆದುಕೊಳ್ಳಿ ಎಂದು ಟ್ವಿಟರ್ ಎಕ್ಸ್‌ ನಲ್ಲಿ ಬರೆದುಕೊಂಡಿರುವ ವಿದ್ಯಾರ್ಥಿ

Shocked and horrified! Found a frog in my friend's meal today at Kadamba Mess (IIIT Hyderabad). This is completely unacceptable and poses a serious health risk! , please take immediate action! pic.twitter.com/VCCKM0kuob

— ram manohar (@manoharrocksss)

ವಿದ್ಯಾರ್ಥಿಗಳು ಆಕ್ರೋಶ:

ವಿದ್ಯಾರ್ಥಿಗಳು ಹೇಳುವಂತೆ, ಗಚ್ಚಿಬೌಲಿ ಐಐಐಟಿಯಲ್ಲಿನ ಕದಂಬ ಮೆಸ್‌ನಲ್ಲಿ ನಡೆದಿರುವ ಘಟನೆ. ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಚಿಕನ್ ಬಿರಿಯಾನಿ ನೀಡಲಾಗಿತ್ತು. ಈ ವೇಳೆ ತಟ್ಟೆಯಲ್ಲಿ ಬಡಿಸುವಾಗ ಸತ್ತ ಕಪ್ಪೆ ಪತ್ತೆಯಾಗಿದೆ. ಸತ್ತ ಕಪ್ಪೆ ನೋಡುತ್ತಿದ್ದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಮೆಸ್ ವ್ಯವಸ್ಥಾಪಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

click me!