ಉತ್ತರ ಪ್ರದೇಶ ಚುನಾವಣೆ, ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆ!

By Suvarna NewsFirst Published Sep 12, 2021, 12:20 PM IST
Highlights

* 2022 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಸಾಮಾನ್ಯ ಚುನಾವಣೆ

* ಉತ್ತರ ಪ್ರದೇಶದ ಚುನಾವಣಾ ಅಖಾಡಕ್ಕೆ ಶಿವಸೇನಾ ಎಂಟ್ರಿ

* 403 ಸ್ಥಾನಗಳಲ್ಲಿ ಸ್ಪರ್ಧಿಸಲು ತೀರ್ಮಾನ

* ಉತ್ತರ ಪ್ರದೇಶ ಶಿವಸೇನಾ ಘಟಕದಿಂದ ತೀರ್ಮಾನ
 

ಲಕ್ನೋ(ಸೆ.12): ಭಾರೀ ಕುತೂಹಲ ಸೃಷ್ಟಿಸಿರುವ ಉತ್ತರ ಪ್ರದೇಶ ಚುನಾವಣೆಗೆ ಇನ್ನು ಒಂದೇ ವರ್ಷ. ಹೀಗಿರುವಾಗ ರಾಜಕೀಯ ಪಪಕ್ಷಗಳೆಲ್ಲವೂ ಮತದಾರರನ್ನು ಸೆಳೆಯುವ ಯತ್ನಕ್ಕಿಳಿದಿದ್ದಾರೆ. ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಬಂದಿದ್ದು ಉತ್ತರ ಪ್ರದೇಶ ಮತ್ತೆ ಯೋಗಿ ತೆಕ್ಕೆಗೆ ಸೇರಿಕೊಳ್ಳುವ ಸೂಚನೆ ಕೊಟ್ಟಿವೆ. ಹೀಗಿದ್ದರೂ ಅಖಿಲೇಶ್ ಯಾದವ್ ಪ್ರಬಲ ಸ್ಪರ್ಧೆ ಕೊಡುವ ಸಾಧ್ಯತೆ ಇದ್ದು ಕಮಲ ಪಾಳಯಕ್ಕೆ ಇದು ಕೊಂಚ ತಲೆನೋವು ಕೊಟ್ಟಿದೆ. ಆದರೀಗ ಈ ಆತಂಕದ ನಡುವೆ ಬಿಜೆಪಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಹೌದು 2022 ರಲ್ಲಿ ನಡೆಯಲಿರುವ ಸಾಮಾನ್ಯ ಚುನಾವಣೆಯಲ್ಲಿ ಠಾಕ್ರೆ ನೇತೃತ್ವದ ಶಿವಸೇನೆಯೂ ಸ್ಪರ್ಧಿಸಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಪಕ್ಷಗಳ ಜೊತೆ ಸೇರಿ ಅಧಿಕಾರ ಮಾಡುತ್ತಿರುವ ಶಿವಸೇನೆ ಉತ್ತರ ಪ್ರದೇಶದ ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧಿಸಲು ತೀರ್ಮಾನ ಮಾಡಿದೆ. ಈ ಮೂಲಕ ಹಿಂದು ಮತಗಳನ್ನು ವಿಭಜಿಸಿ, ಬಿಜೆಪಿಗೆ ಠಕ್ಕರ್ ಕೊಡಲು ಪ್ಲಾನ್ ಮಾಡಿದೆ.

ಉತ್ತರ ಪ್ರದೇಶದಲ್ಲಿ ಶಿವಸೇನೆ ಸ್ಪರ್ಧೆ ಬಿಜೆಪಿಗೆ ಪ್ರಮುಖ ಸವಾಲಾಗಲಿದೆ. ಸಮಾಜವಾದಿ ಪಕ್ಷ ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡುವ ಮಧ್ಯೆ ಠಾಕ್ರೆ ನೇತೃತ್ವದ ಈ ಪಕ್ಷದ ಸ್ಪರ್ಧೆ ಕಮಲ ಪಾಳಯಕ್ಕೆ ನಿಜಕ್ಕೂ ಅಗ್ನಿಪರೀಕ್ಷೆಯಾಗಿದೆ.

 

click me!