
ಹ್ಯಾಮಿಲ್ಟನ್(ಸೆ.12): ಅವಧಿಪೂರ್ವ ಚುನಾವಣೆ ಘೋಷಿಸಿ, ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋಗೆ ಭಾರೀ ಹಿನ್ನಡೆ ಆಗುವ ಲಕ್ಷಣ ಗೋಚರಿಸಿದೆ. ಇತ್ತೀಚಿನ ಸಮೀಕ್ಷೆಗಳ ಅನ್ವಯ ಸೆ.20ರಂದು ನಡೆಯಲಿರುವ ಚುನಾವಣೆಯಲ್ಲಿ ಅವರಿಗೆ ಸೋಲು ಅನುಭವಿಸುವ ಸಾಧ್ಯತೆ ದಟ್ಟವಾಗಿದೆ.
ಇದರ ಹೊರತಾಗಿಯೂ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಟ್ರುಡೇಡ್, ‘ಚುನಾವಣೆ ಸಂಬಂಧ ಕೈಗೊಂಡ ನಿರ್ಧಾರಕ್ಕೆ ನಾನು ಪಶ್ಚಾತ್ತಾಪ ಪಡುತ್ತಿಲ್ಲ. ಜೊತೆಗೆ ಕೋವಿಡ್ ನಿರ್ವಹಿಸಿದ ರೀತಿ ನೋಡಿ ಜನ ನನ್ನ ಕೈಬಿಡುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಪ ಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಟ್ರುಡೋ ಪಕ್ಷ, ಈಗ ಪ್ರತಿ ಮಸೂದೆ ಅಂಗೀಕಾರಕ್ಕೂ ವಿಪಕ್ಷಗಳ ಬೆಂಬಲ ಪಡೆಯಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕೋವಿಡ್ ನಿಯಂತ್ರಣದ ಸಾಧನೆ ನೆರವಿಗೆ ಬರಲಿದೆ ಎಂದು ಅವರು ಅವಧಿಪೂರ್ವ ಚುನಾವಣೆ ಪ್ರಕಟಿಸಿದ್ದರು.
ಆದರೆ ಇತ್ತೀಚಿನ ಸಮೀಕ್ಷೆ ಅನ್ವಯ, ಶೇ.49ರಷ್ಟುಜನರು ಲಿಬರಲ್ ಪಕ್ಷದ ಟ್ರುಡೋ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಕನ್ಸ್‌ರ್ವೇಟಿವ್ ಪಕ್ಷದ ಎರಿನ್ ಒ’ಟೋಲೆ ಶೇ. ಟ್ರುಡೇಡುಗಿಂತ ಅಲ್ಪ ಮುನ್ನಡೆ ಸಾಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ