ಇಂದ್ರನ ಸಿಂಹಾಸನ ಕೊಟ್ಟರೂ ಬಿಜೆಪಿ ಜೊತೆ ಮೈತ್ರಿ ಇಲ್ಲ: ರಾವುತ್!

By Web DeskFirst Published Nov 22, 2019, 12:51 PM IST
Highlights

ಬಿಜೆಪಿ ಜೊತೆಗಿನ ಮೈತ್ರಿಯ ಸಾಧ್ಯತೆ ತಳ್ಳಿ ಹಾಕಿದ ಶಿವಸೇನೆ| ಯಾವುದೇ ಕಾರಣಕ್ಕೂ ಮತ್ತೆ ಎನ್’ಡಿಎ ಮೈತ್ರಿಕೂಟ ಸೇರುವುದಿಲ್ಲ ಎಂದ ಶಿವಸೇನೆ| ‘ಇಂದ್ರ ದೇವನ ಸಿಂಹಾಸನ ಕೊಟ್ಟರೂ ಬಿಜೆಪಿ ಜೊತೆ ಮೈತ್ರಿ ಇಲ್ಲ’| ಶಿವಸೇನೆ ನಾಯಕ ಸಂಜಯ್ ರಾವುತ್ ಸ್ಪಷ್ಟನೆ| ಬಿಜೆಪಿ ಜೊತೆ ಮಾತುಕತೆ ನಡೆಸುವ ಸಮಯ ಮುಗಿದಿದೆ ಎಂದ ರಾವುತ್| ಉದ್ಧವ್ ಠಾಕ್ರೆ ಸಿಎಂ ಆಗುವುದನ್ನು ಮಹಾರಾಷ್ಟ್ರದ ಜನತೆ ಬಯಸುತ್ತಿದ್ದಾರೆ| ಕಾಂಗ್ರೆಸ್-ಎನ್’ಸಿಪಿ ಮೖತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದ ರಾವುತ್|

ಮುಂಬೈ(ನ.22): ಮತ್ತೆ ಬಿಜೆಪಿ ಜೊತೆಗಿನ ಮೈತ್ರಿಯ ಸಾಧ್ಯತೆ ತಳ್ಳಿ ಹಾಕಿರುವ ಶಿವಸೇನೆ, ಯಾವುದೇ ಕಾರಣಕ್ಕೂ ಮತ್ತೆ ಎನ್’ಡಿಎ ಮೈತ್ರಿಕೂಟ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವುತ್, ಇಂದ್ರ ದೇವನ ಸಿಂಹಾಸನ ಕೊಟ್ಟರೂ ಬಿಜೆಪಿ ಜೊತೆ ನಾವು ಮೈತ್ರಿ ಬೆಳೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಾರಾಂತ್ಯಕ್ಕೆ ರಚನೆಯಾಗಲಿದೆ ಹೊಸ ಸರ್ಕಾರ: ತ್ರಿಮೂರ್ತಿಗಳ ಕನಸು ಸಾಕಾರ?

Sanjay Raut, Shiv Sena: Shiv Sena Chief Minister will be there for full 5 years. pic.twitter.com/RDt8hXCC11

— ANI (@ANI)

ಎನ್ ಸಿಪಿ-ಕಾಂಗ್ರೆಸ್ ಜೊತೆಗಿನ ಮೈತ್ರಿಯ ಪರಿಣಾಮ ಶಿವಸೇನೆಗೆ ಮುಖ್ಯಮಂತ್ರಿ ಪಟ್ಟ ದೊರೆಯಲಿದ್ದು, ಮುಂದಿನ ಐದು ವರ್ಷಗಳ ಕಾಲ ಶಿವಸೇನೆ ಅಭ್ಯರ್ಥಿಯೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ರಾವುತ್ ಪುನರುಚ್ಛಿಸಿದರು.

ಉದ್ಧವ್‌ಗೆ 5 ವರ್ಷ ಸಿಎಂ ಪಟ್ಟ: ರಾಜಿ ಸೂತ್ರ ರೆಡಿ?

ಬಿಜೆಪಿ ಜೊತೆ ಮಾತುಕತೆ ನಡೆಸುವ ಸಮಯ ಮುಗಿದಿದ್ದು, ಇಂದ್ರಲೋಕದ ಸಿಂಹಾಸನವನ್ನೇ ನೀಡುವುದಾಗಿ ಹೇಳಿದರೂ ಮೈತ್ರಿ ಸಾಧ್ಯವಿಲ್ಲ ಎಂದು ರಾವುತ್ ಕಡ್ಡಿ ತುಂಡು ಮಾಡಿದಂತೆ ಹೇಳಿದರು. 

Maharashtra: Final round of discussions today, 'Maha Vikas Aghadi' inching closer to form govt

Read story | https://t.co/grMXbppRnT pic.twitter.com/vOAnewnGpG

— ANI Digital (@ani_digital)

ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಸಿಎಂ ಆಗುವುದನ್ನು ಮಹಾರಾಷ್ಟ್ರದ ಜನತೆ ಬಯಸುತ್ತಿದ್ದು, ಅದರಂತೆ ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೖತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ರಾವುತ್ ಸ್ಪಷ್ಟಪಡಿಸಿದರು.

click me!